ಕೆಜಿಎಫ್ ಕುರಿತು ದೊಡ್ಡ ಸಿಗ್ನಲ್ ಕೊಟ್ಟ 'ಅಧೀರ' ಸಂಜಯ್ ದತ್

ಭಾರತೀಯ ಸಿನಿಮಾ ಜಗತ್ತಿನ ಬಹುನಿರೀಕ್ಷೆಯ 'ಕೆಜಿಎಫ್ ಚಾಪ್ಟರ್-2' ಸಿನಿಮಾ ಚಿತ್ರೀಕರಣ ಆರಂಭವಾಗಿದೆ. ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದ್ದ ಶೂಟಿಂಗ್ ಸೆಪ್ಟೆಂಬರ್‌ ತಿಂಗಳಲ್ಲಿ ಪುನಾರರಂಭವಾಗಿದೆ. ಬೆಂಗಳೂರಿನಲ್ಲಿ ಕೆಲವು ಭಾಗದ ಚಿತ್ರೀಕರಣ ಮುಗಿಸಿದ ಚಿತ್ರತಂಡ ಮಂಗಳೂರಿನಲ್ಲಿ ಬೀಡುಬಿಟ್ಟಿದೆ.

ಈ ನಡುವೆ ಕೆಜಿಎಫ್ ಚಾಪ್ಟರ್ 2 ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸಂಜಯ್ ದತ್ ಯಾವಾಗ ಶೂಟಿಂಗ್‌ನಲ್ಲಿ ಭಾಗವಹಿಸುತ್ತಾರೆ ಎಂಬ ಕುತೂಹಲ ಕಾಡುತ್ತಿತ್ತು. ಈ ಕುತೂಹಲಕ್ಕೆ ಸ್ವತಃ ಸಂಜತ್ ದತ್ ನಿನ್ನೆಯಷ್ಟೇ ಸ್ಪಷ್ಟನೆ ನೀಡಿದ್ದರು. ನವೆಂಬರ್‌ನಲ್ಲಿ ಕೆಜಿಎಫ್ ಶೂಟಿಂಗ್‌ಗೆ ಹೋಗುತ್ತೇನೆ ಎಂದು ಹೇಳಿದ್ದರು. ಇದರ ಬೆನ್ನಲ್ಲೆ ಅಭಿಮಾನಿಗಳಿಗೆ ದೊಡ್ಡ ಸಿಗ್ನಲ್‌ವೊಂದು ಕೊಟ್ಟಿದ್ದಾರೆ. ಮುಂದೆ ಓದಿ....

ಅಧೀರ ಈಸ್ ರೆಡಿ ಟು ಶೂಟ್

ಅಧೀರ ಈಸ್ ರೆಡಿ ಟು ಶೂಟ್

ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಸಂಜಯ್ ದತ್ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸಂಜು ಬಾಬ ದೈಹಿಕವಾಗಿ ಬಹಳ ಸೊರಗಿದ್ದಾರೆ ಎಂದು ಅಭಿಮಾನಿಗಳು ನಿರಾಸೆಯಾಗಿದ್ದರು. ಆದ್ರೀಗ, ಸಂಜಯ್ ದತ್ ಮೊದಲಿನಂತೆ ಫಿಟ್ ಆಗಿದ್ದು, ಸ್ಟೈಲ್ ಆಗಿ ರೆಡಿಯಾಗಿದ್ದು ''ನಾನು ರೆಡಿ'' ಎಂದು ಫೋಟೋ ಹಂಚಿಕೊಂಡಿದ್ದಾರೆ.

ಕೆಜಿಎಫ್ ಚಿತ್ರಕ್ಕಾಗಿ ತಯಾರಿ

ಕೆಜಿಎಫ್ ಚಿತ್ರಕ್ಕಾಗಿ ತಯಾರಿ

ಅಧೀರನ ಪಾತ್ರಕ್ಕಾಗಿ ಸಂಜಯ್ ದತ್ ಪೂರ್ವ ತಯಾರಿ ನಡೆಸಿದ್ದಾರೆ. ದೈಹಿಕವಾಗಿ ಫಿಟ್ ಆಗಿರುವ ಸಂಜು ಬಾಬು, ಆ ಪಾತ್ರಕ್ಕೆ ಅಗತ್ಯವೆನಿಸುವಂತೆ ಹೇರ್‌ಸ್ಟೈಲ್ ಹಾಗೂ ಗಡ್ಡ ಸಹ ಟ್ರಿಮ್ ಮಾಡಿದ್ದಾರೆ. ಈ ಫೋಟೋವನ್ನು ಸ್ವತಃ ಸಂಜಯ್ ದತ್ ಪೋಸ್ಟ್ ಮಾಡಿದ್ದು, ಅಭಿಮಾನಿಗಳಿಗೆ ಖುಷಿ ನೀಡಿದೆ.

ಸಂಜಯ್ ಆರೋಗ್ಯಕ್ಕೆ ಏನಾಗಿತ್ತು?

ಸಂಜಯ್ ಆರೋಗ್ಯಕ್ಕೆ ಏನಾಗಿತ್ತು?

ಸಂಜಯ್ ದತ್ ಅವರಿಗೆ ಆಗಸ್ಟ್ 2020ರಲ್ಲಿ ಮೂರನೇ ಹಂತದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಪ್ರಸ್ತುತ ಮುಂಬೈನಲ್ಲಿ ಚಿಕಿತ್ಸೆ ಸಹ ಪಡೆಯುತ್ತಿದ್ದಾರೆ. ಈ ಚಿಕಿತ್ಸೆಯಿಂದ ದತ್ ಅವರ ದಿನಚರಿಗೆ ಮತ್ತು ಕೆಲಸಕ್ಕೆ ಯಾವುದೇ ತೊಂದರೆಯಾಗಿಲ್ಲ. ಹಾಗಾಗಿ, ತಮ್ಮ ಕೆಲಸಗಳಲ್ಲಿ ದತ್ ತೊಡಗಿಸಿಕೊಳ್ಳಲು ತಯಾರಾಗಿದ್ದಾರೆ.

ಪ್ರಧಾನಿ ಪಾತ್ರದಲ್ಲಿ ರವಿನಾ ಟಂಡನ್

ಪ್ರಧಾನಿ ಪಾತ್ರದಲ್ಲಿ ರವಿನಾ ಟಂಡನ್

ನಟ ಯಶ್ ಹಾಗೂ ಶ್ರೀನಿಧಿ ಶೆಟ್ಟಿ ಜೊತೆ ಮತ್ತಷ್ಟು ಕಲಾವಿದರು ಚಾಪ್ಟರ್ 2ರಲ್ಲಿ ಇರಲಿದ್ದಾರೆ. ಈಗಾಗಲೇ ಪ್ರಕಾಶ್ ರೈ ಹಾಗೂ ಆರ್‌ಜೆ ರೋಹಿತ್ ಕೆಜಿಎಫ್ ಗೆ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾದಲ್ಲಿ ಬರುವ ಮಹಿಳಾ ಪ್ರಧಾನಿ ಪಾತ್ರದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ನಟಿಸುತ್ತಿದ್ದಾರೆ.

More from Filmibeat

English summary
Bollywood actor Sanjay Dutt shared new photos and says ''Gearing up for Adheera'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X