For Quick Alerts
  ALLOW NOTIFICATIONS  
  For Daily Alerts

  ಬ್ರೈನ್ ಸರ್ಜರಿ ಫೋಟೋ ಶೇರ್ ಮಾಡಿ ಮಗನಿಗೆ ಭಾವನಾತ್ಮಕ ಪತ್ರ ಬರೆದ ಹೃತಿಕ್ ತಾಯಿ

  |

  ಬಾಲಿವುಡ್ ನ ಗ್ರೀಗ್ ಗಾಡ್ ಹ್ಯಾಂಡ್ ಸಮ್ ಹಂಕ್ ಹೃತಿಕ್ ರೋಷನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 46ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಹೃತಿಕ್ ಗೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ವಿಶ್ ಮಾಡುತ್ತಿದ್ದಾರೆ. ಅಭಿಮಾನಿಗಳು, ಕುಟುಂಬದವರು ಚಿತ್ರರಂಗದ ಸ್ನೇಹಿತರಿಂದ ಶುಭಾಶಯಗಳ ಮಹಾಪೂರವೆ ಹರಿದುಬರುತ್ತಿವೆ..

  ನಾಚಿಕೆಗೇಡು: ದೇಶ ಹೊತ್ತಿ ಉರಿಯುತ್ತಿದ್ದರೂ ಪಾರ್ಟಿ ಮಾಡಿದ ಹೃತಿಕ್-ದೀಪಿಕಾ.!ನಾಚಿಕೆಗೇಡು: ದೇಶ ಹೊತ್ತಿ ಉರಿಯುತ್ತಿದ್ದರೂ ಪಾರ್ಟಿ ಮಾಡಿದ ಹೃತಿಕ್-ದೀಪಿಕಾ.!

  ಇವರ ಜೊತೆಗೆ ಹೃತಿ ರೋಷನ್ ಪ್ರೀತಿಯ ಅಮ್ಮ ಪಿಂಕಿ ರೋಷನ್ ಮಗನಿಗೆ ಭಾವನಾತ್ಮಕ ಸಂದೇಶ ಕಳುಹಿಸಿ ಹುಟ್ಟುಹಬ್ಬದ ಶುಭಾಶಯ ತಿಳಿಳಿಸಿದ್ದಾರೆ. ಹೌದು, ಸಾಮಾಜಿಕ ಜಾಲತಾಣದಲ್ಲಿ ಮಗನ ಬಗ್ಗೆ ದೀರ್ಘವಾಗಿ ಬರೆದುಕೊಂಡಿರುವ ಪಿಂಕಿ ರೋಷನ್ ಬ್ರೈನ್ ಸರ್ಜರಿಯಾದ ಸಮಯವನ್ನು ನೆನಪಿಸಿಕೊಂಡಿದ್ದಾರೆ. 2013ರಲ್ಲಿ ಹೃತಿಕ್ ಬ್ರೈನ್ ಸರ್ಜರಿಗೆ ಒಳಗಾಗಿದ್ದರು. ಚಿತ್ರೀಕರಣ ಸಮಯದಲ್ಲಿ ತಲೆಗೆ ಪೆಟ್ಟಾಗಿ ನೋವು ಅನುಭವಿಸುತ್ತಿದ್ದ ಹೃತಿಕ್ ನಂತರ ಸರ್ಜರಿಗೆ ಒಳಗಾಗಿದ್ದರು. ಈ ಬಗ್ಗೆ ತಾಯಿ ಪಿಂಕಿ ದೀರ್ಘವಾದ ಪತ್ರ ಬರೆದಿದ್ದಾರೆ.

  ಹೃತಿಕ್ ತಾಯಿ ಹೇಳಿದ್ದೇನು?

  ಹೃತಿಕ್ ತಾಯಿ ಹೇಳಿದ್ದೇನು?

  "ನಾನು ಯಾವತ್ತು ಅನುಭವಿಸಿರದ ಘಟನೆಯನ್ನು ಈಗ ಭಾರವಾದ ಹೃದಯದಿಂದ ಹಂಚಿಕೊಳ್ಳುತ್ತಿದ್ದೀನಿ. ಇದು ವಿಷಾದ ಮತ್ತು ದುಃಖ ಅಥವಾ ಕಾಳಜಿ ಇಂದ ಭಾರವಾಗುವುದಿಲ್ಲ. ಮಕ್ಕಳಿಗೆ ಬೆಂಬಲ ನೀಡುತ್ತೇವೆ ಮತ್ತು ಪ್ರೋತ್ಸಾಹಿಸುತ್ತೇವೆ. ಆದರೆ ಅವರ ಸಹಾನುಭೂತಿ, ಶಕ್ತಿ ಮತ್ತು ಧೈರ್ಯ ಪೋಷಕರನ್ನು ಮೀರಿದಾಗ ಏನಾಗುತ್ತದೆ? ಎಂದು ಹೇಳಿದ್ದಾರೆ.

   ಪ್ರಜ್ಞಾಹೀನ ಸ್ಥಿತಿಗೆ ಹೋಗಿದ್ದೆ

  ಪ್ರಜ್ಞಾಹೀನ ಸ್ಥಿತಿಗೆ ಹೋಗಿದ್ದೆ

  ಹೃತಿಕ್ ಬ್ರೈನ್ ಸರ್ಜರಿಗೆ ಹೋಗುವ ಮೊದಲು ಹೃತಿಕ್ ತಾಯಿ ಅನುಭವಿಸಿದ ನೋವನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ. "ದಗ್ಗು (ಹೃತಿಕ್ ರೋಷನ್) ಬ್ರೈನ್ ಸರ್ಜರಿಗೆ ಹೋಗುವ ಮೊದಲು ನಾನು ಬಹುತೇಕ ಪ್ರಜ್ಞಾಹೀನ ಸ್ಥಿತಿಗೆ ಹೋಗಿದ್ದೆ. ನನ್ನ ಹೃದಯ ಬಡಿತ, ರಕ್ತದೊತ್ತಡ ಅಧಿಕವಾಗಿತ್ತು. ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದೆ. ನನ್ನ ಪ್ರತಿ ಇಂಚು ಕಾಳಜಿಯ ನೆರಳಿನಿಂದ ತುಂಬಿಹೋಗಿದೆ ಎಂದು ನಾನು ಭಾವಿಸಿದೆ"

  'ಏಷ್ಯಾ ಸೆಕ್ಸಿಯೆಸ್ಟ್ ಮ್ಯಾನ್' ಪಟ್ಟಿಯಲ್ಲಿ ಒಬ್ಬನೇ ಸೌತ್ ಸ್ಟಾರ್, ಯಾರದು?'ಏಷ್ಯಾ ಸೆಕ್ಸಿಯೆಸ್ಟ್ ಮ್ಯಾನ್' ಪಟ್ಟಿಯಲ್ಲಿ ಒಬ್ಬನೇ ಸೌತ್ ಸ್ಟಾರ್, ಯಾರದು?

