For Quick Alerts
  ALLOW NOTIFICATIONS  
  For Daily Alerts

  ಸಾಹಸ ಮಾಡಲು ಹೋದ ನಟಿ ಜಾಕ್ವೆಲಿನ್ ಕಣ್ಣಿಗೆ ಶಾಶ್ವತ ಗಾಯ.!

  By Harshitha
  |

  ತೆರೆಮೇಲೆ ನಟ-ನಟಿಯರ ಸಾಹಸ ನೋಡಲು ಥ್ರಿಲ್ಲಿಂಗ್ ಆಗಿರುತ್ತದೆ. ಆದ್ರೆ, ಆ ಸಾಹಸವನ್ನ ನಟ-ನಟಿಯರು ಎಷ್ಟು ಕಷ್ಟ ಪಟ್ಟು ಮಾಡಿರುತ್ತಾರೆ ಅನ್ನೋದು ಪ್ರೇಕ್ಷಕರಿಗೆ ಅಷ್ಟಾಗಿ ಗೊತ್ತಿರಲಿಕ್ಕಿಲ್ಲ. ಒಂದು ಆಕ್ಷನ್ ಸನ್ನಿವೇಶ ಪರ್ಫೆಕ್ಟ್ ಆಗಿ ಬರಬೇಕು ಅಂದ್ರೆ, ಅದರ ಹಿಂದೆ ಹಲವರ ಪರಿಶ್ರಮ ಇದ್ದೇ ಇರುತ್ತದೆ. ಕೆಲವೊಮ್ಮೆ ಸಾಹಸ ಮಾಡಲು ಹೋಗಿ ನಟ-ನಟಿಯರಿಗೆ ಆಪತ್ತು ಎದುರಾಗಿರುವುದೂ ಇದೆ. ನಟಿ ಜಾಕ್ವೆಲಿನ್ ಫರ್ನಾಂಡಿಸ್ ರವರಿಗೂ ಆಗಿರುವುದು ಇದೇ.

  'ರೇಸ್-3' ಸಿನಿಮಾದಲ್ಲಿ ಸಾಹಸ ಮಾಡಲು ಹೋದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕಣ್ಣಿಗೆ ಪೆಟ್ಟಾಗಿತ್ತು. ಈಗ ಅದು ಶಾಶ್ವತ ಗಾಯ, ಅದನ್ನ ಸರಿಪಡಿಸಲು ಸಾಧ್ಯವೇ ಇಲ್ಲ ಎಂಬ ಸಂಗತಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಗೊತ್ತಾಗಿದೆ.

  ಅರೇ.. ಜಾಕ್ವೆಲಿನ್ ಗೆ ಏನಾಯ್ತು.? ಜಾಕ್ವೆಲಿನ್ ಮಾಡಲು ಹೋದ ಸಾಹಸ ಎಂಥದ್ದು.? ಜಾಕ್ವೆಲಿನ್ ಕಣ್ಣಿಗೆ ಏನಾಗಿದೆ.? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಓದಿರಿ...

  ಮಾರ್ಚ್ ನಲ್ಲಿ ಆಗಿದ್ದ ಗಾಯ.!

  ಮಾರ್ಚ್ ನಲ್ಲಿ ಆಗಿದ್ದ ಗಾಯ.!

  ಕಳೆದ ಮಾರ್ಚ್ ತಿಂಗಳಲ್ಲಿ 'ರೇಸ್-3' ಸಿನಿಮಾದ ಚಿತ್ರೀಕರಣ ಅಬು ಧಾಬಿಯಲ್ಲಿ ನಡೆಯುತ್ತಿದ್ದಾಗ ಸ್ಕ್ವಾಶ್ ಆಡಲು ಹೋಗಿ ನಟಿ ಜಾಕ್ವೆಲಿನ್ ಕಣ್ಣಿಗೆ ಪೆಟ್ಟು ಬಿದ್ದಿತ್ತು. ''ಇದು ಸಣ್ಣ-ಪುಟ್ಟ ಗಾಯವಷ್ಟೇ'' ಎಂದು ಅಂದು ಪ್ರತಿಕ್ರಿಯೆ ಕೊಟ್ಟಿದ್ದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಇದೀಗ ತಮ್ಮ ಕಣ್ಣಿಗೆ ಬಿದ್ದಿರುವ ಪೆಟ್ಟು ಶಾಶ್ವತವಾದದ್ದು ಎಂಬ ಸಂಗತಿ ಅರಿವಿಗೆ ಬಂದಿದೆ.

  ಜಾಕ್ವೆಲಿನ್ ಜೊತೆ ಅಭಿಮಾನಿಗಳ ಅಸಭ್ಯ ವರ್ತನೆ: ನಟಿಯರ ಗೋಳು ಕೇಳೋರ್ಯಾರು.?ಜಾಕ್ವೆಲಿನ್ ಜೊತೆ ಅಭಿಮಾನಿಗಳ ಅಸಭ್ಯ ವರ್ತನೆ: ನಟಿಯರ ಗೋಳು ಕೇಳೋರ್ಯಾರು.?

  ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿರುವ ನಟಿ

  ''ಇದು ನನ್ನ ಕಣ್ಣಿಗೆ ಆಗಿರುವ ಶಾಶ್ವತ ಗಾಯ. ನನ್ನ ಐರಿಸ್ ಇನ್ಮುಂದೆ ಗೋಲಾಕಾರವಾಗಿ ಇರುವುದಿಲ್ಲ. ಆದ್ರೆ, ನನ್ನ ದೃಷ್ಟಿಗೆ ಯಾವುದೇ ಸಮಸ್ಯೆ ಆಗಿಲ್ಲ'' ಎಂದು ಇನ್ಸ್ಟಾಗ್ರಾಮ್ ನಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಬರೆದುಕೊಂಡಿದ್ದಾರೆ.

  ಸಲ್ಮಾನ್ ಬೆಡಗಿ ಚಲಿಸುತ್ತಿದ್ದ ಕಾರ್ ಗೆ ಅಪಘಾತಸಲ್ಮಾನ್ ಬೆಡಗಿ ಚಲಿಸುತ್ತಿದ್ದ ಕಾರ್ ಗೆ ಅಪಘಾತ

  ಸೂಪರ್ ಸ್ಟಂಟ್ಸ್ ಮಾಡಿರುವ ನಟಿ ಜಾಕ್ವೆಲಿನ್

  ಸೂಪರ್ ಸ್ಟಂಟ್ಸ್ ಮಾಡಿರುವ ನಟಿ ಜಾಕ್ವೆಲಿನ್

  'ರೇಸ್-3' ಚಿತ್ರದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮೈನವಿರೇಳಿಸುವ ಸ್ಟಂಟ್ಸ್ ಮಾಡಿದ್ದಾರೆ. ಯಾವುದೇ ಸ್ಟಂಟ್ ಆದರೂ ಅದನ್ನ ನೀರು ಕುಡಿದಷ್ಟೇ ಸಲೀಸಾಗಿ ಮಾಡುವುದರಲ್ಲಿ ನಟಿ ಜಾಕ್ವೆಲಿನ್ ಎತ್ತಿದ ಕೈ. ಆದ್ರೆ, 'ರೇಸ್-3' ಚಿತ್ರದಲ್ಲಿ ಆದ ಒಂದು ಎಡವಟ್ಟಿನ ಪರಿಣಾಮ ಅವರ ಕಣ್ಣಿಗೆ ಶಾಶ್ವತ ಗಾಯವಾಗಿದೆ.

  'ರೇಸ್-3' ಸದ್ಯದಲ್ಲೇ ಬಿಡುಗಡೆ

  'ರೇಸ್-3' ಸದ್ಯದಲ್ಲೇ ಬಿಡುಗಡೆ

  ಜೂನ್ 15 ರಂದು ರಂಝಾನ್ ಹಬ್ಬದ ಪ್ರಯುಕ್ತ 'ರೇಸ್-3' ಬಿಡುಗಡೆ ಆಗಲಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್, ಜಾಕ್ವೆಲಿನ್ ಫರ್ನಾಂಡಿಸ್, ಡೈಸಿ ಶಾ, ಅನಿಲ್ ಕಪೂರ್, ಬಾಬಿ ಡಿಯೋಲ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಚಿತ್ರಕ್ಕೆ ರೆಮೋ ಡಿಸೋಜಾ ಆಕ್ಷನ್ ಕಟ್ ಹೇಳಿದ್ದಾರೆ.

  English summary
  Bollywood Actress Jacqueline Fernandez suffers permanent eye injury.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X