For Quick Alerts
  ALLOW NOTIFICATIONS  
  For Daily Alerts

  ಕತ್ರಿನಾ ಕೈಫ್ ಮುಖದಲ್ಲಿ ಮಂದಹಾಸ ಮಾಯ!

  |

  ಬಾಲಿವುಡ್ ಮೋಹಕ ತಾರೆ ಕತ್ರಿನಾ ಕೈಫ್ ಮುಖದಲ್ಲಿ ಮಂದಹಾಸ ಮಾಯವಾಗಿದೆ. ಸದ್ಯಕ್ಕೆ ಬಾಲಿವುಡ್ ನಲ್ಲಿ ಬಹುಬೇಡಿಕೆ ತಾರೆಯಾಗಿರುವ ನಟಿ ಕತ್ರಿನಾಗೆ ಬೇಸರ ಹಾಗೂ ದುಃಖ ಕಾಡುತ್ತಿದೆಯೇ? ಹಿಗೊಂದು ಪ್ರಶ್ನೆ ಬೇಡವೆಂದರೂ ಕತ್ರಿನಾ ಮುಖ ನೋಡಿದರೆ ಎಲ್ಲರ ಮನದಲ್ಲಿ ಮೂಡಿವಂತಿದೆ. ಹಾಗಿದ್ದರೆ ಕತ್ರಿನಾ ಬೇಸರದ ಹಿಂದಿರುವ ಕಾರಣವಾದರೂ ಏನು?

  ಸುದ್ದಿ ಮೂಲಗಳ ಪ್ರಕಾರ ಕತ್ರಿನಾ ದುಃಖಕ್ಕೆ ಮೂಲ ಕಾರಣ ಅವರು ಒಂಟಿಯಾಗಿರುವುದು ಅಥವಾ ಒಬ್ಬಂಟಿ ಎಂಬ ಭಾವ ಕಾಡುತ್ತಿರುವುದು. ಈ ಸಂಗತಿಗೆ ಪುಷ್ಠಿ ಕೊಡುವ ನಿಟ್ಟಿನಲ್ಲಿ ಇತ್ತೀಚಿಗೊಂದು ಘಟನೆ ನಡೆದಿದೆ. ಅಮೀರ್ ಖಾನ್ ರೊಂದಿಗೆ 'ಧೂಮ್- 3' ಚಿತ್ರೀಕರಣಕ್ಕೆಂದು ಶಿಕಾಗೋದಲ್ಲಿರುವ ಕತ್ರಿನಾಗೆ ಯಶ್ ರಾಜ್ ಬ್ಯಾನರ್ ಉಳಿದುಕೊಳ್ಳಲು ಅಪಾರ್ಟ್ ಮೆಂಟ್ ಒಂದನ್ನು ನೀಡಿತ್ತು.

  ಆದರೆ ಕೊಟ್ಟ ಅಪಾರ್ಟ್ ಮೆಂಟ್ ನಿರಾಕರಿಸಿದ ಕತ್ರಿನಾ, ಹೊಟೆಲ್ ನಲ್ಲೇ ತಾವು ಉಳಿದುಕೊಳ್ಳುವುದಾಗಿ ವಿನಂತಿಸಿಕೊಂಡಿದ್ದಾರೆ. ಸುದ್ದಿ ಮೂಲಗಳ ಪ್ರಕಾರ "ಅಪಾರ್ಟ್ ಮೆಂಟ್ ನಲ್ಲಿ ತಾವು ಒಬ್ಬಂಟಿಯಾಗಿ ಉಳಿದುಕೊಳ್ಳಲು ಕತ್ರಿನಾಗೆ ಇಷ್ಟವಿಲ್ಲ. ಈ ಅನುಭವ ಅವರಿಗೆ ಮುಂಬೈನಲ್ಲಿಯೇ ಆಗಿದೆ. ಹೀಗಿರುವಾಗ ಅವರು ಎಲ್ಲಿಯೇ ಶೂಟಿಂಗ್ ಗೆ ಹೊರಗೆ ಹೋದರೂ ಹೊಟೆಲ್ ನಲ್ಲೇ ವಾಸ್ತವ್ಯ ಹೂಡುವ ಅಭ್ಯಾಸ ಮಾಡಿಕೊಂಡಿದ್ದಾರೆ.

  ಇದೀಗ ಚಿತ್ರೀಕರಣಕ್ಕೆ ಶಿಕಾಗೋಕ್ಕೆ ತೆರಳಿರುವ ಕತ್ರಿನಾ, ನ್ಯೂಯಾರ್ಕ್ ನಲ್ಲಿರುವ ಅವರ ಸಹೋದರಿಯ ಮನೆಯಲ್ಲಿ ಸ್ವಲ್ಪ ದಿನ ಉಳಿಯಲಿದ್ದಾರೆ. ಆಮೇಲೆ ಹೊಟೆಲ್ ವಾಸ್ತವ್ಯಕ್ಕೆ 'ಜೈ' ಎನ್ನಲಿದ್ದಾರೆ. ಇಷ್ಟೇ ಅಲ್ಲ, ಅಮೀರ್ ಖಾನ್ ಅವರೊಂದಿಗೆ 'ಧೂಮ್- 3' ಚಿತ್ರದ ಶೂಟಿಂಗ್ ಮಾತ್ರವಲ್ಲದೇ ಶಾರುಖ್ ಖಾನ್ ಅವರ ಜೊತೆ "ಜಬ್ ತಕ್ ಹೈ ಜಾನ್' ಚಿತ್ರದ ಚಿತ್ರೀಕರಣದಲ್ಲೂ ಭಾಗಿಯಾಗಿದ್ದಾರೆ". ಒಟ್ಟಿನಲ್ಲಿ ವೃತ್ತಿಜೀವನದಲ್ಲಿ ಬಹಳಷ್ಟು ಬಿಜಿಯಾಗಿರುವ ಕತ್ರಿನಾ ಒಬ್ಬಂಟಿ ಭಾವ ಅನುಭವಿಸುತ್ತಿದ್ದಾರೆ ಎನ್ನುವುದು ಸಾಕಷ್ಟು ಜನರ ಅನಿಸಕೆ. (ಏಜೆನ್ಸೀಸ್)

  English summary
  Katrina Kaif who joined Aamir Khan in Chicago recently for the shoot of Dhoom 3 is unhappy and sad. The reason behind her sadness is her loneliness.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X