ಸಂಜಯ್ ದತ್ ಗೆ 4ನೇ ಹಂತದ ಕ್ಯಾನ್ಸರ್ ಎಂದು ಖಚಿತ ಪಡಿಸಿದ ಆಸ್ಪತ್ರೆ ಮೂಲಗಳು
ಬಾಲಿವುಡ್ ನಟ ಸಂಜಯ್ ದತ್ ಶ್ವಾಶಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಸಂಜಯ್ ದತ್ ಗೆ 3ನೇ ಹಂತದ ಕ್ಯಾನ್ಸರ್ ಇದೆ ಎಂದು ಹೇಳಲಾಗಿತ್ತು. ಆದರೀಗ ಸಂಜಯ್ ದತ್ ಗೆ 4ನೇ ಹಂತದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ಮುಂಬೈನ ಲೀಲಾವತಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.
Recommended Video
ಇತ್ತೀಚಿಗೆ ಉಸಿರಾಟ ಸಮಸ್ಯೆಯಿಂದ ಸಂಜಯ್ ದತ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಕ್ಯಾನ್ಸರ್ ಇರುವ ಸುದ್ದಿ ಹೊರಬಿದ್ದಿತ್ತು. ಸಂಜಯ್ ದತ್ ಗೆ ಕ್ಯಾನ್ಸರ್ ಎನ್ನುವ ಸುದ್ದಿ ಕೇಳಿ ಶಾಕ್ ಆದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಗ ಗುಣಮುಖರಾಗುವಂತೆ ಪ್ರಾರ್ಥನೆ ಮಾಡುತ್ತಿದ್ದಾರೆ.
ಆಸ್ಪತ್ರೆಗೆ ದಾಖಲಾದ ತಕ್ಷಣ ಕೊರೊನಾ ಪರೀಕ್ಷೆ ಮಾಡಲಾಗಿದೆ. ಕೊರೊನಾ ವರದಿ ನೆಗೆಟಿವ್ ಬಂದ ಬಳಿಕ ಮತ್ತೆ ಕ್ಯಾನ್ಸರ್ ಪರೀಕ್ಷೆ ಮಾಡಲಾಗಿದೆ. ನಂತರ 4ನೇ ಹಂತದ ಕ್ಯಾನ್ಸ ರ್ ಇರುವುದು ದೃಢಪಟ್ಟಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಆದರೆ ಸಂಜಯ್ ದತ್ ಗೆ ಚಿಕಿತ್ಸೆ ನೀಡಿದ ವೈದ್ಯರಾದ ಡಾ. ಜಲೀಲ್ ಪಾರ್ಕರ್ ಸಂಜಯ್ ದತ್ ಅನಾರೋಗ್ಯದ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ಸಂಜಯ್ ದತ್ ಹೆಚ್ಚಿನ ಚಿಕಿತ್ಸಗೆ ಅಮೆರಿಕಾಗೆ ತೆರಳಿದ್ದಾರೆ. ಸಂಜುಬಾಬಾ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು, ಸ್ನೇಹಿತರು, ಚಿತ್ರರಂಗದ ಗಣ್ಯರು ಧೈರ್ಯ ತುಂಬಿ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ
''ಸಂಜಯ್ ದತ್ ಭಾಯ್, ನೀವು ಅನಾರೋಗ್ಯ ಪರಿಸ್ಥಿತಿಯಲ್ಲಿದ್ದೀರಿ ಎಂದು ತಿಳಿದು ಬಹಳ ನೋವಾಗಿದೆ. ಆದರೆ, ನೀವೊಬ್ಬ ಹೋರಾಟಗಾರರಾಗಿದ್ದೀರಾ. ವರ್ಷಗಳ ಕಾಲದಿಂದಲೂ ನೀವು ಅನೇಕ ಸಂಕಷ್ಟಗಳನ್ನು ಎದುರಿಸಿದ್ದೀರಿ. ನೀವು ಇದರಿಂದ ಹೊರಬರುವಿರಿ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದಷ್ಟೂ ಬೇಗ ಗುಣಮುಖರಾಗಿ ಎಂದು'' ಎಂದು ಚಿರು ಟ್ವೀಟ್ ಮಾಡಿದ್ದಾರೆ.


Click it and Unblock the Notifications











