»   » ಮಧ್ಯರಾತ್ರಿ ರಾಕೇಶ್ ರೋಶನ್ ಮನೆಗೆ ಶಾರುಖ್ ಹೋಗಿದ್ದು ಯಾಕೆ?

ಮಧ್ಯರಾತ್ರಿ ರಾಕೇಶ್ ರೋಶನ್ ಮನೆಗೆ ಶಾರುಖ್ ಹೋಗಿದ್ದು ಯಾಕೆ?

Posted By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನ ಬಾದ್ ಷಾ ಶಾರುಖ್ ಖಾನ್ ಮತ್ತು ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಅತ್ಯುತ್ತಮ ಗೆಳೆಯರು. ಇವರಿಬ್ಬರು ಈ ಮೊದಲು 'ಕಭೀ ಖುಷಿ ಕಭೀ ಗಮ್' ಚಿತ್ರದಲ್ಲಿ ಅಣ್ಣ-ತಮ್ಮನ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರಿಂದ ಮೆಚ್ಚುಗೆ ಗಳಿಸಿದ್ದರು.

ಅಂದಹಾಗೆ ಇವರಿಬ್ಬರ ಪುರಾಣ ಹೇಳಲು ಕಾರಣ ಇತ್ತೀಚೆಗೆ ಕಿಂಗ್ ಖಾನ್ ಶಾರುಖ್ ಖಾನ್ ಅವರು ತುಂಬಾ ಸಮಯದ ಬಳಿಕ ಹೃತಿಕ್ ರೋಷನ್ ಅವರ ಮನೆಗೆ ಭೇಟಿ ನೀಡಿದ್ದು, ಅದೂ ಮಧ್ಯರಾತ್ರಿ ವೇಳೆಯಲ್ಲಿ. 'ರಾಯಿಸ್' ಚಿತ್ರದ ನಿರ್ಮಾಪಕ ರಿತೇಶ್ ಸಿಧ್ವಾನಿ ಅವರ ಜೊತೆ ಶಾರುಖ್ ಅವರು ಹೃತಿಕ್ ಮನೆಗೆ ಹೋಗಿ, ಅವರ ಅಪ್ಪ ರಾಕೇಶ್ ರೋಷನ್ ಜೊತೆ ಕೆಲಕಾಲ ಮಾತನಾಡಿದ್ದಾರೆ.[ರಾಜ್ ಸ್ಮಾರಕ ಉದ್ಘಾಟನೆಗೆ ಶಾರುಖ್ ಖಾನ್, ಹೃತಿಕ್?]

Bollywood Actor Shahrukh Khan visited Hrithik Roshan's house

ಅಷ್ಟಕ್ಕೂ ಶಾರುಖ್ ಅವರು ರಾಕೇಶ್ ರೋಷನ್ ಅವರನ್ನು ಭೇಟಿ ಮಾಡಲು ಪ್ರಮುಖ ಕಾರಣ ಏನಪ್ಪಾ ಅಂದ್ರೆ ಶಾರುಖ್ ಅವರ 'ರಾಯಿಸ್' ಮತ್ತು ಹೃತಿಕ್ ರೋಷನ್ ಅವರ 'ಕಾಬಿಲ್' ಸಿನಿಮಾದ ಕ್ಲ್ಯಾಷ್.[ವಿಶ್ವದಲ್ಲಿ ಅತೀ ಹೆಚ್ಚು ಆಸ್ತಿ ಹೊಂದಿರುವ ನಟರಿವರು]

Bollywood Actor Shahrukh Khan visited Hrithik Roshan's house

'ಕಿಂಗ್ ಖಾನ್' ಶಾರುಖ್ ಖಾನ್ ಅವರು 'ರಾಯಿಸ್' ಚಿತ್ರದ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದ್ದರಿಂದ 'ರಾಯಿಸ್' ಮತ್ತು 'ಕಾಬಿಲ್' ಚಿತ್ರದ ನಡುವೆ ಬಾಕ್ಸಾಫೀಸ್ ಘರ್ಷಣೆ ಉಂಟಾಗೋದು ಬೇಡ ಅಂತ ರಾಕೇಶ್ ರೋಷನ್ ಅವರ ಜೊತೆ 'ಕಾಬಿಲ್' ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲು ಕೋರಿಕೊಂಡಿದ್ದಾರೆ.[ಶಾರುಕ್ ಖಾನ್ ರ 'ರಾಯೀಸ್' ಚಿತ್ರ ಬಿಡುಗಡೆಯಾಗದಿರಲು ಕಾರಣವೇನು?]

Bollywood Actor Shahrukh Khan visited Hrithik Roshan's house

ಈ ವಿಚಾರವನ್ನು ಖುದ್ದು ಶಾರುಖ್ ಖಾನ್ ಅವರೇ ಟ್ವಿಟ್ಟರ್ ನಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದಾರೆ. "ತುಂಬಾ ದಿನಗಳ ಬಳಿಕ ಒಬ್ಬ ಅತ್ಯುತ್ತಮ ಗೆಳೆಯ, ಗುರು, ಕುಟುಂಬದ ಸದಸ್ಯನಂತಿರುವ ಮಿಸ್ಟರ್ ರಾಕೇಶ್ ರೋಷನ್ ಅವರನ್ನು ಭೇಟಿ ಮಾಡಿದೆ. ಇಲ್ಲಿ ತುಂಬಾ ಕೆಲಸ ಮಾಡೋದು ಮುಖ್ಯ ಆಗೋದಿಲ್ಲ, ಇಲ್ಲಿ ಒಂದು ಸರಿಯಾದ ಆಯ್ಕೆ ಮಾತ್ರ ಮುಖ್ಯವಾಗುತ್ತದೆ. ಧನ್ಯವಾದ ಸರ್..' ಎಂದು ಶಾರುಖ್ ಟ್ವೀಟ್ ಮಾಡಿದ್ದಾರೆ.

ಶಾರುಖ್ ಅವರು ಈ ರೀತಿಯಾಗಿ ಟ್ವೀಟ್ ಮಾಡಿರುವುದನ್ನು ನೋಡಿದರೆ, ರಾಕೇಶ್ ರೋಷನ್ ಅವರು ಖಂಡಿತ ಕೆಲವು ಉತ್ತಮ ಸಲಹೆಗಳನ್ನು ಶಾರುಖ್ ಅವರಿಗೆ ನೀಡಿರುತ್ತಾರೆ ಅಂತಾಯ್ತು.[ಉಗ್ರರ ಬಾಂಬ್ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಹೃತಿಕ್]

Bollywood Actor Shahrukh Khan visited Hrithik Roshan's house

ಇನ್ನು ಶಾರುಖ್ ಅವರ 'ರಾಯಿಸ್' ಮತ್ತು ಹೃತಿಕ್ ಅವರ 'ಕಾಬಿಲ್' 2017, ಜನವರಿಯಲ್ಲಿ ಗಣರಾಜ್ಯ ದಿನದಂದು ತೆರೆ ಕಾಣಬೇಕಿತ್ತು. ಇದೀಗ ಯಾರ ಸಿನಿಮಾ ಮೊದಲು ತೆರೆ ಮೇಲೆ ಬರುತ್ತೆ, ಮತ್ತು ಯಾರ ಸಿನಿಮಾ ನಂತರ ರಾರಾಜಿಸುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.[ಹಾಲಿವುಡ್ ಗೆ ಬಾಲಿವುಡ್ ಡ್ರೀಮ್ ಬಾಯ್ ಹೃತಿಕ್]

English summary
Bollywood Actor Shahrukh Khan visited Actor Hrithik Roshan's house and met his father Rakesh Roshan along with the producer of Raees, Ritesh Sidhwani. SRK and Ritesh spent five hours discussing about the 'Raees' and 'Kaabil' clash.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada