Metoo ಬಗ್ಗೆ ಮಾತನಾಡಿದರು ಸಲ್ಮಾನ್ ಖಾನ್ ಮಾಜಿ ಪ್ರಿಯತಮೆ

Metoo ಅಭಿಯಾನದ ಬಗ್ಗೆ ಇಡೀ ದೇಶವೇ ಮಾತನಾಡುವಂತೆ ಆಗಿದೆ. ಬಾಲಿವುಡ್ ನಲ್ಲಿ ಶುರುವಾದ ಈ ಅಭಿಯಾನ ಸ್ಯಾಂಡಲ್ ವುಡ್ ವರೆಗೆ ಹಬ್ಬಿದೆ. ಕನ್ನಡದ ನಟಿಯರು ಕೂಡ ತಮ್ಮ ಮೇಲೆ ಆದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದ್ದರು.

ಇದೀಗ ಈ ಅಭಿಯಾನದ ಬಗ್ಗೆ ನಟಿ ಸೋಮಿ ಅಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಮೀಟೂ ಅಭಿಮಾನದಲ್ಲಿ ಧೈರ್ಯವಾಗಿ ಮಾತನಾಡಿದ ಮಹಿಳೆಯರನ್ನು ಮೆಚ್ಚಿಕೊಂಡಿರುವ ಅವರು ನಟಿ ತನುಶ್ರೀ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ.

bollywood actress somy ali tweets about me too movement

''ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದವರಿಗೆ ನನ್ನ ಸೆಲ್ಯೂಟ್. ಇಂತಹ ವಿಷಯಗಳ ಬಗ್ಗೆ ಮಾತನಾಡುವುದು ತುಂಬ ಕಷ್ಟ. ನಾನು ಇದೇ ರೀತಿ ಸ್ಥಿತಿಯನ್ನು ಅನುಭವಿಸಿದ್ದೇನೆ. ಈ ವಿಷಯವನ್ನು ಹೇಳಲು ನನಗೆ ಎಷ್ಟೋ ವರ್ಷಗಳು ಬೇಕಾಗಿತ್ತು. ಆದರೆ, ಯಾರು ಕೂಡ ನಿಜ ಹೇಳಲು ಹೆದರಬೇಡಿ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ'' ಎಂದು ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಅಂದಹಾಗೆ, ನಟಿ ಸೋಮಿ ಅಲಿ 2015 ರಲ್ಲಿಯೇ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿಕೆ ನೀಡಿದ್ದರು. ಐದು ವರ್ಷದ ಬಾಲಕಿ ಆಗಿದ್ದಾಗ ತಮ್ಮ ಮೇಲೆ ಆಗಿದ್ದ ವೇಳೆ ಮನೆಗೆಲಸದವನಿಂದ ಆಗಿದ್ದ ಲೈಂಗಿಕ ದೌರ್ಜನ್ಯದ ಘಟನೆಯನ್ನು ಅವರು ಹೇಳಿಕೊಂಡಿದ್ದರು.

More from Filmibeat

English summary
Bollywood actress Somy Ali tweets about Me Too movement.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X