ಹೊಸ ಗೆಳೆಯನ ಜೊತೆ ವಿಕ್ಕಿ ಪೋಸ್: ದುಬಾರಿ ಕಾರ್ ಖರೀದಿಸಿದ ಸಂತಸದಲ್ಲಿ 'ಉರಿ' ನಟ

ಬಾಲಿವುಡ್ ನ ಬಹುಬೇಡಿಕೆಯ ನಟರಲ್ಲಿ ಒಬ್ಬರಾಗಿರುವ ವಿಕ್ಕಿ ಕೌಶಲ್ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ಕತ್ರಿನಾ ಕೈಫ್ ವಿಚಾರವಾಗಿ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದ ವಿಕ್ಕಿ ಇದೀಗ ಹೊಸ ಗೆಳೆಯನನ್ನು ಪರಿಚಯಿಸುವ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ. ಅಂದಹಾಗೆ ವಿಕ್ಕಿ ಹೊಸ ಗೆಳೆಯ ಮತ್ಯಾರು ಅಲ್ಲ ದುಬಾರಿ ರೇಂಜ್ ರೋವರ್.

ನಟ ವಿಕ್ಕಿ ಕೌಶಲ್ ಹೊಸ ಕಾರನ್ನು ಖರೀದಿಸಿದ್ದು, ಫೋಟೋವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಉರಿ ಖ್ಯಾತಿಯ ನಿರ್ದೇಶಕ ಆದಿತ್ಯ ಧರ್ ಅವರೊಂದಿಗೆ ಹೊಸ ಸಿನಿಮಾದಲ್ಲಿ ಬ್ಯುಸಿಯಾಗಿರುವ ವಿಕ್ಕಿ ಕೌಶಲ್ ಈ ಚಿತ್ರಕ್ಕಾಗಿ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ. ಜಿಮ್ ನಲ್ಲಿ ಬೆವರಿಳಿಸುತ್ತಿರುವ ವಿಕ್ಕಿ ಕೌಶಲ್ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿದ್ದರು.

ಇದೀಗ ಹೊಸ ಕಾರ್ ಖರೀದಿಸಿದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ವಿಕ್ಕಿ ಹೊಸ ಪೋಸ್ಟ್ ಗೆ ಅಭಿಮಾನಿಗಳ ಜೊತೆಗೆ ಬಾಲಿವುಡ್ ನ ಅನೇಕ ಸೆಲೆಬ್ರಿಟಿಗಳು ಸಹ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಉರಿ ನಿರ್ದೇಶಕ ಆದಿತ್ಯ ಧರ್ ಕಾಮೆಂಟ್ ಮಾಡಿ, "ಶಾಟ್ ಗನ್! ಅಭಿನಂದನೆಗಳು ನನ್ನ ಸಹೋದರ. ಕಷ್ಟಪಟ್ಟು ಕೆಲಸ ಮಾಡಿ ಉತ್ತಮ ಸಕ್ಸಸ್ ಸಾಧಿಸಿ" ಎಂದು ಹೇಳಿದ್ದಾರೆ.

Bollywood Actor Vicky Kaushal buys a Range Rover

ನಟ ವಿಕ್ಕಿ ಕೌಶಲ್ ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್ ಜೊತೆ ಡೇಟಿಂಗ್ ನಲ್ಲಿದ್ದಾರೆ ಎನ್ನುವ ವಿಚಾರ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ವಿಕ್ಕಿ ಆಗಲಿ ಅಥವಾ ಕತ್ರಿನಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ವಿಕ್ಕಿ ಕೌಶಲ್ ಅಶ್ವತ್ಥಾಮ ಸಿನಿಮಾ ಸಿದ್ಧತೆಯಲ್ಲಿ ತಯಾರಾಗಿದ್ದಾರೆ. ಆದಿತ್ಯ ಧರ್ ನಿರ್ದೇಶನ ಮಾಡುತ್ತಿದ್ದಾರೆ. ಹಿಟ್ ಸಿನಿಮಾ ನೀಡಿದ್ದ ವಿಕ್ಕಿ ಮತ್ತು ಆದಿತ್ಯ ಸಿನಿಮಾ ಮೇಲೆ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ.

Recommended Video

ಜಗ್ಗೇಶ Tweet ಡಿಲೀಟ್ ಮಾಡಿ ಗೊಂದಲ ಸೃಷ್ಟಿ ಮಾಡಿದ್ರಾ! | Jaggesh Son Car Accident | Filmibeat Kannada

More from Filmibeat

English summary
Bollywood Actor Vicky Kaushal buys a range rover. He poses with his new car and says welcome home buddy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X