For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಟಿ ಅಲಿಯಾ ಭಟ್‌ಗೆ ಕೊರೊನಾ ಪಾಸಿಟಿವ್

  |

  ಬಾಲಿವುಡ್‌ನ ಖ್ಯಾತ ನಟಿ ಅಲಿಯಾ ಭಟ್ ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇತ್ತೀಚಿಗಷ್ಟೆ ಬಾಯ್ ಫ್ರೆಂಡ್ ರಣಬೀರ್ ಕಪೂರ್ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಇದರ ಬೆನ್ನಲ್ಲೇ ಈಗ ಅಲಿಯಾಗೂ ಕೊರೊನಾ ಪಾಸಿಟಿವ್ ವರದಿ ಬಂದಿದೆ.

  ಈ ಬಗ್ಗೆ ಅಲಿಯಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಕೊರೊನಾ ಪಾಸಿಟಿವ್ ವರದಿ ಬಂದಿದೆ, ಮನೆಯಲ್ಲಿ ಕ್ವಾರಂಟೈನ್ ಆಗಿರುವುದಾಗಿ ಹೇಳಿದ್ದಾರೆ. 'ನನಗೆ ಕೋವಿಡ್ 19 ಪಾಸಿಟಿವ್ ಬಂದಿದೆ. ನಾನು ಮನೆಯಲ್ಲೇ ಕ್ವಾರಂಟೈನ್ ಆಗಿದ್ದೀನಿ. ವೈದ್ಯರ ಸಲಹೆ ಮೇರೆಗೆ ನಾನು ಎಲ್ಲಾ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತಿದ್ದೇನೆ. ನಿಮ್ಮೆಲ್ಲರ ಪ್ರೀತಿ ಬೆಂಬಲಕ್ಕೆ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.

  'RRR' ಬಳಿಕ ಅಲ್ಲು ಅರ್ಜುನ್ ಜೊತೆ ತೆರೆಹಂಚಿಕೊಂಡ ಬಾಲಿವುಡ್ ಖ್ಯಾತ ನಟಿ ಅಲಿಯಾ ಭಟ್'RRR' ಬಳಿಕ ಅಲ್ಲು ಅರ್ಜುನ್ ಜೊತೆ ತೆರೆಹಂಚಿಕೊಂಡ ಬಾಲಿವುಡ್ ಖ್ಯಾತ ನಟಿ ಅಲಿಯಾ ಭಟ್

  ಕಳೆದ ಎರಡು ವಾರದ ಹಿಂದೆ ಕೊರೊನಾ ಸೋಂಕಿಗೆ ತುತ್ತಾಗಿದ್ದ ನಟ ರಣಬೀರ್ ಮನೆಯಲ್ಲೇ ಕ್ವಾರಂಟೈನ್ ಆಗಿದ್ದರು. ಸದ್ಯ ರಣಬೀರ್ ಚೇತರಿಸಿಕೊಂಡಿದ್ದಾರೆ. ಅಲಿಯಾ ಸದ್ಯ ಗಂಗೂಬಾಯಿ ಕಥಿಯಾವಾಡಿ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಕೂಡ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಹಾಗಾಗಿ ಚಿತ್ರೀಕರಣವನ್ನು ಮುಂದೂಡಲಾಗಿತ್ತು.

  ಇದೀಗ ನಾಯಕಿ ಅಲಿಯಾಗೂ ಕೊರೊನಾ ಸೋಂಕು ಇರುವುದು ದೃಢಪಟ್ಟಿರುವುದರಿಂದ ಚಿತ್ರೀಕರಣ ಮತ್ತೆ ಮುಂದೂಡಲಾಗಿದೆ. ಅಲಿಯಾ ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು ಮತ್ತು ಸ್ನೇಹಿತರು ಹಾರೈಸುತ್ತಿದ್ದಾರೆ. ಅಲಿಯಾ ಬಹುನಿರೀಕ್ಷೆಯ ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣದಲ್ಲೂ ಭಾಗಿಯಾಗಬೇಕಿದೆ.

  Yuvarathnaa Haunted By Piracy ಟೆಲಿಗ್ರಾಮ್ ಗಳಲ್ಲಿ ಹರಿದಾಡುತ್ತಿದೆ ಯುವರತ್ನ ಸಿನಿಮಾ ಲಿಂಕ್ | Filmibeat

  ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿದ್ದು ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಕೊರೊನಾ ಎರಡನೇ ಅಲೆಯಲ್ಲಿ ಅನೇಕ ಸೆಲೆಬ್ರಿಟಿಗಳು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಸಿನಿಮಾ ಶೂಟಿಂಗ್, ಪ್ರಮೋಷನ್ ಜೊತೆಗೆ ಆರೋಗ್ಯದ ಕಡೆಯೂ ಎಚ್ಚರಿಕೆ ವಹಿಸಲಿ ಎನ್ನುವುದು ಎಲ್ಲರ ಆಶಯ.

  English summary
  Bollywood Actress Alia Bhatt tests positive for Corona. she updates on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X