  ಆ ಸಮಯದಲ್ಲಿ ಚಿಕ್ಕ ಮಗುವಿನ ಹಾಗೆ ಕಂಡನು

  ಆ ಸಮಯದಲ್ಲಿ ಚಿಕ್ಕ ಮಗುವಿನ ಹಾಗೆ ಕಂಡನು

  "ನನ್ನ ಮಗನನ್ನು ಆ ಸ್ಥಿತಿಯಲ್ಲಿ ವೈದ್ಯರ ಬಳಿ ನೋಡಿದಾಗ ಅಸಹಾಯಕನಾಗಿ ಚಿಕ್ಕ ಮಗುವಿನಂತೆ ಕಂಡನು. ಆಗತಾನೆ ಜಗತ್ತಿಗೆ ಬಂದ ಹಾಗೆ ಆ ಸುಂದರ ಕಣ್ಣುಗಳಿಂದ ನನ್ನುನ್ನು ನೋಡುತ್ತಿದ್ದನು. ಅವನು ಚಿಕ್ಕ ಮಗುವಿನಂತೆ ಕಂಡನು. ಮತ್ತೆ ಜಗತ್ತಿಗೆ ಬಂದ ದಿನದಂತೆಯೇ ನನ್ನನ್ನು ನೋಡುವ ಅದೇ ಸುಂದರ ಕಣ್ಣುಗಳು. ಆ ಕಣ್ಣುಗಳಲ್ಲಿ ಯಾವುದೆ ಭಯ, ಒತ್ತಡ, ಚಿಂತೆ ಇರಲಿಲ್ಲ. ಆ ಕಣ್ಣುಗಳಲ್ಲಿ ನನ್ನ ಪ್ರತಿಬಿಂಬ ನೋಡಿದೆ" ಎಂದು ಹೇಳಿದ್ದಾರೆ.

  ಏಷ್ಯಾದ ಸೆಕ್ಸಿಯಸ್ಟ್ ಮ್ಯಾನ್ ಪಟ್ಟಿಯಲ್ಲಿ ಹೃತಿಕ್ ರೋಷನ್ ಗೆ ಮೊದಲ ಸ್ಥಾನಏಷ್ಯಾದ ಸೆಕ್ಸಿಯಸ್ಟ್ ಮ್ಯಾನ್ ಪಟ್ಟಿಯಲ್ಲಿ ಹೃತಿಕ್ ರೋಷನ್ ಗೆ ಮೊದಲ ಸ್ಥಾನ

  ಒಂದು ಮಿಲಿಯನ್ ಆಶೀರ್ವಾದಗಳನ್ನು ನೀಡಿದೆ

  ಒಂದು ಮಿಲಿಯನ್ ಆಶೀರ್ವಾದಗಳನ್ನು ನೀಡಿದೆ

  ಇನ್ನು "ಈ ಚಿತ್ರದಲ್ಲಿ ಕಣ್ಣುಗಳನ್ನು ನೋಡಿ. ಬ್ರೈನ್ ಸರ್ಜರಿಗೆ ಒಳಗಾದ ಮನುಷ್ಯ ಹಾಗೆ ಕಾಣುತ್ತಾನಾ? ಇಲ್ಲ, ಅವನ ಲುಕ್ ಯಾರನ್ನೊ ಗೆದ್ದ ಹಾಗೆ ಕಾಣುತ್ತೆ. ನಾನು ಒಂಬತ್ತು ತಿಂಗಳು ಹೊತ್ತು ಹೆತ್ತು ನನ್ನ ತೋಳುಗಳಲ್ಲಿ ಇರುವ ಈಗ ನನ್ನನ್ನು ಅವನಲ್ಲಿ ತೊಡಗಿಸಿಕೊಂಡಿದೆ. ಎಲ್ಲಾ ಶಕ್ತಿ ಮತ್ತು ಪ್ರೀತಿಯನ್ನು ನನಗೆ ಹಿಂದಿರುಗಿಸುತ್ತಿದೆ. ಆ ಕ್ಷಣದಲ್ಲಿ ನಾನು ಮಗನಿಗೆ ಒಂದು ಮಿಲಿಯನ್ ಆಶೀರ್ವಾದಗಳನ್ನು ನೀಡಿದೆ" ಎಂದು ಹೃತಿಕ್ ಬಗ್ಗೆ ದೀರ್ಘವಾಗಿ ಬರೆದುಕೊಂಡಿದ್ದಾರೆ ತಾಯಿ ಪಿಂಕಿ ರೋಷನ್.

  English summary
  Bollywood Actor Hrithik Roshan mother wrote an emotional letter recalled the time of Hrithik Brain Surgery.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X