»   » ಬೆತ್ತಲಾಗೋ ಕಲೆ ಎಲ್ಲರಿಗೂ ಸಿದ್ದಿಸೋಲ್ಲ: ಶೆರ್ಲಿನ್

ಬೆತ್ತಲಾಗೋ ಕಲೆ ಎಲ್ಲರಿಗೂ ಸಿದ್ದಿಸೋಲ್ಲ: ಶೆರ್ಲಿನ್

By: ಶಿವಾನಂದ ಕೊಟ್ಯಾನ್
Subscribe to Filmibeat Kannada

ಕೆಲವರು ಏನು ಮಾಡಿದರೂ ಸುದ್ದಿ. ಮೈತುಂಬಾ ಸೀರೆ ಉಟ್ಟರೂ ಸುದ್ದಿ, ಮೈಯಲ್ಲಿ ಬಟ್ಟೆ ಇಲ್ಲದಿದ್ದರೂ ಸುದ್ದಿ. ಬೆರಳಿಕೆಯಷ್ಟು ಚಿತ್ರದಲ್ಲಿ ನಟಿಸಿದ್ದರೂ ಈಕೆಗೆ ಸಿಕ್ಕ ಪ್ರಚಾರ ಅಷ್ಟಿಷಲ್ಲ. ಮೂವತ್ತರ ಹರೆಯದ ಬಾಲಿವುಡ್ ಹಾಡ್ ಬೆಡಗಿ ಶೆರ್ಲಿನ್ ಚೋಪ್ರಾ ಪಡ್ಡೆಗಳು ಮೂಗಿಗೆ ಬೆರಳಿಡುವಂತಹ ಹೇಳಿಕೆಯೊಂದನ್ನು ನೀಡಿದ್ದಾಳೆ.

ಪ್ಲೇಬಾಯ್ ಮ್ಯಾಗಜೀನ್ ನಲ್ಲಿ ಬೆತ್ತಲಾಗಿ ಕಾಣಿಸಿಕೊಂಡಿದ್ದ ಶೆರ್ಲಿನ್ ಚೋಪ್ರಾ, ಬೆತ್ತಲಾಗುವುದೂ ಒಂದು ಕಲೆ. ಆ ಕಲೆ ಎಲ್ಲರಿಗೂ ಸಿದ್ದಿಸೋಲ್ಲ, ಅದನ್ನು ಅಶ್ಲೀಲತೆಯಿಂದ ನೋಡಬಾರದೆಂದು ಹೇಳಿದ್ದಾಳೆ. (ಶೆರ್ಲಿನ್ ಸೀಕ್ರೆಟ್ ಸಂಗತಿಗಳು)

ಕಾಮಸೂತ್ರ 3D ಚಿತ್ರದಲ್ಲೂ ಮೈಮಾಟದ ಪಾಂಡಿತ್ಯ ತೋರಿಸಿದ್ದ ಶೆರ್ಲಿನ್, ಬೆತ್ತಲು ಚಿತ್ರವನ್ನೇ ಬರೆಯುತ್ತೇವಂತೆ. ಇನ್ನು ಬೆತ್ತಲಾಗುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾಳೆ.

ಬಾಲಿವುಡ್ ವಿಮರ್ಶಕರು

ಬಾಲಿವುಡ್ಡಿನ ಕೆಲವು ವಿಮರ್ಶಕರು ನನಗೆ ಅವಕಾಶ ಸಿಗದೇ ಇರುವುದರಿಂದ ಬೆತ್ತಲಾಗುತ್ತಿದ್ದಾಳೆಂದು ವಿಮರ್ಶಿಸುತ್ತಾರೆ. ಅವರ ಮಾತನ್ನು ನಾನು ಒಪ್ಪುವುದಿಲ್ಲ. ಮೂಗಿಗೆ ನೇರವನ್ನು ಕಂಡಿದ್ದನ್ನು ಅವರು ಬರೆಯುತ್ತಾರೆ. ಅವರ ಹೇಳಿಕೆಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ.

ನನಗೆ ಮುಜುಗರವಿಲ್ಲ

ನನಗೆ ಬೆತ್ತಲು ದೃಶ್ಯಗಳಲ್ಲಿ ನಟಿಸಲು ಯಾವುದೇ ಮುಜುಗರವಿಲ್ಲ. ಯಾಕೆಂದರೆ ನ್ಯೂಡಿಟಿಯನ್ನು ನಾನು ಅಶ್ಲೀಲತೆಯಿಂದ ನೋಡುವುದಿಲ್ಲ. ಪ್ರೇಕ್ಷಕರೂ ಕೂಡಾ ನೋಡಬಾರದು ಎನ್ನುವುದು ನನ್ನ ಅಭಿಪ್ರಾಯ.

ಹಾಲಿವುಡ್ ನಟಿಯರು

ಹಾಲಿವುಡ್ ರಂಗದ ಖ್ಯಾತ ನಟಿಯರು ಹೆಚ್ಚಿನ ಎಲ್ಲಾ ಚಿತ್ರಗಳಲ್ಲಿ ಬೆತ್ತಲಾಗಿ ನಟಿಸುವುದಿಲ್ಲವೇ? ಹಾಗಂತ ಅವರಿಗೆ ಅವಕಾಶವಿಲ್ಲ, ನಟನೆ ಬರುವುದಿಲ್ಲ ಎಂದು ಅರ್ಥವಲ್ಲ ಎಂದು ಶೆರ್ಲಿನ್ ಚೋಪ್ರಾ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾಳೆ.

ಕಾಮಸೂತ್ರ

ಬಿಡುಗಡೆಗೆ ಸಿದ್ದವಾಗಿರುವ ರೂಪೇಶ್ ಪಾಲ್ ನಿರ್ದೇಶನದ ಕಾಮಸೂತ್ರ ಚಿತ್ರ ಈ ತಿಂಗಳಲ್ಲಿ ತೆರೆಕಾಣಲಿದೆ. ಈ ಕಾಮಪ್ರಚೋದಕ ಚಿತ್ರದ ದೃಶ್ಯಗಳು ಬಿಡುಗಡೆಯಾಗುತ್ತಿದ್ದಂತೇ ಶೆರ್ಲಿನ್ ಜನಪ್ರಿಯತೆ ಉತ್ತುಂಗಕ್ಕೇರಿತ್ತು.

ಬರೀ ಸೆಕ್ಸ್ ಚಿತ್ರವಲ್ಲ

ಕಾಮಸೂತ್ರ ಬರೀ ಸೆಕ್ಸ್ ಚಿತ್ರವಲ್ಲ. ಅದರಲ್ಲಿ ಉತ್ತಮ ಸಂದೇಶವೂ ಇದೆ. ಕಾಮಸೂತ್ರದ ವಿವಿಧ ಭಂಗಿಗಳನ್ನು 3D ತಂತ್ರಜ್ಞಾನದಲ್ಲಿ ತೋರಿಸುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆಂದು ಶೆರ್ಲಿನ್ ಚಿತ್ರದ ಬಗ್ಗೆ ವಿವರಣೆ ನೀಡುತ್ತಾಳೆ.

English summary
Bollywood hot actress Sherlyn Chopra statement about exposing.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada