For Quick Alerts
  ALLOW NOTIFICATIONS  
  For Daily Alerts

  ಹೊಸ ಹೇರ್ ಸ್ಟೈಲ್ ನಲ್ಲಿ ನಟ ಸಂಜಯ್ ದತ್ ಮಿಂಚಿಂಗ್

  |

  ಮಾರಕ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದಿರುವ ಬಾಲಿವುಡ್ ನಟ ಸಂಜಯ್ ದತ್ ಈಗ ಹೊಸ ಲುಕ್ ನಲ್ಲಿ ಕಾಣಿಸಿಕೊಂಡ ಅಚ್ಚರಿ ಮೂಡಿಸಿದ್ದಾರೆ. ಇತ್ತೀಚಿಗಷ್ಟೆ ಆರೋಗ್ಯದ ಬಗ್ಗೆ ಸಿಹಿ ಸುದ್ದಿ ನೀಡಿ, ಸಂಜು ಬಾಬಾ ಮುದ್ದು ಮಕ್ಕಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು.

  ಸದ್ಯ ಕುಟುಂಬದ ಜೊತೆ ಸಂತೋಷದ ಕ್ಷಣಗಳನ್ನು ಕಳೆಯುತ್ತಿರುವ ಸಂಜಯ್ ದತ್ ಹೊಸದೊಂದು ಹೇರ್ ಸ್ಟೈಲ್ ಮೂಲಕ ಅಭಿಮಾನಿಗಳ ಮನಸೆಳೆದಿದ್ದಾರೆ. 61 ವರ್ಷದ ಸಂಜಯ್ ದತ್ platinum blonde ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ. ಹೊಸ ಗೆಟಪ್ ನಲ್ಲಿ ಮಿಂಚುತ್ತಿರುವ ಸಂಜುಬಾಬಾ ಫೋಟೋವನ್ನು ಆತ್ಮೀಯ ಗೆಳೆಯ ಹಾಗೂ ಹೇರ್ ಸ್ಟೈಲಿಸ್ಟ್ ಆಲಿಮ್ ಹಕಿಮ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  ಮಾರಕ ಖಾಯಿಲೆ ವಿರುದ್ಧ ಹೋರಾಡಿ ಗೆದ್ದ 'ಅಧೀರ' ಸಂಜಯ್ ದತ್

  ಸಂಜಯ್ ದತ್ ಫೋಟೋ ಶೇರ್ ಮಾಡಿ ಗೆಳೆಯ ಹಕಿಮ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಹೊಸ ಹೇರ್ ಸ್ಟೈಲ್ ಮಾಡಿದ್ದು ಶರೀಖ್ ಮತ್ತು ರಿಯಾ. ಗೆಳೆಯ ಹಕೀಮ್ ಅವರ ಸಲೂನ್ ನಲ್ಲೇ ಈ ಹೊಸ ಹೇರ್ ಸ್ಟೈಲ್ ಮಾಡಲಾಗಿದೆ.

  ಮುನಿರತ್ನ ಬೆಂಬಲಕ್ಕೆ ಅಣ್ಣ ದರ್ಶನ್ ಜೊತೆಗೆ ಬಂದ ಅಮೂಲ್ಯ | Darshan | Amulya | Munirathna

  ಇತ್ತೀಚಿಗಷ್ಟೆ ಸಂಜಯ್ ದತ್ ಕ್ಯಾನ್ಸರ್ ನಿಂದ ಗುಣಮುಖರಾಗಿರುವುದಾಗಿ ಪತ್ರ ಬರೆದಿದ್ದರು. ಮಕ್ಕಳ ಹುಟ್ಟುಹಬ್ಬಕ್ಕೆ ನನ್ನ ಆರೋಗ್ಯವೇ ಗಿಫ್ಟ್ ಎಂದು ಹೇಳಿದ್ದರು. 'ನನಗೆ ಹಾಗೂ ನನ್ನ ಕುಟುಂಬಕ್ಕೆ ಕೆಲವು ದಿನಗಳು ಬಹಳ ಕಠಿಣವಾಗಿದ್ದವು, ಆದರೆ ದೇವರು, ತನ್ನ ವೀರ ಸೈನಿಕನಿಗೆ ಕಠಿಣವಾದ ಯುದ್ಧವನ್ನು ನೀಡುತ್ತಾನೆ. ನಾನು ಆ ಯುದ್ಧ ಗೆದ್ದಿದ್ದೇನೆ. ಮಕ್ಕಳ ಹುಟ್ಟುಹಬ್ಬಕ್ಕೆ ನಾನು ಆರೋಗ್ಯವಾಗಿ ಬಂದಿರುವುದು ನಾನು ನೀಡುತ್ತಿರುವ ಉಡುಗೊರೆ' ಎಂದು ಪತ್ರಬರೆದಿದ್ದರು.

  English summary
  Bollywood Actor Sanjay dutt Rocks new platinum blonde hairstyle.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X