For Quick Alerts
  ALLOW NOTIFICATIONS  
  For Daily Alerts

  ವಯಸ್ಸು 48 ಆದ್ರು ಮಾಸದ ಚೆಲುವು: ತಮ್ಮ ಸೌಂದರ್ಯದ ರಹಸ್ಯ ಬಿಚ್ಚಿಟ್ಟ ಕಾಜೋಲ್

  |

  90ರ ದಶಕದ ಬಾಲಿವುಡ್ ಸಿನಿರಸಿಕರ ನೆಚ್ಚಿನ ನಟಿ ಕಾಜೋಲ್. 'ಬಾಜೀಗರ್', 'ಡಿಡಿಎಲ್‌ಜೆ' ರೀತಿಯ ಹಿಟ್ ಸಿನಿಮಾಗಳಿಂದ ಮನೆಮಾತಾದ ಚೆಲುವೆ. ಇವತ್ತಿಗೂ ಕಾಜೋಲ್ ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಆಕೆಯ ಸೌಂದರ್ಯಕ್ಕೆ ಮಾರು ಹೋಗದವರಿಲ್ಲ.

  ನಿಮ್ಮ ಸಿನಿಮಾದಲ್ಲಿ ಅವಕಾಶ ಕೊಡಿ: ರಿಷಬ್‌ಗೆ ಮನವಿ ಮಾಡಿದ ಬಾಲಿವುಡ್‌ ಸ್ಟಾರ್ನಿಮ್ಮ ಸಿನಿಮಾದಲ್ಲಿ ಅವಕಾಶ ಕೊಡಿ: ರಿಷಬ್‌ಗೆ ಮನವಿ ಮಾಡಿದ ಬಾಲಿವುಡ್‌ ಸ್ಟಾರ್

  ವಯಸ್ಸು 48 ದಾಟಿದರೂ ಯುವ ನಟಿಯರಿಗೆ ಪೈಪೋಟಿ ನೀಡುವಂತಹ ಚೆಲುವೆ ಈಕೆ. ಕೆಲವರು ಕಾಜೋಲ್ ಈ ವಯಸ್ಸಿನಲ್ಲಿ ಇಷ್ಟು ಸುಂದರವಾಗಿ ಏನೆಲ್ಲಾ ಮಾಡ್ತಾರೋ ಏನೋ ಎಂದು ಯೋಚಿಸುತ್ತಿದ್ದಾರೆ. ಕೃಷ್ಣ ಸುಂದರಿ ಆದರೂ ಆಕೆಯ ಮಾಸದ ಚೆಲುವೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯ ಕಾಜೋಲ್ ಮತ್ತೊಮ್ಮೆ ತಮ್ಮ ಸೌಂದರ್ಯದ ಗುಟ್ಟು ರಟ್ಟು ಮಾಡಿದ್ದಾರೆ.

  ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಅಜಯ್ ದೇವಗನ್ ಪತ್ನಿ ತಮ್ಮ ಸೌಂದರ್ಯದ ಬಗ್ಗೆ ಮಾತನಾಡಿದ್ದಾರೆ. ಈ 3 ಅಂಶಗಳನ್ನು ಅನುಸರಿಸಿದರೆ ಸೌಂದರ್ಯ ಕಾಪಾಡಿಕೊಳ್ಳುವುದು ಕಷ್ಟ ಅಲ್ಲ ಎಂದಿದ್ದಾರೆ. ತಾನು ಕೂಡ ಅದನ್ನೇ ಮಾಡುತ್ತೇನೆ ಎಂದಿದ್ದಾರೆ. ಚರ್ಮದ ಮೇಲೆ ಅನಗತ್ಯ ಪ್ರಯೋಗಗಳು ಬೇಡ ಎಂದು ಕಾಜೋಲ್ ಹೇಳಿದ್ದಾರೆ. ಸಹಜ ಮಾರ್ಗಗಳಿಂದ ಉತ್ತಮ ಸೌಂದರ್ಯ ಸ್ವಂತ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

  ಅಮ್ಮ ಕೊಟ್ಟ ಟಿಪ್ಸ್‌ಗಳೇ ಈ ವಯಸ್ಸಿನಲ್ಲೂ ಈ ರೀತಿ ಇರಲು ಕಾರಣ. "ಚರ್ಮದ ಮೇಲೆ ಪ್ರಯೋಗ ಬೇಡ. ಎಂದು ಟೀನೇಜ್‌ನಲ್ಲೇ ಅಮ್ಮ ವಾರ್ನಿಂಗ್ ನೀಡಿದ್ದರು. ಹಾಗಾಗಿ ಯಾವುದೇ ಪ್ರಯೋಗ ಮಾಡಲ್ಲ. ಎಲ್ಲಾ ನ್ಯಾಚುರಲ್ ಥಿಂಗ್ಸ್. ದಿನಕ್ಕೆ ಕನಿಷ್ಠಪಕ್ಷ 8 ಲೋಟ ನೀರು ಕುಡಿಯಬೇಕು. ಅದು ದೇಹದ ಸೌಂದರ್ಯಕ್ಕೂ ಅವಶ್ಯಕ. ಎರಡನೆಯದು ಆಹಾರ. ಮೂರನೇಯದು ಒಳ್ಳೆ ನಿದ್ರೆ. ಊಟದ ವಿಚಾರದಲ್ಲಿ ಕಾಂಪ್ರಮೈಸ್ ಆದರೂ ನಿದ್ರೆ ವಿಚಾರದಲ್ಲಿ ಆಗುವುದಿಲ್ಲ ಎಂದಿದ್ದಾರೆ.

  Bollywood Actress Kajols Beauty Secrets Revealed

  ಪ್ರತಿದಿನ ಆರಾಮಾಗಿ ನಿದ್ರೆ ಮಾಡುತ್ತೇನೆ. ಕನಿಷ್ಠ 10 ಗಂಟೆಗಳ ಕಾಲ ನಿದ್ರೆ ಮಾಡುತ್ತೇನೆ. ನಿದ್ರೆ ಹಾಳು ಮಾಡುವಂತ ವಿಷಯಗಳ ಬಗ್ಗೆ ಜಾಸ್ತಿ ಯೋಚಿಸಲ್ಲ. ಇದೆಲ್ಲಾ ನಮ್ಮ ತಾಯಿ(ತನುಷಾ ಮುಖರ್ಜಿ) ನನಗೆ ಹಾಗೂ ನನ್ನ ತಂಗಿಗೆ ನೀಡಿದ ಬ್ಯೂಟಿ ಟಿಪ್ಸ್ ಎಂದು ಕಾಜೋಲ್ ಹೇಳಿದ್ದಾರೆ. ಕಳೆದ ವಾರವಷ್ಟೆ ಕಾಜೋಲ್ ನಟನೆಯ 'ಸಲಾಂ ವೆಂಕಿ' ಸಿನಿಮಾ ಬಿಡುಗಡೆ ಆಗಿತ್ತು. 'ಲಸ್ಟ್ ಸ್ಟೋರಿಸ್'- 2 ಜೊತೆಗೆ ಮತ್ತೊಂದು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

  English summary
  Bollywood Actress Kajol's Beauty Secrets Revealed. 48 year Actress Kajol once again shares her anti-ageing Secrets. know more.
  Wednesday, December 21, 2022, 5:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X