For Quick Alerts
  ALLOW NOTIFICATIONS  
  For Daily Alerts

  ರಾಖಿ ಸಾವಂತ್ ತುಂಡುಡುಗೆಯ ಮೇಲೆ ಪ್ರಧಾನಿ ಮೋದಿ ಫೋಟೋ!

  |

  ಸದಾ ಒಂದಲ್ಲಾ ಒಂದು ಕಾರಣದಿಂದ ವಿವಾದ ಮತ್ತು ಸುದ್ದಿಯಲ್ಲಿರುವ ಬಾಲಿವುಡ್ ನಟಿ ರಾಖಿ ಸಾವಂತ್, ಈಗ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮತ್ತೆ ಸುದ್ದಿಯಲ್ಲಿದ್ದಾಳೆ.

  ತನಗೆ ಏನು ಹೇಳು ಬೇಕು ಅನ್ನೋದನ್ನು ಫಿಲ್ಟರ್ ಇಲ್ಲದೇ, ಏನು ಮಾಡಬೇಕು ಅನ್ನುವುದನ್ನು ಸೆನ್ಸಾರ್ ಇಲ್ಲದೇ ತೋರಿಸುವ ಭಯಂಕರ ಪ್ರತಿಭೆ ರಾಖಿ, ಇತ್ತೀಚೆಗೆ ಪಾಕ್ ಮಾಡೆಲ್ ಕ್ವಂಡೀಲ್ ಬಲೂಚ್ ಸಾವಿನ ವಿಚಾರದಲ್ಲಿ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್, ಮೋದಿಯಿಂದ ಕಲಿಯಲಿ ಎನ್ನುವ ಹೇಳಿಕೆಯನ್ನು ನೀಡಿದ್ದಳು.

  ಅಮೆರಿಕಾದಲ್ಲಿನ ಅನಿವಾಸಿ ಭಾರತೀಯರು ಆಯೋಜಿಸಿದ್ದ ಸ್ವಾತಂತ್ರ್ಯದಿನದ ಪೂರ್ವಭಾವಿ ಕಾರ್ಯಕ್ರಮದಲ್ಲಿ ರಾಖಿ ಸಾವಂತ್ ಕಪ್ಪುಬಣ್ಣದ ತುಂಡುಡುಗೆ ಧರಿಸಿ ಭಾಗವಹಿಸಿದ್ದಳು.

  ತುಂಡುಡುಗೆ ಅನ್ನೋದು ರಾಖಿಗೆ ಹೊಸದೇನಲ್ಲದಿದ್ದರೂ, ಆಕೆ ಧರಿಸಿದ್ದ ಉಡುಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಬಳಸಿಕೊಂಡು ತಾನೊಬ್ಬ 'ಕಾಂಟ್ರವರ್ಸಿ ಕ್ವೀನ್' ಅನ್ನುವುದನ್ನು ಮತ್ತೊಮ್ಮೆ ರಾಖಿ ಸಾಬೀತು ಪಡಿಸಿದ್ದಾಳೆ.

  ತನ್ನ ದೇಹದ ಉಬ್ಬುತಗ್ಗು, ಹಿಂದೆ ಮುಂದೆ ಎಲ್ಲಾ ಕಡೆ ಮೋದಿಯ ಚಿತ್ರ ಬರುವಂತೆ ರಾಖಿ ಸಾವಂತ್ ಉಡುಗೆಯನ್ನು ವಿನ್ಯಾಸಗೊಳಿಸಿದ್ದಾಳೆ. ಜೊತೆಗೆ ಭಂಗಿಯನ್ನು Instagram ನಲ್ಲಿ ಶೇರ್ ಮಾಡಿಕೊಂಡಿದ್ದಾಳೆ.

  ಆಕೆ ಧರಿಸಿದ್ದ ಉಡುಗೆಯ ಕೆಲವೊಂದು ಆಂಗ್ಯಲ್ ಗಳು, ಸ್ಲೈಡಿನಲ್ಲಿದೆ ನೋಡಿ..

  ಆನ್ಲೈನ್ ನಲ್ಲಿ ವೈರಲ್

  ಆನ್ಲೈನ್ ನಲ್ಲಿ ವೈರಲ್

  ಆಕೆಯ ವಿವಿಧ ಭಂಗಿಯ ಫೋಟೋಗಳು ಈಗ ಆನ್ಲೈನ್ ನಲ್ಲಿ ವೈರಲ್ ಆಗಿದೆ. ಪಬ್ಲಿಸಿಟಿಗಾಗಿ ಇಷ್ಟು ಕೀಳು ಮಟ್ಟಕ್ಕೆ ಈಕೆ ಇಳಿಯುತ್ತಿದ್ದಾಳಾ ಎಂದು ಓದುಗರು ಪ್ರಶ್ನಿಸುತ್ತಿದ್ದಾರೆ.

  ಆಕ್ಷೇಪಾರ್ಹ ಚಿತ್ರಗಳು

  ಆಕ್ಷೇಪಾರ್ಹ ಚಿತ್ರಗಳು

  ಬಟ್ಟೆಯ ಕೆಲವೊಂದು ಭಾಗದಲ್ಲಿ ಮೋದಿ ಚಿತ್ರ ಬಳಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಇದು ಪ್ರಧಾನಮಂತ್ರಿಗೆ ಮಾಡಿದ ಅವಮಾನ ಎಂದು ಸಾಮಾಜಿಕ ತಾಣದಲ್ಲಿ ಜನ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

  ಅವರವರ ಇಷ್ಟ

  ಅವರವರ ಇಷ್ಟ

  ಯಾವುದೇ ರೀತಿಯ ಬಟ್ಟೆ ತೊಡುವುದು ಅವರವರ ಇಷ್ಟಕ್ಕೆ ಬಿಟ್ಟ ವಿಚಾರವಾದರೂ, ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಯೊಬ್ಬರ ಫೋಟೋ ಈ ರೀತಿ ಬಳಸಿಕೊಳ್ಳುವುದು ತಪ್ಪು ಎನ್ನುವುದು ಜನರ ಅಭಿಪ್ರಾಯ.

  ದೇವರು ಕ್ಷಮಿಸುವುದಿಲ್ಲ

  ರಾಖಿ ಸಾವಂತ್ ಳನ್ನು ಜೀಸಸ್ ಎಂದೂ ಕ್ಷಮಿಸುವುದಿಲ್ಲ ಎಂದು ಕೆಲವರು ಟ್ವೀಟ್ ಮಾಡುತ್ತಿದ್ದರೆ, ಈಕೆ ತೊಟ್ಟ ಉಡುಗೆಯನ್ನು ಯುನೆಸ್ಕೋ 'ಬೆಸ್ಟ್ ಕಾಸ್ಟ್ಯೂಮ್' ಎಂದು ಪ್ರಕಟಿಸುತ್ತದೆ ಎಂದು ಕೆಲವರು ಲೇವಡಿ ಮಾಡುತ್ತಿದ್ದಾರೆ.

  ವಿವಾದ ಈಕೆಗೆ ಹೊಸದೇನಲ್ಲ

  ವಿವಾದ ಈಕೆಗೆ ಹೊಸದೇನಲ್ಲ

  ವಿವಾದ ಹುಟ್ಟಿಸುವ ಹೇಳಿಕೆ ನೀಡುವುದು, ಸೆಕ್ಸಿ ಬಟ್ಟೆ ಧರಿಸುವುದು ಈಕೆಗೇನೂ ಹೊಸದೇನಲ್ಲ. ಅದರ ಇನ್ನೊಂದು ಭಾಗವೇ ರಾಖಿ ಸಾವಂತ್ ತುಂಡುಡುಗೆ ಮತ್ತು ಪ್ರಧಾನಿ ಮೋದಿ.

  English summary
  Bollywood actress Rakhi Sawant’s ‘patriotic’ dress with Prime Minister Narendra Modi’s photos ahead of Independence Day creates controversy yet again.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X