»   » ಮದುವೆಯಾದ ಮೇಲೂ ಲಿಪ್ ಲಾಕ್ : ಅನುಷ್ಕಾ ಹೇಳಿಕೆಗೆ ಬಾಲಿವುಡ್ ತಬ್ಬಿಬ್ಬು!

ಮದುವೆಯಾದ ಮೇಲೂ ಲಿಪ್ ಲಾಕ್ : ಅನುಷ್ಕಾ ಹೇಳಿಕೆಗೆ ಬಾಲಿವುಡ್ ತಬ್ಬಿಬ್ಬು!

Posted By:
Subscribe to Filmibeat Kannada

ಚಿತ್ರೋದ್ಯಮದಲ್ಲಿ ಸಾಮಾನ್ಯವಾಗಿ ಮದುವೆಯಾದ ಮೇಲೆ ನಟಿಯರು ಮತ್ತೆ ತಮ್ಮ ನಟನಾ ವೃತ್ತಿಗೆ ಮರಳುವುದು ಕಮ್ಮಿ. ಆದರೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮದುವೆಯಾದ ಮೇಲೆ ನಟನೆ ಮುಂದುವರಿಸಿಕೊಂಡು ಹೋಗುತ್ತೇನೆ ಎಂದಿದ್ದಾಳೆ.

ಅಷ್ಟೇ ಹೇಳಿದ್ದರೆ ಸುದ್ದಿಯಾಗುತ್ತಿರಲಿಲ್ಲ, ಈಗ ಹೇಗೆ ಲಿಪ್ ಲಾಕ್ ದೃಶ್ಯದಲ್ಲಿ, ಹಸಿಬಿಸಿ ದೃಶ್ಯದಲ್ಲಿ ಕಾಣಿಸುತ್ತಿದ್ದೇನೋ ಮದುವೆಯಾದ ಮೇಲೂ ಅದನ್ನು ಮುಂದುವರಿಸಿಕೊಂಡು ಹೋಗುತ್ತೇನೆಂದು ಹೇಳಿದ್ದಾಳೆ.

ಅನುಷ್ಕಾ ಈ ಹೇಳಿಕೆಯಿಂದ ಆಕೆಯ ಅಭಿಮಾನಿಗಳಿಗೆ ಖುಷಿಯಾಗಿದ್ದರೆ, ಆಕೆಯ ಪ್ರಿಯಕರ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ಏನೆಂದು ತಿಳಿದು ಬಂದಿಲ್ಲ.

Anushka Sharma sensational statement about Lip-lock

ಮದುವೆಯಾದ ಮೇಲೂ ಲಿಪ್ ಲಾಕ್ ದೃಶ್ಯದಲ್ಲಿ ಕಾಣಿಸಿಕೊಂಡರೆ ಏನು ತಪ್ಪು? ಕೆಲವು ನಟಿಯರು ಮದುವೆಯಾದ ಮೇಲೆ ಇಂತಹ ದೃಶ್ಯಗಳಲ್ಲಿ ನಟಿಸಲು ಹಿಂಜರಿಯುತ್ತಾರೆ.

ನಾನಂತೂ ಎಂಥಾ ದೃಶ್ಯಕ್ಕೂ ಸಿದ್ದ ಎಂದು ಅನುಷ್ಕಾ ಶರ್ಮಾ ಹೇಳುವ ಮೂಲಕ ಪಡ್ಡೆಗಳನ್ನು ಬೆಚ್ಚಿಬೀಳಿಸಿದ್ದಾರೆ.

ಕ್ರಿಕೆಟಿಗ ವಿರಾಟ್ ಕೊಹ್ಲಿ ಜೊತೆ ದೇಶ, ವಿದೇಶ ಸುತ್ತಿ ಸದ್ದು ಮಾಡಿದ್ದ ಅನುಷ್ಕಾ, ಸೀರಿಯಲ್ ಕಿಸ್ಸರ್ ಎಮ್ರಾನ್ ಹಷ್ಮಿ ನಾಚುವಂತಹ ಹೇಳಿಕೆಯನ್ನು ಬಾಲಿವುಡ್ ಜಗಲಿ ಹುಬ್ಬೇರಿಸುವಂತೆ ಮಾಡಿದ್ದಾರೆ.

ಪ್ಯಾಂಟೇನ್ ಸಂಸ್ಥೆಯ ಉತ್ಪನ್ನಗಳ ರಾಯಭಾರಿಯಾದ ನಂತರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ ಅನುಷ್ಕಾ ಈ ಹೇಳಿಕೆ ನೀಡಿದ್ದಾರೆ.

English summary
Bollywood actress Anushka Sharma says, there is nothing wrong in acting in a lip lock scene after marriage.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X