For Quick Alerts
  ALLOW NOTIFICATIONS  
  For Daily Alerts

  ಬ್ಯಾಟ್ ಹಿಡಿದು ಫೀಲ್ಡ್ ಗೆ ಇಳಿದ ವಿರಾಟ್ ಪತ್ನಿ: ಕ್ರಿಕೆಟ್ ಆಟಗಾರ್ತಿಯಾದ ನಟಿ ಅನುಷ್ಕಾ

  |
  Anushka Sharma playing Cricketer Jhulan Goswami biopic | ANUSHKA SHARMA | JHULAN GOSWAMI

  ಬಾಲಿವುಡ್ ನ ಖ್ಯಾತ ನಟಿ ಮತ್ತು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ಪತ್ನಿ ಅನುಷ್ಕಾ ಶರ್ಮಾ ಸದ್ಯ ಯಾವುದೆ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಝೀರೋ ಸಿನಿಮಾದ ನಂತರ ಅನುಷ್ಕಾ ಸಿನಿಮಾದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದರು. ಆದರು ಆನುಷ್ಕಾ ಸದಾ ಸುದ್ದಿಯಲ್ಲಿರುತ್ತಿದ್ದ ನಟಿ.

  ಅನುಷ್ಕಾ ಈಗ ಮತ್ತೊಂದು ವಿಚಾರಕ್ಕೆ ಸದ್ದು ಮಾಡುತ್ತಿದ್ದಾರೆ. ಹೌದು, ಪತಿಯ ಹಾಗೆ ಅನುಷ್ಕಾ ಕೂಡ ಬ್ಯಾಟ್ ಹಿಡಿದು ಫೀಲ್ಡ್ ಗೆ ಇಳಿದಿದ್ದಾರೆ. ಅಂದರೆ, ಅನುಷ್ಕಾ ಕೂಡ ಕ್ರಿಕೆಟ್ ಆಟಗಾರ್ತಿ ಆದರ ಎಂದು ಅಂದುಕೊಳ್ಳುತ್ತಿದ್ದಿದಾ. ಅನುಷ್ಕಾ ಕ್ರಿಕೆಟರ್ ಆಗಿದ್ದು ನಿಜ. ಆದರೆ ರಿಯಲ್ ಆಗಿ ಅಲ್ಲ. ರೀಲ್ ಮೇಲೆ.

  'ಟೀಂ ಇಂಡಿಯಾ ಆಯ್ಕೆ ಸಮಿತಿ ಅನುಷ್ಕಾಗೆ ಟೀ ಸಪ್ಲೈ ಮಾಡುತ್ತಿದ್ದರು' ಆರೋಪಕ್ಕೆ ಅನುಷ್ಕಾ ಖಡಕ್ ಪ್ರತಿಕ್ರಿಯೆ'ಟೀಂ ಇಂಡಿಯಾ ಆಯ್ಕೆ ಸಮಿತಿ ಅನುಷ್ಕಾಗೆ ಟೀ ಸಪ್ಲೈ ಮಾಡುತ್ತಿದ್ದರು' ಆರೋಪಕ್ಕೆ ಅನುಷ್ಕಾ ಖಡಕ್ ಪ್ರತಿಕ್ರಿಯೆ

  ಹೌದು, ಅನುಷ್ಕಾ ಶರ್ಮಾ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ದಿಗ್ಗಜ ಆಟಗಾರ್ತಿ ತಂಡದ ಮಾಜಿ ನಾಯಕಿ ಜೂಲನ್ ನಿಶಿತ್ ಗೋಸ್ವಾಮಿ ಜೀವನ ಚರಿತ್ರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೆ ಅನುಷ್ಕಾ ಸದ್ದಿಲ್ಲದೆ ಚಿತ್ರೀಕರಣ ಕೂಡ ಪ್ರಾರಂಭಿಸಿದ್ದಾರೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ಚಿತ್ರೀಕರಣ ಮಾಡಲಾಗುತ್ತಿದ್ದು, ಭಾರತೀಯ ಕ್ರಿಕೆಟ್ ತಂಡದ ಜರ್ಸಿ ಹಾಕಿ ಅನುಷ್ಕಾ ಫೀಲ್ಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರೀಕರಣ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  ಅನುಷ್ಕಾ ಯಾವ ಸಿನಿಮಾದಲ್ಲೂ ಕಾಣಿಸಿಕೊಳ್ಳುತ್ತಿಲ್ಲ, ಇನ್ಮುಂದೆ ಅನುಷ್ಕಾ ಬಣ್ಣ ಹಚ್ಚುವುದಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಆದರೀಗ ಅನುಷ್ಕಾ ಸೈಟೆಂಟ್ ಆಗಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇನ್ನು ಚಿತ್ರದ ಬಗ್ಗೆ ಯಾವುದೆ ಮಾಹಿತಿ ಅಧಿಕೃತವಾಗಿ ಬಹಿರಂಗವಾಗಿಲ್ಲ. ಆದರೆ ಅನುಷ್ಕಾ ಚಿತ್ರೀಕರಣ ಮಾಡುತ್ತಿರುವ ಫೋಟೋ ವೈರಲ್ ಆಗಿದೆ.

  ವಿಶೇಷ ಅಂದರೆ ಚಿತ್ರೀಕರಣದಲ್ಲಿ ಆಟಗಾರ್ತಿ ಜುಲನ್ ಗೋಸ್ವಾಮಿ ಕೂಡ ಭಾಗಿಯಾಗಿದ್ದಾರೆ. ಅನುಷ್ಕಾ ಅವರಿಗೆ ಖುದ್ದು ಗೋಸ್ವಾಮಿ ಅವರೆ ಗೈಡ್ ಮಾಡುತ್ತಿದ್ದಾರೆ. ಅಂದ್ಹಾಗೆ ಜುಲನ್ ನಿಶಿತ್ ಗೋಸ್ವಾಮಿ ಆಲ್ ರೌಂಡ್ ಕ್ರಿಕೆಟರ್. 2018 ಆಗಸ್ಟ್ ನಲ್ಲಿ ಗೋಸ್ವಾಮಿ ಟಿ20ಗೆ ನಿವೃತ್ತಿ ಘೋಷಿಸಿದ್ದಾರೆ. 2011ರಲ್ಲಿ ಗೋಸ್ವಾಮಿ ಉತ್ತಮ ಆಟಗಾರ್ತಿ ಎಂ.ಎ ಚಿದಂಬರಂ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

  ಇನ್ನು ಈಗಾಗಲೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಬಯೋಪಿಕ್ ಕೂಡ ಸಿದ್ಧವಾಗುತ್ತಿದೆ. ಮಿಥಾಲಿ ರಾಜ್ ಪಾತ್ರದಲ್ಲಿ ನಟಿ ತಾಪ್ಸಿ ಪನ್ನು ಕಾಣಿಸಿಕೊಳ್ಳುತ್ತಿದ್ದಾರೆ. ಮಹಿಳಾ ಕ್ರಿಕೆಟ್ ತಂಡದ ಇಬ್ಬರು ಆಟಗಾರ್ತಿಯ ಜೀವನ ಚರಿತ್ರೆ ತೆರೆ ಮೇಲೆ ಬರುತ್ತಿದ್ದು ಚಿತ್ರಾಭಿಮಾನಿಗಳು ಮತ್ತು ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.

  English summary
  Bollywood actress Anushka Sharma playing Cricketer Jhulan Goswami biopic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X