»   » ಮ್ಯಾಗಜೀನ್ ಜಾಹೀರಾತಿನಲ್ಲಿ ಸೋನಾಕ್ಷಿ ಸಿನ್ಹಾ ಹಾಟ್, ಹಾಟ್

ಮ್ಯಾಗಜೀನ್ ಜಾಹೀರಾತಿನಲ್ಲಿ ಸೋನಾಕ್ಷಿ ಸಿನ್ಹಾ ಹಾಟ್, ಹಾಟ್

Posted By:
Subscribe to Filmibeat Kannada

ಖ್ಯಾತ ಹಿಂದಿ ನಟ ಮತ್ತು ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹಾ ಪುತ್ರಿ ಸೋನಾಕ್ಷಿ ಸಿನ್ಹಾ ಚಿತ್ರೋದ್ಯಮಕ್ಕೆ ಎಂಟ್ರಿ ಕೊಟ್ಟಿದ್ದು ಸೂಪರ್ ಹಿಟ್ 'ದಬಂಗ್' ಚಿತ್ರದ ಮೂಲಕ.

ಬಾಲಿವುಡ್ ನಲ್ಲಿ ವರ್ಷದ ಕೆಟ್ಟ ಚಿತ್ರ, ನಾಯಕ, ನಾಯಕಿ, ನಿರ್ದೇಶಕ.. ಹೀಗೆ ಈ ಕ್ಯಾಟಗರಿಗೂ ಪ್ರಶಸ್ತಿ ನೀಡುವ ಪದ್ದತಿ ಚಾಲ್ತಿಯಲ್ಲಿದೆ. ಸೋನಾಕ್ಷಿ ತಾನು ನಾಯಕಿಯಾಗಿ ನಟಿಸಿದ್ದ ಆಕ್ಷನ್ ಜಾಕ್ಷನ್, ಹಾಲಿಡೇ, ಲಿಂಗಾ ಚಿತ್ರದಲ್ಲಿನ ನಟನೆಗಾಗಿ ಕೆಟ್ಟನಟಿ ಎನ್ನುವ ಪ್ರಶಸ್ತಿಯನ್ನೂ ಗಳಿಸಿದ್ದಾಗಿದೆ. (ಬಾಲಿವುಡ್ 2014: ವರ್ಷದ ಕೆಟ್ಟ ನಟ, ನಟಿ ಪ್ರಶಸ್ತಿ ಪ್ರಕಟ)

ಚಿತ್ರೋದ್ಯಮದಲ್ಲಿ ನಾನು ಇರುವುದು ಬಿಂದಾಸ್ ಆಗಿ ನಟಿಸಲು, ಬಿಚ್ಚೋಲೆ ಗೌರಮ್ಮನಾಗಿರಲು ಅಲ್ಲ ಎಂದು ಬಹಳಷ್ಟು ಬಾರಿ ಹೇಳಿದ್ದ ಸೋನಾಕ್ಷಿ ಸಿನ್ಹಾ ಈಗ ಅದನ್ನು ರುಜುವಾತು ಪಡಿಸಲು ಮ್ಯಾಗಜೀನ್ ಜಾಹೀರಾತಿನ ಮೂಲಕ ಮುಂದಾದಂತಿದೆ.

ಇದೇ ಮೊದಲ ಬಾರಿಗೆ ಸೋನಾಕ್ಷಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ವೋಗ್ ಮ್ಯಾಗಜೀನಿನ ಮೇ 2015ರ ಆವೃತ್ತಿಯ ಮುಖಪುಟ ಜಾಹೀರಾತಿನಲ್ಲಿ ಸೋನಾಕ್ಷಿ ಅವತಾರ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.

ತುಂಬಾ ದಪ್ಪಗಿದ್ದೆ

ನಾನು ತುಂಬಾ ದಪ್ಪಗಿದ್ದೆ. ಪ್ರಯಾಸ ಪಟ್ಟು ಇಂದು ನನ್ನ ದೇಹದ ಸೈಜನ್ನು ಈ ಮಟ್ಟಕ್ಕೆ ಇಳಿಸಿದ್ದೇನೆ - ಸೋನಾಕ್ಷಿ ಸಿನ್ಹಾ

ತೊಂಬತ್ತು ಕೆಜಿಯಿದ್ದ ಸೋನಾಕ್ಷಿ

ಸುಮಾರು ತೊಂಬತ್ತು ಕೆಜಿ ಮೈಬೆಳೆಸಿಕೊಂಡು ಗುಂಡು ಗುಂಡಾಗಿದ್ದ ಸೋನಾಕ್ಷಿ, ಈಗ ಸಪೂರವಾಗಿದ್ದನ್ನು ವೋಗ್ ಮ್ಯಾಗಜೀನಿನ ಈ ಫೋಟೋದಲ್ಲಿ ಕಾಣಬಹುದಾಗಿದೆ.

ಇದು ಬಿಕನಿ ಡ್ರೆಸ್ ಅಲ್ಲ

ಇದು ಬಿಕನಿ ಡ್ರೆಸ್ ಅಲ್ಲ, ಸ್ವಿಮ್ ಸೂಟ್ ಅಂತೂ ಅಲ್ಲವೇ ಅಲ್ಲ. ನೀರಿನಲ್ಲಿ ನಿಂತು ಬಿಳಿ ವೆಸ್ಟ್ ಹಾಕಿಕೊಂಡು ಸೋನಾಕ್ಷಿ ನೀಡಿದ ಫೋಸ್.

ಸೋನಾಕ್ಷಿ ಸೈಜಿಗೆ ತಮಾಷೆ ಮಾಡಿದ್ದ ಸಲ್ಲು ಮಿಯಾ

ಸೋನಾಕ್ಷಿ ಸಿಕ್ಕಾಪಟ್ಟೆ ದಪ್ಪಗಿರುವುದಕ್ಕೆ ಸಲ್ಲು ಮಿಯಾ ಬಹಳಷ್ಟು ಬಾರಿ ತಮಾಷೆ ಮಾಡಿದ್ದರು. ಈಗ ಸಲ್ಮಾನ್ ನಾಚಿಸುವಂತೆ ಸುಂದರವಾಗಿ ಕಾಣಿಸಿತ್ತಿದ್ದಾರೆ ಸೋನಾಕ್ಷಿ.

ನನಗೂ ಅಭಿಮಾನಿಗಳಿದ್ದಾರಾ?

ಜುಹು ಬೀಚ್ ಪಕ್ಕದ ನನ್ನ ಮನೆಗೆ ಒಂದು ದಿನ ಬೆಳಗ್ಗೆನೇ ಐವತ್ತು ಹುಡುಗಿರು ನನ್ನನ್ನು ನೋಡಲು ಬಂದಿದ್ದರು. ನನಗೂ ಅಭಿಮಾನಿಗಳಿದ್ದಾರಾ ಎಂದು ಆಶ್ಚರ್ಯದ ಜೊತೆ ಆನಂದವೂ ಆಯಿತು - ಸೋನಾಕ್ಷಿ

ಹಳೇ ಸ್ಕೂಟರ್ ಮೇಲೆ ಸೋನಾಕ್ಷಿ

ಹಳೇ ಸ್ಕೂಟರ್ ಮೇಲೆ ಸೋನಾಕ್ಷಿ ಸಿನ್ಹಾ ನೀಡಿದ ಫೋಸ್. ನನ್ನನ್ನು ದಪ್ಪ ಎಂದು ತಮಾಷೆ ಮಾಡುತ್ತಿದ್ದವರಿಗೆ ಈ ಮ್ಯಾಗಜೀನಿನ ಫೋಟೋ ಶೂಟೌಟ್ ಸರಿಯಾದ ಉತ್ತರ ನೀಡುತ್ತದೆ ಎಂದು ಅಂದು ಕೊಂಡಿದ್ದೇನೆ ಅನ್ನುತ್ತಾರೆ ಸೋನಾಕ್ಷಿ.

ಎರಡನೇ ಬಾರಿ ವೋಗ್ ಮ್ಯಾಗಜೀನ್ ನಲ್ಲಿ

ಸೋನಾಕ್ಷಿ ಸಿನ್ಹಾ ಎರಡನೇ ಬಾರಿಗೆ ವೋಗ್ ಮ್ಯಾಗಜೀನ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಮ್ಯಾಗಜೀನಿಗೆ ನೀಡಿದ ಜಾಹೀರಾತಿನಲ್ಲೂ ಸೋನಾಕ್ಷಿ ಬ್ಯೂಟಿಯಾಗಿಯೇ ಇದ್ದಳು.

English summary
Bollywood actress Sonakshi Sinha's Hottest Avatar Ever For Vogue Magazine India for May 2015 edition.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada