»   » ಕತ್ರಿನಾ ಕೈಫ್ 33: ಏಳು-ಬೀಳುಗಳ ಜರ್ನಿಯ ಬಗ್ಗೆ ಒಂದಿಷ್ಟು

ಕತ್ರಿನಾ ಕೈಫ್ 33: ಏಳು-ಬೀಳುಗಳ ಜರ್ನಿಯ ಬಗ್ಗೆ ಒಂದಿಷ್ಟು

Posted By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನ ಬಾರ್ಬಿ ಡಾಲ್ ಕತ್ರಿನಾ ಕೈಫ್ ಅವರಿಗೆ ಇಂದು 33 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಬ್ರಿಟಿಷ್ ಮೂಲದ ನಟಿ ಕೈಫ್ ಅವರು ಜುಲೈ 16, 1983 ರಲ್ಲಿ ಹಾಂಗ್ ಕಾಂಗ್ ನಲ್ಲಿ ಜನಿಸಿದರು.

ಬರ್ತ್ ಡೇ ಗರ್ಲ್ ಆಗಿರುವ ನಟಿ ಕತ್ರಿನಾ ಅವರಿಗೆ ಬಾಲಿವುಡ್ ನ ಸ್ಟಾರ್ ನಟ-ನಟಿಯರು ಮುಂಬೈನ ಬಾಂದ್ರಾದಲ್ಲಿರುವ ಕೈಫ್ ಅವರ ಮನೆಗೆ ಆಗಮಿಸಿ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ.[ಇಪ್ಪತ್ತೈದರ ಹರಯಕ್ಕೆ ಕಾಲಿಟ್ಟ ಕತ್ರಿನಾ ಕೈಫ್!]

ತಮ್ಮ ಬಿಟೌನ್ ಗೆಳೆಯ-ಗೆಳತಿಯರಿಗಾಗಿ ಕತ್ರಿನಾ ಅವರು ತಮ್ಮ ನಿವಾಸದಲ್ಲಿಯೇ ಭರ್ಜರಿ ಪಾರ್ಟಿ ಕೂಡ ಆರೇಂಜ್ ಮಾಡಿದ್ದಾರೆ. ನಟಿ ಆಲಿಯಾ ಭಟ್, ಸಿದ್ಧಾರ್ಥ್ ಮಲ್ಹೋತ್ರಾ, ನಟ ಕಮ್ ನಿರ್ದೇಶಕ ಕರಣ್ ಜೋಹರ್, ಅತುಲ್ ಅಗ್ನಿ ಹೊತ್ರಿ, ಮುಂತಾದವರು ಆಗಮಿಸಿ ಕ್ಯಾಟ್ ಹುಟ್ಟುಹಬ್ಬದ ಸಂಭ್ರಮದ ಕ್ಷಣಗಳಲ್ಲಿ ಭಾಗಿಯಾಗಿದ್ದಾರೆ.

ಕ್ಯಾಟ್ 30ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ರಣಬೀರ್ ಕಪೂರ್ ಅವರು ಭಾಗಿಯಾಗಿದ್ದರು. ಆದರೆ ಈ ಬಾರಿ ಮಾತ್ರ ಕೈಫ್ ತಮ್ಮ ಬಾಲಿವುಡ್ ನ ಆಪ್ತ ಸ್ನೇಹಿತರ ಜೊತೆ ಮಾತ್ರ ಬರ್ತ್ ಡೇ ಆಚರಿಸಿಕೊಳ್ಳುತ್ತಿದ್ದಾರೆ.

ಇದೀಗ ಗ್ಲಾಮರ್ ಬೊಂಬೆ ಕತ್ರಿನಾ ಕೈಫ್ ಅವರ 33ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಅವರ ಬಗ್ಗೆ ಕೆಲವು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಳ್ಳೋಣ. ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

ಮೂಲತಃ ಬ್ರಿಟಿಷ್ ಬೆಡಗಿ

ಬಾರ್ಬಿ ಡಾಲ್ ಕತ್ರಿನಾ ಅವರು ಮೂಲತಃ ಬ್ರಿಟಿಷ್ ಕುಟುಂಬದ ಹುಡುಗಿ. ಇವರು ಜನಿಸಿದ್ದು ಹಾಂಗ್ ಕಾಂಗ್ ನಲ್ಲಿ. ಇವರು ತರುಣಿಯಾಗಿರುವಾಗಲೇ ಇವರ ತಂದೆ-ತಾಯಿ ವಿಚ್ಛೇದನ ಪಡೆದುಕೊಂಡ ಕಾರಣ ಈ ನಟಿಗೆ ಅಪ್ಪ-ಅಮ್ಮನ ಪ್ರೀತಿ ಸಮಾನಾಗಿ ದೊರೆಯಲಿಲ್ಲ. ಇವರ ತಾಯಿ ಕ್ರಿಶ್ಚಿಯನ್, ತಂದೆ ಮುಸ್ಲಿಂ ಜನಾಂಗದವರಾಗಿದ್ದಾರೆ.[ಕೆಟ್ಟ ಮೇಲೆ ಬುದ್ದಿ ಬಂತು ನೋಡಿ ನಮ್ಮ ಕತ್ರಿನಾಗೆ]

ಬರೋಬ್ಬರಿ 7 ಜನ ಒಡಹುಟ್ಟಿದವರು

ಅಂದಹಾಗೆ ನಟಿ ಕತ್ರಿನಾ ಕೈಫ್ ಅವರಿಗೆ ಒಂದಲ್ಲಾ-ಎರಡಲ್ಲಾ ಬರೋಬ್ಬರಿ 7 ಜನ ಇವರೊಂದಿಗೆ ರಕ್ತ ಹಂಚಿಕೊಂಡು ಹುಟ್ಟಿದ್ದಾರೆ. ಇದೀಗ ಇವರ ಇಡೀ ಕುಟುಂಬದವರು ದೇಶದ ವಿವಿಧ ಭಾಗಗಳಲ್ಲಿ ನೆಲೆಸಿದ್ದು, ಕೈಫ್ ಅವರು ಮಾತ್ರ ಭಾರತದಲ್ಲಿ ನೆಲೆಸಿದ್ದಾರೆ.[ಕತ್ರಿನಾ ಜೊತೆ ಲಿಪ್ ಲಾಕ್ ಗೆ ಒಲ್ಲೆ ಎಂದ ರಣಬೀರ್ ಕಪೂರ್]

ಹರೆಯದಲ್ಲೇ ಮಾಡೆಲಿಂಗ್

ನಟಿ ಕತ್ರಿನಾ ಕೈಫ್ ಅವರು ತಾವು 14ರ ಹರೆಯದಲ್ಲಿ ಇರುವಾಗಲೇ ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟರು. ಮೊಟ್ಟ ಮೊದಲ ಬಾರಿಗೆ ಜ್ಯುವೆಲ್ಲರಿ ಕ್ಯಾಂಪೇನ್ ಮೂಲಕ ಮಾಡೆಲಿಂಗ್ ಲೋಕದಲ್ಲಿ ಮಿಂಚಲಾರಂಭಿಸಿದರು. ತದನಂತರ ಲಂಡನ್ ನಲ್ಲಿ ಮಾಡೆಲಿಂಗ್ ಮುಂದುವರಿಸಿದ ಕ್ಯಾಟ್ 'ಲಾ ಸೆನ್ಞ್' ನ ಬ್ರ್ಯಾಂಡ್ ಆದರು.

ಚಿತ್ರರಂಗಕ್ಕೆ ಎಂಟ್ರಿ

ಮೊಟ್ಟ ಮೊದಲ ಬಾರಿಗೆ 'ಕೈಜಾದ್ ಗುಸ್ತಾದ್' ಅವರ 'ಬೂಮ್' (2003) ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಕೈಫ್ ಅವರು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸೋತರು. ಆದರೆ ಆ ಚಿತ್ರದಲ್ಲಿ ಹಾಕಿದ್ದ ಬಿಕಿನಿ ಮೂಲಕ ಭಾರಿ ಸುದ್ದಿಯಾಗಿದ್ದರು. ತದನಂತರ ತೆಲುಗಿನಲ್ಲಿ ವಿಕ್ಟರಿ ವೆಂಕಟೇಶ್ ಅವರ ಜೊತೆ 'ಮಲ್ಲೀಶ್ವರಿ' ಹಾಗೂ 'ಅಲ್ಲರಿ ಪಿಡುಗು' ಚಿತ್ರದಲ್ಲಿ ಮಿಂಚಿ ಹಿಟ್ ಆಗಿ ನಂತರ ಮಲಯಾಳಂನಲ್ಲೂ ಅದೃಷ್ಟ ಪರೀಕ್ಷೆ ಮಾಡಿದರು.

ಬಾಲಿವುಡ್ ನಲ್ಲಿ ನೆಲೆನಿಂತ ಕೈಫ್

ತೆಲುಗು ಹಿಟ್ ಆಗಿ, ಮಲಯಾಳಂ ಕೈ ಹಿಡಿಯದಿದ್ದಾಗ ನಟಿ ಕತ್ರಿನಾ ಅವರಿಗೆ 'ಮೈನೇ ಪ್ಯಾರ್ ಕ್ಯೂಂ ಕೀಯಾ' ಎಂಬ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರ ಜೊತೆ ನಟಿಸಲು ಅವಕಾಶ ಸಿಕ್ತು. ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ಕ್ಲಿಕ್ ಆದ ತಕ್ಷಣ ಕ್ಯಾಟ್ ಗೆ ಅಕ್ಷಯ್ ಕುಮಾರ್ ಅವರ ಜೊತೆ 'ನಮಸ್ತೆ ಲಂಡನ್' ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿತು. ತದನಂತರ ಜಾನ್ ಅಬ್ರಾಹಂ ಮತ್ತು ನೀಲ್ ನಿತಿನ್ ಜೊತೆ 'ನ್ಯೂಯಾರ್ಕ್' ಚಿತ್ರದಲ್ಲಿ ಮಿಂಚಿ 'ಫಿಲ್ಮ್ ಫೇರ್ ಆವಾರ್ಡ್' ಗಿಟ್ಟಿಸಿಕೊಂಡು ಬಾಲಿವುಡ್ ನಲ್ಲೇ ಭದ್ರವಾಗಿ ನೆಲೆನಿಂತರು.

ಇತ್ತೀಚಿನ ಸೂಪರ್ ಹಿಟ್ ಸಿನಿಮಾ

'ಜಿಂದಗಿ ನಾ ಮಿಲೇಂಗೇ ದುಬಾರಾ' 'ಜಬ್ ತಕ್ ಹೈ ಜಾನ್' ಮುಂತಾದ ಹಿಟ್ ಸಿನಿಮಾಗಳನ್ನು ಕೊಟ್ಟ ನಟಿ ಕತ್ರಿನಾ ಕೈಫ್ ಅವರು ಅಮೀರ್ ಖಾನ್ ಅವರ ಜೊತೆ ನಟಿಸಿರುವ 'ಧೂಮ್ 3' ಮತ್ತು ಹೃತಿಕ್ ರೋಷನ್ ಅವರ ಜೊತೆ 'ಬ್ಯಾಂಗ್ ಬ್ಯಾಂಗ್' ಚಿತ್ರದಲ್ಲಿ ಮಿಂಚಿದ್ದರು. ಇವೆರಡು ಇತ್ತೀಚಿನ ಸೂಪರ್ ಹಿಟ್ ಸಿನಿಮಾ ಆಗಿದೆ. 'ಧೂಮ್ 3' ಬಾಕ್ಸಾಫೀಸ್ ನಲ್ಲಿ 500 ಕೋಟಿ ಕಲೆಕ್ಷನ್ ಮಾಡಿತ್ತು. ಈ ಮೂಲಕ ಕ್ಯಾಟ್ ನಿರ್ದೇಶಕರಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ ಆದ್ರು.

ಮುಂದಿನ ಪ್ರಾಜೆಕ್ಟ್

ಸದ್ಯಕ್ಕೆ ಕತ್ರಿನಾ ಅವರು ಹಳೇ ಬಾಯ್ ಫ್ರೆಂಡ್ ರಣಬೀರ್ ಕಪೂರ್ ಜೊತೆ 'ಜಗ್ಗಾ ಜಾಸೂಸ್' ಚಿತ್ರದ ಪ್ರೊಮೋಷನ್ ನಲ್ಲಿ ಬಿಜಿಯಾಗುವುದರ ಜೊತೆಗೆ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ 'ಬಾರ್ ಬಾರ್ ದೇಖೋ' ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

ಲವ್ ಕಹಾನಿ/ಬ್ರೇಕ್ ಅಪ್

ನಟಿ ಕತ್ರಿನಾ ಅವರು ಭಾಯ್ ಜಾನ್ ಸಲ್ಮಾನ್ ಖಾನ್ ಅವರ ಜೊತೆ ಮೂರ್ನಾಲ್ಕು ಸಿನಿಮಾಗಳಲ್ಲಿ ಡ್ಯುಯೆಟ್ ಹಾಡಿ ನಿಜ ಜೀವನದಲ್ಲೂ ಡ್ಯುಯೆಟ್ ಹಾಡತೊಡಗಿದರು. ಆದರೆ ಯಾಕೋ ಏನೋ ಎಡವಟ್ಟಾಗಿ ಕತ್ರಿನಾ ಅವರು ಸಲ್ಲುಮೀಯಾ ಅವರಿಗೆ ಟಾಟಾ ಮಾಡಿ ವಾಪಸ್ ಬಂದರು. ತದನಂತರ 'ಅಜಬ್ ಪ್ರೇಮ್ ಕೀ ಗಜಬ್ ಕಹಾನಿ' ಚಿತ್ರದಲ್ಲಿ ರಣಬೀರ್ ಜೊತೆ ಡ್ಯುಯೆಟ್ ಹಾಡಿದ ಕ್ಯಾಟ್ ಭರ್ತಿ 2 ವರ್ಷಗಳ ಕಾಲ ಲವ್ವಿ-ಡವ್ವಿ ಅಂತ ಊರೆಲ್ಲಾ ಸುತ್ತಾಡಿದ್ರು. ಇದೀಗ ಆ ಸಂಬಂಧ ಕೂಡ ಇತ್ತೀಚೆಗೆ ಮುರಿದು ಬಿದ್ದಿದ್ದು, ರಣಬೀರ್ ಮತ್ತು ಕ್ಯಾಟ್ ನಾನೊಂದು ತೀರ, ನೀನೊಂದು ತೀರ ಎಂದು ದೂರ-ದೂರ ಆಗಿದ್ದಾರೆ.[ರಣಬೀರ್ ಮೇಲೆ ಸೇಡಿನ ಜ್ವಾಲೆ, ಸಲ್ಲು ಜೊತೆ ಸೇರಿಕೊಂಡ ಕ್ಯಾಟ್]

ವಿಶ್ ಮಾಡಿ

ಇಷ್ಟೆಲ್ಲಾ ಸಾಧನೆ ಮಾಡಿ, ಕೆಲವೊಂದು ಕಡೆ ಎಡವಿರುವ ಬಾರ್ಬಿ ಡಾಲ್ ಕತ್ರಿನಾ ಕೈಫ್ ಅವರು ಇನ್ನೂ ಎತ್ತರಕ್ಕೆ ಏರಲಿ ಅಂತ ಹಾರೈಸುತ್ತಾ ಹ್ಯಾಪಿ ಬರ್ತ್ ಡೇ ಹೇಳೋಣ.

English summary
Bollywood Actress Katrina Kaif has turned 33rd Today (July 16th). She celebrated her birthday in style with her bollywood friends. Here is the interesting factors about actress Katrina Kaif check it.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada