»   » 65ನೇ ರಾಷ್ಟ್ರ ಪ್ರಶಸ್ತಿ ಪ್ರಕಟ : ಶ್ರೀದೇವಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಗೌರವ

65ನೇ ರಾಷ್ಟ್ರ ಪ್ರಶಸ್ತಿ ಪ್ರಕಟ : ಶ್ರೀದೇವಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಗೌರವ

Posted By:
Subscribe to Filmibeat Kannada

65ನೇ ರಾಷ್ಟ್ರ ಪ್ರಶಸ್ತಿ ಇಂದು ದೆಹಲಿಯಲ್ಲಿ ಪ್ರಕಟವಾಗಿದೆ. ಕಳೆದ ಕೆಲ ತಿಂಗಳ ಹಿಂದೆ ದುಬೈ ನಲ್ಲಿ ನಿಧನ ಹೊಂದಿದ್ದ ಬಾಲಿವುಡ್ ನಟಿ ಶ್ರೀದೇವಿ ಅವರಿಗೆ ಮರಣೋತ್ತರ ರಾಷ್ಟ್ರ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ನಟಿ ಶ್ರೀ ದೇವಿ ಅವರ 'ಮಾಮ್' ಸಿನಿಮಾದ ನಟನೆಗೆ ಈ ಪ್ರಶಸ್ತಿ ನೀಡಲಾಗಿದೆ. ವಿಶೇಷ ಅಂದರೆ ಶ್ರೀದೇವಿ ಅವರು ಪೂರ್ಣ ಪ್ರಮಾಣದಲ್ಲಿ ನಟಿಸಿದ್ದ ಕೊನೆಯ ಸಿನಿಮಾ ಇದಾಗಿದೆ. ಜೊತೆಗೆ ಇದು ಶ್ರೀ ದೇವಿ ಅವರ 300ನೇ ಚಿತ್ರವಾಗಿದೆ. 'ಇಂಗ್ಲೀಷ್ ವಿಂಗ್ಲೀಷ್' ಚಿತ್ರದ ಬಳಿಕ ನಾಲ್ಕು ವರ್ಷಗಳ ನಂತರ ಶ್ರೀದೇವಿ 'ಮಾಮ್' ಸಿನಿಮಾ ಮಾಡಿದ್ದರು.

2017ನೇ ಸಾಲಿನ ಪ್ರತಿಷ್ಟಿತ ರಾಷ್ಟ್ರ ಪ್ರಶಸ್ತಿ ಪ್ರಕಟ: ಸಂಪೂರ್ಣ ಪಟ್ಟಿ ಇಲ್ಲಿದೆ

'ಮಾಮ್' ಸಿನಿಮಾದಲ್ಲಿ ಒಬ್ಬ ಜೀವಶಾಸ್ತದ ಶಿಕ್ಷಕಿ ಪಾತ್ರವನ್ನು ಶ್ರೀದೇವಿ ಅಮೋಘ ನಿರ್ವಹಿಸಿದ್ದರು. ಈ ಸಿನಿಮಾ ಕಳೆದ ವರ್ಷ ಜುಲೈನಲ್ಲಿ ಬಿಡುಗಡೆಯಾಗಿತ್ತು. ಕ್ರೈಂ ತ್ರಿಲ್ಲರ್ ಚಿತ್ರವಾಗಿದ್ದ 'ಮಾಮ್' ಬಾಕ್ಸ್ ಆಫೀಸ್ ನಲ್ಲಿ 649 ಕೋಟಿ ಗಳಿಕೆ ಮಾಡಿತ್ತು. ಈ ಚಿತ್ರದ ನಟನೆಗೆ ಈ ಹಿಂದೆ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಶ್ರೀ ದೇವಿ ಪಡೆದಿದ್ದರು. ಮತ್ತೊಂದು ವಿಶೇಷ ಅಂದರೆ, ಇದು ನಟಿ ಶ್ರೀದೇವಿ ಅವರಿಗೆ ಬಂದಿರುವ ಮೊದಲ ರಾಷ್ಟ್ರ ಪ್ರಶಸ್ತಿ ಆಗಿದೆ.

bollywood actress sridevi honoured as best actress in 65th National Film Awards

'ಮಾಮ್' ಚಿತ್ರಕ್ಕೆ ಎರಡು ರಾಷ್ಟ್ರ ಪ್ರಶಸ್ತಿ

ಅತ್ಯುತ್ತಮ ನಟಿ : ಶ್ರೀ ದೇವಿ

ಅತ್ಯುತ್ತಮ ಸಂಗೀತ ನಿರ್ದೇಶನ : ಎ.ಆರ್.ರೆಹಮಾನ್

English summary
65th National Film Awards announced: Bollywood actress sridevi honoured as best actress for her 'Mom' hindi movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X