»   » ಶಾರೂಖ್ ಹುಟ್ಟುಹಬ್ಬದ ಆಚರಣೆಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ಸಮಾಗಮ

ಶಾರೂಖ್ ಹುಟ್ಟುಹಬ್ಬದ ಆಚರಣೆಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ಸಮಾಗಮ

Posted By:
Subscribe to Filmibeat Kannada

ಕಿಂಗ್ ಖಾನ್ ಶಾರೂಖ್ ಇಂದು ತಮ್ಮ 52ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಶಾರೂಖ್ ಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.

ಮಧ್ಯರಾತ್ರಿಯಿಂದಲ್ಲೇ ಶಾರೂಖ್ ಹುಟ್ಟುಹಬ್ಬದ ಸಂಭ್ರಮ ಶುರುವಾಗಿದೆ. ರಾತ್ರಿ 12ಗೆ ಸರಿಯಾಗಿ ಕೇಕ್ ಕಟ್ ಮಾಡಿ ಶಾರೂಖ್ ತಮ್ಮ ಬರ್ತಡೇಯನ್ನು ಆಚರಿಸಿಕೊಂಡಿದ್ದಾರೆ. ಅಲಿಭಾಗ್ ನಲ್ಲಿರುವ ಶಾರೂಖ್ ಫಾರ್ಮ್ ಹೌಸ್ ನಲ್ಲಿ ಹುಟ್ಟುಹಬ್ಬದ ಆಚರಣೆ ನಡೆದಿದೆ.

Bollywood Actor Shah Rukh Khan turns 52

ಈ ವೇಳೆ ಶಾರೂಖ್ ಕುಟುಂಬ ಮತ್ತು ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಕತ್ರೀನಾ ಕೈಫ್, ಅಲಿಯಾ ಭಟ್, ಮಲೈಕಾ ಅರೋರಾ, ನಿರ್ದೇಶಕಿ ಫರಾ ಖಾನ್ ಮತ್ತು ಕರಣ್ ಜೋಹರ್ ಭಾಗಿಯಾಗಿದ್ದರು.

Bollywood Actor Shah Rukh Khan turns 52

ನಿರ್ದೇಶಕ ಕರಣ್ ಜೋಹರ್ ತಮ್ಮ ಇನ್ಸ್ ಟಾಗ್ರಾಮ್ ಖಾತೆಯಲ್ಲಿ ಶಾರೂಖ್ ಹುಟ್ಟುಹಬ್ಬದ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನೂ, ಟ್ವಿಟ್ಟರ್ ನಲ್ಲಿ ಸಚಿನ್ ತೆಂಡುಲ್ಕರ್ ಸೇರಿದಂತೆ ದೇಶದ ಗಣ್ಯಾತಿಗಣ್ಯರು ಶುಭ ಕೋರಿದ್ದಾರೆ. ಉಳಿದಂತೆ ಸಾವಿರಾರು ಅಭಿಮಾನಿಗಳು ಸಹ ಟ್ವಿಟ್ಟರ್ ನಲ್ಲಿ HBDayWorldsBiggestStar ಮತ್ತು HappyBirthdaySRK ಎಂಬ ಹ್ಯಾಷ್ ಟ್ಯಾಗ್ ಬಳಿಸಿ ಬಿ ಟೌನ್ ಬಾದ್ ಶಾ ಗೆ ವಿಶ್ ಮಾಡಿದ್ದಾರೆ.

English summary
Bollywood Actor Shah Rukh Khan celebrating his 52nd birthday today (November 2nd).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X