»   » ಪಾಕಿಸ್ತಾನಕ್ಕೆ ಹೋಗಲು ಕತ್ರಿನಾ ಕೈಫ್ ಒಪ್ಪಿಲ್ಲ ಯಾಕೆ?

ಪಾಕಿಸ್ತಾನಕ್ಕೆ ಹೋಗಲು ಕತ್ರಿನಾ ಕೈಫ್ ಒಪ್ಪಿಲ್ಲ ಯಾಕೆ?

Posted By:
Subscribe to Filmibeat Kannada
ಸದ್ಯಕ್ಕೆ ಬಾಲಿವುಡ್ ಚಿತ್ರಜಗತ್ತಿನ ಅತಿ ಪ್ರಸಿದ್ಧ ತಾರೆಯರಲ್ಲಿ ಕತ್ರಿನಾ ಕೈಫ್ ಕೂಡ ಒಬ್ಬರು. ಮೊದಲೇ ಸಾಕಷ್ಟು ಜನಪ್ರಿಯ ಸ್ಟಾರ್ ಆಗಿದ್ದ ಕತ್ರಿನಾ, ಇತ್ತೀಚಿಗೆ ದಾಖಲೆ ಗಳಿಕೆ ಸ್ಫಾಪಿಸಿದ 'ಏಕ್ ಥಾ ಟೈಗರ್' ಚಿತ್ರದ ಮೂಲಕ ಭಾರಿ ಪ್ರಸಿದ್ಧಿ ಪಡೆದಿದ್ದಾರೆ. ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಜೋಡಿಯ 'ಏಕ್ ಥಾ ಟೈಗರ್' ಯಾವ ಪರಿ ಜನಪ್ರಿಯವಾಗಿದೆ ಎಂದರೆ ಸಲ್ಲೂ ಸಂಭಾವನೆಯೀಗ ಬರೋಬ್ಬರಿ ರು. 100 ಆಗದೆ, ಕತ್ರಿನಾಗೆ ಆಫರ್ ಗಳ ಸುರಿಮಳೆ.

ಆ ವಿಷಯವೀಗ ಹಾಗಿರಲಿ, ಇತ್ತೀಚಿನ ಕತ್ರಿನಾ ಜನಪ್ರಿಯತೆಯನ್ನು ಉಪಯೋಗಿಸಿಕೊಳ್ಳಲು ನೆರೆಯ ರಾಷ್ಟ್ರವಾದ ಪಾಕಿಸ್ತಾನ ಬಯಸಿದೆ. ಪಾಕಿಸ್ತಾನದಲ್ಲಿ ಶೋ ಒಂದನ್ನು ನಡೆಸಿಕೊಡುವಂತೆ ಕತ್ರಿನಾಗೆ ಆಹ್ವಾನ ನೀಡಿರುವ ಪಾಕಿಸ್ತಾನ, ಅದಕ್ಕಾಗಿ 'ರು. 2.5 ಕೋಟಿ' ಕೊಡುವುದಾಗಿ ಹೇಳಿದೆ. ಆದರೆ ಕತ್ರಿನಾ ಮಾತ್ರ ಈ ಆಫರ್ ಒಪ್ಪಿಕೊಳ್ಳದೇ ಉಪಾಯದಿಂದ ನುಣುಚಿಕೊಂಡಿದ್ದಾರೆ.

ಸುದ್ದಿ ಮೂಲಗಳ ಪ್ರಕಾರ, ಕತ್ರಿನಾ ಕೈಫ್ ಇದೇ ಮೊದಲ ಬಾರಿಗೆ ಪಕ್ಕದ ದೇಶ ಪಾಕಿಸ್ತಾನದಿಂದ ಇಂತಹ ಅವಕಾಶ ಪಡೆದಿಲ್ಲ. ಅಲ್ಲಿಂದ ಕತ್ರಿನಾಗೆ ಆಗಾಗ ಇಂತಹ ಆಫರ್ ಗಳು ಬರುತ್ತಲೇ ಇರುತ್ತವೆ. ಆದರೆ ಅದನ್ನು ಕತ್ರಿನಾ ಒಪ್ಪಿಕೊಳ್ಳದೇ ಉಪಾಯದಿಂದ 'ಆಗೊಲ್ಲ' ಅನ್ನುತ್ತಿದ್ದಾರೆ. ಕಡ್ಡಿ ಮುರಿದಂತೆ ಹೇಳದ ಕತ್ರಿನಾಗೆ ಮತ್ತೆ ಮತ್ತೆ ಆಫರ್ ಗಳು ಬರುವುದು ಸಹಜ ತಾನೇ?

ಮಾಹಿತಿ ಪ್ರಕಾರ, ಕತ್ರಿನಾಗಿರುವ ಪ್ರಸಿದ್ಧಿ ಮತ್ತು ಅಂತಾರಾಷ್ಟ್ರೀಯ ಮಟ್ಟದ ಜನಪ್ರಿಯತೆಯಿಂದ ಕತ್ರಿನಾಗೆ ಪ್ರಪಂಚದಾದ್ಯಂತ ಶೋ ನಡೆಸಿಕೊಡುವಂತೆ ಬೇಡಿಕೆ ಬರುತ್ತಿದೆ. ಭಾರತೀಯ ನಟಿಯಾಗಿದ್ದರೂ ಯುರೋಪಿಯನ್ ಮೂಲದವರಾಗಿದ್ದು ಎರಡೂ ಕಡೆಯ ಲುಕ್ ಹೊಂದಿರುವುದರಿಂದ ಕತ್ರಿನಾಗೆ ಇಷ್ಟೊಂದು ಬೇಡಿಕೆ. ಅದರಲ್ಲೂ ಪಾಕಿಸ್ತಾನದಲ್ಲಂತೂ ಕತ್ರಿನಾ 'ನಂ 1' ನಟಿ.

ಕತ್ರಿನಾ ನಂತರ ಪಾಕಿಸ್ತಾನದ ಫೇವರೆಟ್ ನಟಿಯೆಂದರೆ ಅದು ಕರೀನಾ ಕಪೂರ್. ಆದರೆ, ಇಷ್ಟೊಂದು ಬೇಡಿಕೆಯಿದ್ದರೂ ಕತ್ರಿನಾ ಮಾತ್ರ ಪಾಕಿಸ್ತಾನದ ಕಡೆ ಮುಖ ಮಾಡುತ್ತಿಲ್ಲ. ಕಾರಣ, ಪ್ರಮುಖವಾಗಿ ಭಾರತ-ಪಾಕಿಸ್ತಾನಗಳ ನಡುವಿನ ವೈಷಮ್ಯ. ಇನ್ನೊಂದು ಕಾರಣ, ಕತ್ರಿನಾ ನಡೆಸಿಕೊಡಬೇಕಾಗಿರುವ ಶೋದ 'ಸೆನ್ಸೆಟಿವ್ ಸಬ್ಜೆಕ್ಟ್!' ಈ ಕಾರಣಗಳಿಂದ ಅಲ್ಲಿಗೆ ಹೋದರೆ ಅನವಶ್ಯಕ ಆತಂಕ ಕಾಡುವುದು ಗ್ಯಾರಂಟಿ ಎಂದು ಅರಿತಿರುವ ಕತ್ರಿನಾ ಪಾಕಿಸ್ತಾನದ ಆಫರ್ ನಿರಾಕರಿಸಿದ್ದಾರೆ. (ಏಜೆನ್ಸೀಸ್)

English summary
Katrina Kaif recently got a 2.5 crore offer from Pakistan to do a show there. However, Katrina Kaif declined the offer politely.
 
Please Wait while comments are loading...