For Quick Alerts
  ALLOW NOTIFICATIONS  
  For Daily Alerts

  ಈ ಬಾಲಿವುಡ್ ಬೋಲ್ಡ್ ನಟಿಗೆ ರಾಹುಲ್ ದ್ರಾವಿಡ್ ಮೇಲೆ 'ಫಸ್ಟ್ ಲವ್' ಆಗಿತ್ತಂತೆ

  |

  ಭಾರತದ ನೂತನ ಹೆಡ್ ಕೋಚ್ ರಾಹುಲ್ ದ್ರಾವಿಡ್ ಮೇಲೆ ಕಣ್ಣು ನೆಟ್ಟಿದೆ. ಭಾರತದ ಕ್ರಿಕೆಟ್ ತಂಡಕ್ಕೆ ರಾಹುಲ್ ದ್ರಾವಿಡ್ ಹೊಸ ರೂಪ ನೀಡುತ್ತಾರೆ ಎಂಬ ಭರವಸೆ ಮನೆ ಮಾಡಿದೆ. ಇತ್ತೀಚೆಗೆ ರೋಹಿತ್ ಶರ್ಮಾ ಹಾಗೂ ರಾಹುಲ್ ದ್ರಾವಿಡ್ ಜೋಡಿ ನ್ಯೂಜಿಲ್ಯಾಂಡ್ ಜೊತೆ ಮೊದಲ ಸರಣೆಯನ್ನೇ ಕ್ಲೀನ್ ಸ್ವೀಪ್ ಮಾಡಿದೆ. ಹೀಗಾಗಿ ಎಲ್ಲಿ ನೋಡಿದರೂ ರಾಹುಲ್ ದ್ರಾವಿಡ್ ಬಗ್ಗೆ ಮೆಚ್ಚುಗೆ ಮಾತುಗಳೇ ಕೇಳಿಬರುತ್ತಿದೆ.

  ಶಿಸ್ತಿನ ಸಿಪಾಯಿ ರಾಹುಲ್ ದ್ರಾವಿಡ್ ಟೀಂ ಇಂಡಿಯಾದಲ್ಲಿ ಹೊಸ ಬದಲಾವಣೆ ತರುತ್ತಾರೆ. ಆಟಗಾರರಲ್ಲಿ ಶಿಸ್ತು ಬೆಳೆಸಿ, ಹೊಸ ಹುರುಷು ತುಂಬುತ್ತಾರೆಂಬ ಭರವಸೆಯ ಮಾತುಗಳನ್ನು ಆಡುತ್ತಿರುವಾಗ, ಬಾಲಿವುಡ್ ನಟಿಯೊಬ್ಬರು ರಾಹುಲ್ ದ್ರಾವಿಡ್ ನನ್ನ ಫಸ್ಟ್ ಲವ್ ಆಗಿದ್ದರು ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಕ್ರಿಕೆಟ್ ಪ್ರೇಮಿಗಳಲ್ಲಿ ಬಾಲಿವುಡ್ ಬೋಲ್ಡ್ ನಟಿಯ ಹೇಳಿಕೆ ಬಗ್ಗೆನೇ ಚರ್ಚೆ ಶುರುವಾಗಿದೆ. ಹಾಗಿದ್ದರೆ, ಆ ನಟಿ ಯಾರು? ರಾಹುಲ್ ದ್ರಾವಿಡ್ ಬಗ್ಗೆ ಆ ನಟಿ ಹೇಳಿದ್ದೇನು? ತಿಳಿಯಲು ಮುಂದೆ ಓದಿ.

  ರಾಹುಲ್ ದ್ರಾವಿಡ್ ನನ್ನ ಫಸ್ಟ್ ಲವ್

  ರಾಹುಲ್ ದ್ರಾವಿಡ್ ನನ್ನ ಫಸ್ಟ್ ಲವ್

  ಬಾಲಿವುಡ್‌ನ ಬೋಲ್ಡ್ ನಟಿ ರಿಚಾ ಚಡ್ಡಾ. ಈಕೆ ಕೇವಲ ಪಾತ್ರಗಳಲ್ಲಿ ಮಾತ್ರ ಬೋಲ್ಡ್ ಅಲ್ಲ. ಬೋಲ್ಡ್ ಆಗಿ, ನಿರ್ಭಯವಾಗಿ ಮಾತನಾಡುವ ನಟಿ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ಸುದ್ದಿ ಸಂಸ್ಥೆಯೊಂದಕ್ಕೆ ರಾಹುಲ್ ದ್ರಾವಿಡ್ ನನ್ನ ಫಸ್ಟ್ ಲವ್ ಅಂತ ಹೇಳಿದ್ದಾರೆ. "ನಾನು ಕ್ರಿಕೆಟ್‌ನ ದೊಡ್ಡ ಅಭಿಮಾನಿಯಾಗಿ ಇರಲಿಲ್ಲ. ನನ್ನ ಸಹೋದರ ಕ್ರಿಕೆಟ್ ಆಡುತ್ತಿದ್ದ. ಆಗ ನಾನು ಟಿವಿಯಲ್ಲಿ ಕ್ರಿಕೆಟ್ ಅನ್ನು ವೀಕ್ಷಿಸುತ್ತಿದ್ದೆ. ರಾಹುಲ್ ದ್ರಾವಿಡ್ ಕ್ರಿಕೆಟ್ ಆಡುವುದನ್ನು ನಾನು ಆನಂದಿಸುತ್ತಿದ್ದೆ. ಅವರು ನಿವೃತ್ತಿ ಹೊಂದುತ್ತಿದ್ದಂತೆ ನಾನು ಕ್ರಿಕೆಟ್ ನೋಡುವುದನ್ನು ನಿಲ್ಲಿಸಿದ್ದೆ. ರಾಹುಲ್ ದ್ರಾವಿಡ್ ನನ್ನ ಫಸ್ಟ್ ಲವ್ ಆಗಿದ್ದರು." ಎಂದು ನಟಿ ರಿಚಾ ಚಡ್ಡಾ ಹೇಳಿದ್ದಾರೆ.

   'ಮತ್ತೆ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುತ್ತೇನೆ'

  'ಮತ್ತೆ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುತ್ತೇನೆ'

  ರಾಹುಲ್ ದ್ರಾವಿಡ್ ಈಗ ಭಾರತ ತಂಡ ಹೆಡ್ ಕೋಚ್ ಆಗಿ ಅಖಾಡಕ್ಕಿಳಿದಿದ್ದಾರೆ. ಹೀಗಾಗಿ ಹಲವು ವರ್ಷಗಳಿಂದ ಕ್ರಿಕೆಟ್ ಪಂದ್ಯ ವೀಕ್ಷಣೆಯನ್ನು ನಿಲ್ಲಿಸಿದ್ದ ರಿಚಾ ಚಡ್ಡಾ ಮತ್ತೆ ಕ್ರಿಕೆಟ್ ಅನ್ನು ಫಾಲೋ ಮಾಡಲು ನಿರ್ಧರಿಸಿದ್ದಾರೆ. "ನಾನೀಗ ಮತ್ತೆ ಕ್ರಿಕೆಟ್ ಪಂದ್ಯವನ್ನು ನೋಡಲು ಆರಂಭಿಸುತ್ತೇನೆ." ಎಂದು ರಿಚಾ ಚಡ್ಡಾ ತಿಳಿಸಿದ್ದಾರೆ.

   ಶಕೀಲಾ ಬಯೋಪಿಕ್‌ನಲ್ಲಿ ರಿಚಾ ನಟನೆ

  ಶಕೀಲಾ ಬಯೋಪಿಕ್‌ನಲ್ಲಿ ರಿಚಾ ನಟನೆ

  ಬಾಲಿವುಡ್ ನಟಿ ರಿಚಾ ಚಡ್ಡಾ ಕೆಲವು ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಶಕೀಲಾ ಬಯೋಪಿಕ್‌ನಲ್ಲಿ ನಟಿಸಿದ್ದಾರೆ. ಕನ್ನಡದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಆದರೆ, ಶಕೀಲಾ ಬಯೋಪಿಕ್ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಗೆಲ್ಲಲಿಲ್ಲ.

  ಬೋಲ್ಡ್ ಪಾತ್ರಗಳಿಂದ ಮಿಂಚಿದ ರಿಚಾ

  ಬೋಲ್ಡ್ ಪಾತ್ರಗಳಿಂದ ಮಿಂಚಿದ ರಿಚಾ

  ಗ್ಯಾಂಗ್ಸ್ ಆಫ್ ವಸ್ಸೆಪುರ್, ಮಸಾನ್, ಶಕೀಲಾ, ಮೇಡಂ ಚೀಫ್ ಮಿನಿಸ್ಟರ್ ಇಂತಹ ಸಿನಿಮಾಗಳಲ್ಲಿ ರಿಚಾ ಚಡ್ಡಾ ನಟಿಸಿದ್ದಾರೆ. ಸದ್ಯಕ್ಕೀಗ ರಿಚಾ ಚಡ್ಡಾ ಕ್ರಿಕೆಟ್ ಆಧಾರಿತ ಗೇಮ್ ಶೋ ಒಂದನ್ನು ನಡೆಸಿಕೊಡುತ್ತಿದ್ದಾರೆ.

  English summary
  Bollywood bold actress Richa Chadha unveils the name of her first ever love. Richa Chadha revealed that Rahul Dravid was her first love.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X