For Quick Alerts
  ALLOW NOTIFICATIONS  
  For Daily Alerts

  ಕ್ರೇಜಿ ಸ್ಟಾರ್ ಪುತ್ರನ ಸಿನಿಮಾಗೆ ಎಂಟ್ರಿ ಕೊಟ್ಟ ಬಾಲಿವುಡ್ ಖ್ಯಾತ ನಟ

  |
  ಕ್ರೇಜಿಸ್ಟಾರ್ ಮಗನ ಚಿತ್ರಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್ ಖ್ಯಾತ ನಟ | FILMIBEAT KANNADA

  ಕ್ರೇಜಿ ಸ್ಟಾರ್ ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್ ರವಿಚಂದ್ರನ್ ಅಭಿನಯದ ತ್ರಿವಿಕ್ರಮ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಸದ್ಯ ಬೆಂಗಳೂರಿನಲ್ಲಿ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಮುಂದಿನ ಚಿತ್ರೀಕರಣಕ್ಕೆಂದು ರಾಜಸ್ಥಾನಕ್ಕೆ ತೆರಳಲು ಸಜ್ಜಾಗಿದೆ.

  ಇದರ ಜೊತೆಗೀಗ ಚಿತ್ರತಂಡದಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. 'ತ್ರಿವಿಕ್ರಮ' ಚಿತ್ರಕ್ಕೆ ಬಾಲಿವುಡ್ ನ ಖ್ಯಾತ ನಟ ರೋಹಿತ್ ರಾಯ್ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ರೋಹಿತ್ ಮೊದಲ ಬಾರಿಗೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ನಲ್ಲಿ ಈಗಾಗಲೆ 'ಕಾಬಿಲ್', 'ಏಕ್ ಕಿಲೀಡಿ ಏಕ್ ಹಸೀನಾ', 'ಅಪಾರ್ಟ್ ಮೆಂಟ್', 'ಪ್ಲಾನ್' ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.

  'ತ್ರಿವಿಕ್ರಮ' : ಮಗನ ಮೊದಲ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ಕ್ರೇಜಿ ಸ್ಟಾರ್'ತ್ರಿವಿಕ್ರಮ' : ಮಗನ ಮೊದಲ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ಕ್ರೇಜಿ ಸ್ಟಾರ್

  ಸಿನಿಮಾಗಳ ಜೊತೆಗೆ ರೋಹಿತ್ ಕಿರುತೆರೆಯ ಮೂಲಕವೂ ಸಾಕಷ್ಟು ಖ್ಯಾತಿಗಳಿಸಿದ್ದಾರೆ. ರಿಯಾಲಿಟಿ ಶೋ, ವೆಬ್ ಸೀರಿಸ್ ಗಳಲ್ಲಿಯೂ ಮಿಂಚಿದ್ದಾರೆ. ಈಗ ಮೊದಲ ಬಾರಿಗೆ ಕನ್ನಡ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಡಿಸೆಂಬರ್ ನಿಂದ ಚಿತ್ರತಂಡ ರಾಜಸ್ಥಾನದಲ್ಲಿ ಬೀಡುಬಿಡಲಿದೆ. ಅಲ್ಲಿ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ರೋಹಿತ್.

  ತ್ರಿವಿಕ್ರಮ ಸಿನಿಮಾದಲ್ಲಿ ರೋಹಿತ್ ನೆಗೆಟಿವ್ ಶೇಡ್ ಇರುವಂತ ಪಾತ್ರವಂತೆ. ಚಿತ್ರದ ಕಥೆ ಕೇಳಿ ಇಂಪ್ರೆಸ್ ಆಗಿ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ಇನ್ನು ಚಿತ್ರದಲ್ಲಿ ವಿಕ್ರಮ ಗೆ ನಾಯಕಿಯಾಗಿ ಆಕಾಂಕ್ಷ ಶರ್ಮಾ ಕಾಣಿಸಿಕೊಳ್ಳುತ್ತಿದ್ದಾರೆ. ಆಕಾಂಕ್ಷ ಕೂಡ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ.

  ಎರಡನೇ ನಾಯಕಿಯಾಗಿ ಅಕ್ಷರ ಗೌಡ ನಟಿಸಿತ್ತಿದ್ದಾರೆ. ಅಂದ್ಹಾಗೆ ಚಿತ್ರಕ್ಕೆ ತ್ರಿವಿಕ್ರಮ ಸಹನಾ ಮೂರ್ತಿ ಸಾರಥ್ಯದಲ್ಲಿ ಮೂಡಿ ಬರುತ್ತಿರವ ಸಿನಿಮಾ. ಫಸ್ಟ್ ಲುಕ್ ಮೂಲಕವೆ ಕುತೂಹಲ ಮೂಡಿಸಿರುವ ತ್ರಿವಿಕ್ರಮ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

  English summary
  Bollywood actor Rohit Roy entered Vikram Ravichandran starrer Trivikrama movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X