For Quick Alerts
  ALLOW NOTIFICATIONS  
  For Daily Alerts

  ನನಗೆ ಮಗಳು ಬೇಕು: ಹೆಣ್ಣು ಮಗು ಪಡೆಯುವ ಬಯಕೆ ವ್ಯಕ್ತಪಡಿಸಿದ ಅರ್ಜುನ್ ಗೆಳತಿ ಮಲೈಕಾ

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್ ನಟಿ, ಡಾನ್ಸರ್, ಫಿಟ್ನೆಸ್ ಫ್ರೀಕ್ ಮಲೈಕಾ ಅರೋರಾ ಒಂದಲ್ಲೊಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರುವ ನಟಿ. ಹೆಚ್ಚಾಗಿ ಅರ್ಜುನ್ ಕಪೂರ್ ವಿಚಾರಕ್ಕೆ ಸುದ್ದಿಯಲ್ಲಿರುತ್ತಿದ್ದ ಮಲೈಕಾ ಇದೀಗ ಹೆಣ್ಣು ಮಗುವನ್ನು ಪಡೆಯುವ ಬಯಕೆ ವ್ಯಕ್ತಪಡಿಸುವ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ. ಮಲೈಕಾಗೆ ಹೆಣ್ಣು ಮಕ್ಕಳೆಂದರೆ ತುಂಬಾ ಇಷ್ಟವಂತೆ. ಹಾಗಾಗಿ ಮಗಳು ಇದ್ದರೆ ತುಂಬಾ ಚೆನ್ನಾಗಿರುತ್ತಿತ್ತು ಎಂದು ಆಗಾಗ ಹೇಳಿಕೊಳ್ಳುತ್ತಿರುತ್ತಾರೆ.

  ಇದೀಗ ಹೆಣ್ಣು ಮಗುವನ್ನು ದತ್ತು ಪಡೆಯುವ ಬಗ್ಗೆ ಚರ್ಚೆ ಮಾಡುತ್ತಿರುವುದಾಗಿ ಮಲೈಕಾ ಹೇಳಿದ್ದಾರೆ. ಹೆಣ್ಣು ಮಗುವನ್ನು ದತ್ತು ಪಡೆದು ಆಕಗೆ ಕುಟುಂಬ ಮತ್ತು ಮನೆಯನ್ನು ನೀಡುವ ಬಗ್ಗೆ ಪ್ಲಾನ್ ಮಾಡುತ್ತಿರುವುದಾಗಿ ಮಲೈಕಾ ಬಹಿರಂಗ ಪಡಿಸಿದ್ದಾರೆ. ಮಲೈಕಾಗೆ ಈಗಾಗಲೇ ಒಬ್ಬ ಮಗನಿದ್ದಾರೆ. ಅರ್ಬಾಜ್ ಖಾನ್ ಮತ್ತು ಮಲೈಕಾ ಜೋಡಿಗೆ ಜನಿಸಿದ ಮಗ ಅರ್ಹಾನ್.

  ಅರ್ಹಾನ್ ಎಂದರೆ ಮಲೈಕಾಗೆ ತುಂಬಾ ಪ್ರೀತಿ. ಮಗನನ್ನು ಅಪಾರವಾಗಿ ಪ್ರೀತಿಸುವ ಜೊತೆಗೆ ಮಗಳು ಇದ್ದಿದ್ದರೆ ಇನ್ನುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪುತ್ರ ಅರ್ಹಾನ್ ಜೊತೆ ಈಗಾಗಲೇ ಚರ್ಚೆ ಮಾಡಿರುವುದಾಗಿಯೂ ಹೇಳಿದ್ದಾರೆ.

  ಈ ಬಗ್ಗೆ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಮಾತನಾಡಿರುವ ಮಲೈಕಾ, "ನನ್ನ ಅನೇಕ ಆತ್ಮೀಯ ಸ್ನೇಹಿತರು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ. ಮಕ್ಕಳು ತಮ್ಮ ಜೀವನಕ್ಕೆ ತುಂಬಾ ಸಂತೋಷವನ್ನು ತುರುವುದು ನಿಜಕ್ಕೂ ಅದ್ಭುತವಾಗಿದೆ. ನಾನು ನನ್ನ ಮಗ ಅರ್ಹಾನ್ ಜೊತೆ ಬಹಳಷ್ಟು ವಿಷಯಗಳನ್ನು ಚರ್ಚಿಸುತ್ತೇನೆ. ನಾವ ಒಂದು ದಿನ ಹೆಣ್ಣು ಮಗುವನ್ನು ಯಾಕೆ ದತ್ತು ತೆಗೆದುಕೊಳ್ಳಬಾರದು ಎನ್ನುವ ವಿಚಾರವನ್ನು ಚರ್ಚಿಸಿದ್ದೀವಿ. ಆ ಮಗುವಿಗೆ ಕುಟುಂಬ ಮತ್ತು ಮನೆಯನ್ನು ಯಾಕೆ ಕೊಡಬಾರದು ಎನ್ನುವ ಬಗ್ಗೆ ಮಾತನಾಡಿದ್ದೀವಿ. ನಾವು ಚರ್ಚೆ ಮಾಡಿದ ಮಿಲಿಯನ್ ವಿಚಾರಗಳಲ್ಲಿ ಇದು ಕೂಡ ಒಂದು" ಎಂದು ಹೇಳಿದ್ದಾರೆ.

  "ನಾನು ಹೆಣ್ಣುಮಕ್ಕಳಿಂದ ತುಂಬಿದ ಕುಟುಂಬದಿಂದ ಬಂದಿದ್ದೇನೆ. ಆದರೆ ಈಗ ನಾವೆಲ್ಲರೂ ಗಂಡುಮಕ್ಕಳನ್ನು ಹೊಂದಿದ್ದೇವೆ. ಹಾಗಾಗಿ ನನಗೆ ಹೆಣ್ಣು ಮಗುವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಾನು ನನ್ನ ಮಗ ಅರ್ಹಾನ್ ನನ್ನು ತುಂಬಾ ಪ್ರೀತಿಸುತ್ತೇನೆ. ಆದರೆ ನನಗೂ ಒಬ್ಬಳು ಮಗಳು ಇರಬೇಕು ಎಂದು ನಾನು ಬಯಸುತ್ತೇನೆ. ಇದು ನನ್ನ ಹೃದಯದಲ್ಲಿ ಓಡಾಡುತ್ತಿರುವ ಭಾವನೆ. ಮಗಳು ಇದ್ದಿದ್ದರೇ ಅವಳಿಗೆ ಸುಂದರವಾಗಿ ಡ್ರೆಸ್ ಮಾಡುತ್ತಿದ್ದೆ. ಎಲ್ಲಾ ಯೋಚಿಸುತ್ತೇನೆ" ಎಂದು ಹೇಳಿದ್ದಾರೆ.

  ಇನ್ನು ನಟಿ ಮಲೈಕಾ 1998ರಲ್ಲಿ ಅರ್ಬಾಜ್ ಖಾನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದರು. 18 ವರ್ಷಗಳ ಕಾಲ ಸಂಸಾರ ನಡೆಸಿದ್ದ ಈ ಜೋಡಿ 2016ರಲ್ಲಿ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರುವ ಮೂಲಕ ಇಡೀ ಬಾಲಿವುಡ್‌ಗೆ ಶಾಕ್ ನೀಡಿದ್ದರು. 2017ರಲ್ಲಿ ಮಲೈಕಾ ಮತ್ತು ಅರ್ಬಾಜ್ ಖಾನ್ ಇಬ್ಬರು ಬೇರೆ ಬೇರೆ ಆದರು.

  ಪತಿಯಿಂದ ದೂರ ಆಗಿರುವ ಮಲೈಕಾ ಸದ್ಯ ಬಾಲಿವುಡ್ ನಟ ಅರ್ಜುನ್ ಕಪೂರ್ ಜೊತೆ ಪ್ರೀತಿಯಲ್ಲಿದ್ದಾರೆ. ಅರ್ಜುನ್ ಮತ್ತು ಮಲೈಕಾ ಇಬ್ಬರು ಅನೇಕ ವರ್ಷಗಳಿಂದ ಡೇಟಿಂಗ್ ನಲ್ಲಿದ್ದಾರೆ. ಅರ್ಜುನ್ ಕಪೂರ್ ಗಿಂತ ತುಂಬಾ ದೊಡ್ಡವರಾದ ಮಲೈಕಾ ಜೊತೆ ಪ್ರೀತಿಯಲ್ಲಿದ್ದಾರೆ. ಈ ವಿಚಾರವಾಗಿ ಇಬ್ಬರೂ ಆಗಾಗಾ ಟ್ರೋಲ್ ಪೇಜ್ ಗಳಿಗೆ ಆಹಾರವಾಗುತ್ತಿರುತ್ತಾರೆ. ಆದರೆ ಯಾವುದಕ್ಕೂ ತಲೆಕೊಡಿಸಿಕೊಳ್ಳದ ಈ ಜೋಡಿ ತುಂಬಾ ಸಂತೋಷವಾಗಿ ಜೀವನ ಕಳೆಯುತ್ತಿದ್ದಾರೆ.

  ಇತ್ತೀಚಿಗಷ್ಟೆ ನಟ ಅರ್ಜುನ್ ಕಪೂರ್ ಗೆಳತಿ ಮಲೈಕಾ ಅರೋರ ಮನೆ ಪಕ್ಕದಲ್ಲೇ ಹೊಸ ಮನೆಯನ್ನು ಖರೀದಿ ಮಾಡಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಮಲೈಕಾ ಮನೆ ಸಮೀಪದಲ್ಲೇ ಅರ್ಜುನ್ ಹೊಸ ಮನೆಯನ್ನು ಖರೀದಿದ್ದಾರೆ. ಸ್ನೇಹಿತರ ದಿನಾಚರಣೆ ದಿನ ಅರ್ಜುನ್ ಕಪೂರ್ ಗೆ ಮಲೈಕಾ ವಿಶೇಷವಾದ ಅಡುಗೆ ಮಾಡಿ ಬಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ತರಹೇವಾರಿ ಅಡುಗೆಳನ್ನು ಮಾಡಿದ್ದ ಮಲೈಕಾ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದರು. ಮಲೈಕಾ ಮತ್ತು ಅರ್ಜುನ್ ಜೋಡಿ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದಿಯೂ ಆಗಾಗ ಕೇಳಿಬರುತ್ತಿರುತ್ತೆ.

  English summary
  Bollywood Actress Malaika Arora reveals plan to adopting a girl.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X