»   » ಸದ್ಯದಲ್ಲೇ ಹಸೆಮಣೆ ಏರ್ತಾರಂತೆ ಪ್ರಿಯಾಂಕ ಚೋಪ್ರಾ

ಸದ್ಯದಲ್ಲೇ ಹಸೆಮಣೆ ಏರ್ತಾರಂತೆ ಪ್ರಿಯಾಂಕ ಚೋಪ್ರಾ

By: ರಮೇಶ್ ಬಿ
Subscribe to Filmibeat Kannada

ಬಾಲಿವುಡ್ ನ ಬಹು ಬೇಡಿಕೆಯ ನಟಿ 33 ವರ್ಷದ ಪ್ರಿಯಾಂಕ ಚೋಪ್ರಾ ತಮ್ಮ ಮದುವೆ ಬಗ್ಗೆ ಸುಳಿವು ನೀಡಿದ್ದಾರೆ. ನನ್ನ ಮದುವೆ ಸದ್ಯದಲ್ಲೇ ನಡೆಯಲಿದೆ ಆದರೆ ಅದಕ್ಕೆ ಸರಿಯಾದ ಸಮಯ ಕೂಡಿ ಬಂದಾಗ ಮದುವೆ ಆಗುತ್ತೇನೆ.

ಅಂತಹ ಅಮೂಲ್ಯವಾದ ಸಮಯ ಸದ್ಯದಲ್ಲಿಯೇ ಬರಲಿದೆ ಎಂದು ಸಂದರ್ಶನವೊಂದರಲ್ಲಿ ತಮ್ಮ ಮದುವೆಯ ಬಯಕೆಯನ್ನು ಬಿಚ್ಚಿಟ್ಟಿದ್ದಾರೆ.[ಏಷಿಯಾದ ಅತ್ಯಂತ ಸೆಕ್ಸಿಯೆಸ್ಟ್ ಮಹಿಳೆ ಇವರಂತೆ..!]

Bollywood Actress Priyanka Chopra to Marry Soon

ಆದರೆ ಪ್ರಿಯಾಂಕ ಅವರು ತಾವು ಮದುವೆ ಆಗುವ ವರನ ಕುರಿತು ಯಾವ ಸುಳಿವನ್ನು ಇಲ್ಲಿವರೆಗೂ ಬಿಟ್ಟುಕೊಟ್ಟಿಲ್ಲ.[ಚಿತ್ರ ಬಿಡುಗಡೆ: ಛೇ.. ಹೀಗಾಗಬಾರದಿತ್ತು ಎಂದ ನಟಿ ಪ್ರಿಯಾಂಕ]

ಆದ್ದರಿಂದ ಮಾಜಿ ವಿಶ್ವಸುಂದರಿ ಪ್ರಿಯಾಂಕ ಅವರ ಕೈಹಿಡಿಯುವ ಗಂಡು ಯಾರು ಅಂತ ಸದ್ಯಕ್ಕೆ ಅಭಿಮಾನಿಗಳಿಗೆ ಇರುವ ಕುತೂಹಲ.

ಅಂತೂ ಇಂತೂ ಬಾಲಿವುಡ್ ನ ಖ್ಯಾತ ನಟಿ ಪ್ರಿಯಾಂಕ ಚೋಪ್ರಾ ಅವರಿಗೆ ಕಂಕಣಭಾಗ್ಯ ಕೂಡಿಬರುವ ಕಾಲ ಸನ್ನಿಹವಾಗಿದೆ ಅಂತಾಯಿತು.

ಸತತ ನಾಲ್ಕು ಬಾರಿ ಫಿಲ್ಮ್ ಫೇರ್ ಅವಾರ್ಡ್ ಮತ್ತು ಒಂದು ಬಾರಿ ನ್ಯಾಷನಲ್ ಅವಾರ್ಡ್ ಪಡೆದುಕೊಂಡು ಬಾಲಿವುಡ್

ನಲ್ಲಿ ಮಿಂಚು ಹರಿಸುತ್ತಿರುವ ನಟಿ ಪ್ರಿಯಾಂಕ ಚೋಪ್ರಾ ಅವರ ಕೈ ಹಿಡಿಯುವ ಅದೃಷ್ಟ ಮಾಡಿರುವ ಆ ಗಂಡು ಯಾರು ಎಂಬುವುದು ಬಾಲಿವುಡ್ ನಲ್ಲಿ ಸದ್ಯಕ್ಕೆ ಕುತೂಹಲ ಮೂಡಿಸಿದ್ದಂತೂ ಸತ್ಯ.

English summary
According to the grapevine Bollywood Actress Priyanka Chopra to marry soon.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada