ರಾಖಿ ಸಾವಂತ್ ಬಯೋಪಿಕ್ ಈ ಸ್ಟಾರ್ ನಟಿಯೇ ಮಾಡಬೇಕಂತೆ

ಬಾಲಿವುಡ್ ನ ನೃತ್ಯಗಾರ್ತಿ ಮತ್ತು ನಟಿ ರಾಕಿ ಸಾವಂತ್ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇತ್ತೀಚಿಗಷ್ಟೆ ಬಿಗ್ ಬಾಸ್ ಸೀಸನ್ 14ರಲ್ಲಿ ಕಾಣಿಸಿಕೊಂಡಿದ್ದ ರಾಖಿ ಸಾವಂತ್ ಸಿಕ್ಕಾಪಟ್ಟೆ ಮನರಂಜನೆ ನೀಡಿದ್ದರು.

ಬಿಗ್ ಮನೆಯಿಂದ ಹೊರಬರುತ್ತಿದ್ದಂತೆ ಆಸ್ಪತ್ರೆಯಲ್ಲಿದ್ದ ತಾಯಿಯನ್ನು ಭೇಟಿಯಾಗಿದ್ದಾರೆ. ತಾಯಿಯ ಆರೋಗ್ಯದ ಬಗ್ಗೆ ರಾಖಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು. ಇದೀಗ ಮತ್ತೆ ರಾಖಿ ಸಾವಂತ್ ಸುದ್ದಿಯಲ್ಲಿದ್ದಾರೆ. ರಾಖಿ ಸಾವಂತ್ ಬಯೋಪಿಕ್ ಬರ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ತನ್ನ ಬಯೋಪಿಕ್ ಬಗ್ಗೆ ಮಾತನಾಡಿರುವ ರಾಖಿ ಸಾವಂತ್, ತನ್ನ ಬಯೋಪಿಕ್ ಅನ್ನು ಹಿರಿಯ ಗೀತ ರಚನೆಗಾರ ಮತ್ತು ಬರಹಗಾರ ಜಾವೇದ್ ಅಖ್ತರ್ ಮಾಡುತ್ತಿದ್ದಾರೆ ಎಂದು ಹೇಳಿದ್ದರು. ಬಳಿಕ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು.

Bollywood Actress Rakhi Sawant wanted to Vidya Balan star to her biopic

ಆದರೆ ಈ ಬಗ್ಗೆ ಸ್ವತಃ ಜಾವೇದ್ ಅಖ್ತರ್ ಅವರೇ ಇದನ್ನು ಸ್ಪಷ್ಟಪಡಿಸಿದ್ದರು. 'ರಾಖಿ ಸಾವಂತ್ ಹೇಳಿರುವುದು ಸತ್ಯ. ಕೆಲವು ವರ್ಷಗಳ ಹಿಂದೆ ಒಮ್ಮೆ ವಿಮಾನದಲ್ಲಿ ಆಕೆ ನನಗೆ ಸಿಕ್ಕಿದ್ದರು. ಆಗ ಆಕೆಯ ಬಾಲ್ಯದ ಬಗ್ಗೆ ನನಗೆ ಹೇಳಿದರು. ಆಗ ನಾನು ಹೇಳಿದ್ದೆ ನಿನ್ನ ಬಗ್ಗೆ ಸಿನಿಮಾ ಮಾಡುತ್ತೇನೆ ಎಂದು' ಹೇಳಿದ್ದಾರೆ.

ಇನ್ನು ಕೆಲವು ದಿನಗಳ ಹಿಂದೆ ರಾಖಿ ಸಾವಂತ್ ತನ್ನ ಬಯೋಪಿಕ್ ಅನ್ನು ಯಾರು ಮಾಡಬೇಕು ಎಂದು ಕೇಳಿದ್ದಕ್ಕೆ, ವಿದ್ಯಾ ಬಾಲನ್ ಮಾಡಬೇಕು ಎಂದು ಹೇಳಿದ್ದರು. ನನ್ನ ಬಯೋಪಿಕ್ ತುಂಬಾ ಬೋಲ್ಡ್ ಆಗಿರುತ್ತೆ, ಹಾಗಾಗಿ ವಿದ್ಯಾ ಮಾಡಿದ್ರೆ ಚೆನ್ನಾಗಿರುತ್ತೆ ಎಂದಿದ್ದರು. ವಿದ್ಯಾ ಬಾಲನ್ ಎಂದರೆ ರಾಖಿ ಸಾವಂತ್ ಅವರಿಗೆ ತುಂಬಾ ಇಷ್ಟವಂತೆ.

ಬಳಿಕ ಪ್ರಿಯಾಂಕಾ ಅಥವಾ ಕರೀನಾ ಕಪೂರ್ ಮಾಡಿದರೂ ಪರವಾಗಿಲ್ಲ ಎಂದು ಹೇಳಿದ್ದರು. ಇದೀಗ ಮತ್ತೆ ರಾಕಿ ಸಾವಂತ್ ಬಯೋಪಿಕ್ ಸದ್ದು ಮಾಡುತ್ತಿದ್ದು, ನಿಜಕ್ಕೂ ರಾಖಿ ಬಯೋಪಿಕ್ ತೆರೆಮೇಲೆ ಬರುತ್ತಾ? ರಾಖಿ ಆಗಿ ವಿದ್ಯಾ ಬಾಲನ್ ಮಿಂಚುತ್ತಾರಾ ಎನ್ನುವುದು ಅಭಿಮಾನಿಗಳ ಕುತೂಹಲ.

More from Filmibeat

English summary
Bollywood Actress Rakhi Sawant wanted to Vidya Balan star to her biopic.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X