For Quick Alerts
  ALLOW NOTIFICATIONS  
  For Daily Alerts

  ಸನ್ನಿ ಅಂದ್ರೆ ಮಾದಕ ಅಲ್ಲ, ಮಾನವೀಯತೆ : ಗೌರವ ಮೂಡಿಸುವ ಸನ್ನಿಯ ಕೆಲಸಗಳು!

  By Naveen
  |

  ಒಬ್ಬ ಪಾರ್ನ್ ಸ್ಟಾರ್ ಆಗಿದ್ದ ಸನ್ನಿ ಲಿಯೋನ್ ಇಂದು ಬಾಲಿವುಡ್ ನ ದೊಡ್ಡ ನಟಿಯಾಗಿದ್ದಾರೆ. ಸನ್ನಿ ಎಂದ ತಕ್ಷಣ ಅವರ ಅರೆ ಬರೆ ಬಟ್ಟೆ, ಮಾದಕ ನೋಟ, ಕಿಕ್ ಕೊಡುವ ಮೈ ಮಾಟ ಕಣ್ಣು ಮುಂದೆ ಬರುತ್ತದೆ. ಆದರೆ, ಸನ್ನಿ ಲಿಯೋನ್ ಎಂದರೆ ಮಾದಕ ಅಲ್ಲ, ಮಾನವೀಯತೆ.

  ಸದ್ಯ ಕೇರಳದಲ್ಲಿ ಭೀಕರ ಪ್ರವಾಹ ಬಂದಿದೆ. ಈ ಪರಿಸ್ಥಿತಿ ಕಂಡ ಸನ್ನಿ ಸಂತ್ರಸ್ಥರಿಗೆ ಬರೋಬ್ಬರಿ 5 ಕೋಟಿ ಹಣ ನೀಡಿದ್ದಾರೆ. ಆಶ್ಚರ್ಯ ಎಂದರೆ, ಇದುವರೆಗೆ ಯಾವ ಬಾಲಿವುಡ್ ನಟರು ಕೂಡ ಇಷ್ಟೊಂದು ಮೊತ್ತದ ಹಣವನ್ನು ನೀಡಿಲ್ಲ.

  ಕೇರಳ ಜನತೆಗಾಗಿ ಗರಿಷ್ಠ ಮೊತ್ತ ನೀಡಿದ್ರಾ ಸನ್ನಿ: ನೀಲಿತಾರೆಯ ಈ ಕೆಲಸಕ್ಕೆ ಭಾರಿ ಮೆಚ್ಚುಗೆ.! ಕೇರಳ ಜನತೆಗಾಗಿ ಗರಿಷ್ಠ ಮೊತ್ತ ನೀಡಿದ್ರಾ ಸನ್ನಿ: ನೀಲಿತಾರೆಯ ಈ ಕೆಲಸಕ್ಕೆ ಭಾರಿ ಮೆಚ್ಚುಗೆ.!

  ಅಂದಹಾಗೆ, ಸನ್ನಿ ಲಿಯೋನ್ ಸಹಾಯ ಮಾಡುತ್ತಿರುವುದು ಇದೇ ಮೊದಲೇನಲ್ಲ. ಹೆಣ್ಣು ಮಗುವನ್ನು ದತ್ತು, ಕ್ಯಾನ್ಸರ್ ರೋಗಿಯ ಚಿಕಿತ್ಸೆಗೆ ಹಣ, ಮುಂಬೈ ಶಾಲೆಯ ಅಭಿವೃದ್ದಿಗೆ ಸಹಾಯ, ಚಾಲ್ಡ್ ಪಾರ್ನ್ ವಿರುದ್ಧ ಕೂಗು, ವಯಸ್ಸಾಗಿರುವ ದಂಪತಿ ಆರೈಕೆ ಹೀಗೆ ಅನೇಕ ಒಳ್ಳೆಯ ಕೆಲಸಗಳನ್ನು ಆಕೆ ಮಾಡುತ್ತಿದ್ದಾರೆ.

  ಸನ್ನಿ ಲಿಯೋನ್ ಅವರ ಕೆಲ ಸಮಾಜಮುಖಿ ಕೆಲಸಗಳು ಮುಂದಿದೆ ಓದಿ....

  ಕೇರಳದ ಸಂತ್ರಸ್ಥರಿಗೆ 5 ಕೋಟಿ

  ಕೇರಳದ ಸಂತ್ರಸ್ಥರಿಗೆ 5 ಕೋಟಿ

  ನಟಿ ಸನ್ನಿ ಲಿಯೋನ್ ಇತ್ತೀಚಿಗೆ ಕೇರಳ ಸಂತ್ರಸ್ಥರಿಗಾಗಿ ಬರೋಬ್ಬರಿ 5 ಕೋಟಿ ಹಣ ನೀಡಿದ್ದಾರೆ. ಮಲಯಾಳಂ ಚಿತ್ರ ನಿರ್ದೇಶಕರೊಬ್ಬರು ಈ ವಿಷಯವನ್ನು ಸ್ಪಷ್ಟ ಪಡಿಸಿದ್ದಾರೆ. ಸನ್ನಿ ಲಿಯೋನ್ ಅವರ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸನ್ನಿಯ ಸಹಾಯದ ಗುಣವನ್ನು ನೆನೆಯುತ್ತಿದ್ದಾರೆ.

  ಮೊಟ್ಟ ಮೊದಲ ಬಾರಿಗೆ ನೀಲಿ ಚಿತ್ರ ಕಂಡಾಗ ಸನ್ನಿ ಬಿಕ್ಕಿಬಿಕ್ಕಿ ಅತ್ತಿದ್ದರು: ಎಂಥಾ ವಿಪರ್ಯಾಸ.!ಮೊಟ್ಟ ಮೊದಲ ಬಾರಿಗೆ ನೀಲಿ ಚಿತ್ರ ಕಂಡಾಗ ಸನ್ನಿ ಬಿಕ್ಕಿಬಿಕ್ಕಿ ಅತ್ತಿದ್ದರು: ಎಂಥಾ ವಿಪರ್ಯಾಸ.!

  ಹೆಣ್ಣು ಮಗುವನ್ನು ದತ್ತು

  ಹೆಣ್ಣು ಮಗುವನ್ನು ದತ್ತು

  ಜುಲೈ 2017 ರಂದು ಮಹಾರಾಷ್ಟ್ರದ ಲಾತೂರ್ ನಿಂದ ಸನ್ನಿ ಲಿಯೋನ್ ಮತ್ತು ಅವರ ಪತಿ ಡೇನಿಯಲ್ ಒಂದು ಹೆಣ್ಣು ಮಗುವನ್ನು ದತ್ತು ಪಡೆದಿದ್ದಾರೆ. ಆ ಮಗುವಿಗೆ ನಿಶಾ ಕೌರ್ ವೆಬರ್ ಎಂದು ನಾಮಕರಣ ಮಾಡಿ, ತಾವೇ ಅದನ್ನು ನೋಡಿಕೊಳ್ಳುತ್ತಿದ್ದಾರೆ. ಅವರ ಪುತ್ರಿ ನಿಶಾ ಮನೆಗೆ ಕಾಲಿಟ್ಟ ದಿನವೇ ಸನ್ನಿ ಲಿಯೋನ್ ಜೀವನಾಧರಿತ `ಕರಣ್ ಜಿತ್ ಕೌರ್' ವೆಬ್ ಸಿರೀಸ್ ಕೆಲಸ ಪ್ರಾರಂಭ ಆಗಿತ್ತು.

  ಕಿಡ್ನಿ ವೈಪಲ್ಯ ದಿಂದ ಬಳಲುತ್ತಿದ್ದವರಿಗೆ ಸಹಾಯ

  ಕಿಡ್ನಿ ವೈಪಲ್ಯ ದಿಂದ ಬಳಲುತ್ತಿದ್ದವರಿಗೆ ಸಹಾಯ

  ಕಿಡ್ನಿ ವೈಪಲ್ಯ ದಿಂದ ಬಳಲುತ್ತಿದ್ದ ಪ್ರಭಾಕರ್ ಎಂಬುವವರು ಕೆಲ ವರ್ಷಗಳಿಂದ ಸಿನಿಮಾರಂಗದಲ್ಲಿ ಕೆಲಸ ಮಾಡಿದ್ದರು. ಆದರೆ, ಇವರ ಕಷ್ಟದ ಕಾಲದಲ್ಲಿ ಯಾರೂ ಸಹಾಯಕ್ಕೆ ಬರಲಿಲ್ಲ. ಆಗ ಸನ್ನಿ ಲಿಯೋನ್ ಒಂದು ವರ್ಷದ ವರೆಗೆ ಅವರ ಡಯಾಲಿಸಿಸ್ ಮಾಡಿಸಿದರು. ಅವರ ಔಷಧಿಯ ಖರ್ಚು ನೋಡಿಕೊಂಡರು. 20 ಲಕ್ಷ ರೂಪಾಯಿಯನ್ನು ಕಿಡ್ನಿ ಕಸಿಯಾಗಿ ನೀಡಿದ್ದಾರೆ.

  ಚಾಲ್ಡ್ ಪಾರ್ನ್ ವಿರುದ್ಧ ಕೂಗು

  ಚಾಲ್ಡ್ ಪಾರ್ನ್ ವಿರುದ್ಧ ಕೂಗು

  ನೀಲಿ ಚಿತ್ರಗಳಲ್ಲಿ ನಟಿಸಿ ಪಾರ್ನ್ ಸ್ಟಾರ್ ಎಂಬ ಹೆಸರು ಪಡೆದಿರುವ ಸನ್ನಿ ಚಾಲ್ಡ್ ಪಾರ್ನ್ ಅನ್ನು ವಿರೋಧ ಮಾಡಿದ್ದಾರೆ. ಅನೇಕ ಪಾರ್ನ್ ಸ್ಟಾರ್ ಗಳು ಚಾಲ್ಡ್ ಪಾರ್ನ್ ನಲ್ಲಿ ನಟಿಸಿದ್ದರು. ಆದರೆ, ಸನ್ನಿ ಮಾತ್ರ ಇದರ ವಿರುದ್ಧ ನಿಂತರು. ಎಷ್ಟೇ ಹಣ ನೀಡಿದರು ಚಾಲ್ಡ್ ಪಾರ್ನ್ ನಲ್ಲಿ ನಟಿಸೋದಿಲ್ಲ ಎಂದಿದ್ದಾರೆ.

  ಮುಂಬೈ ಶಾಲೆಗೆ ಹಣ ಸಹಾಯ

  ಮುಂಬೈ ಶಾಲೆಗೆ ಹಣ ಸಹಾಯ

  ಸನ್ನಿ ಲಿಯೋನ್ ಮುಂಬೈನಲ್ಲಿ ಇರುವ ಒಂದು ಶಾಲೆಗೆ ಹಣ ನೀಡಿದ್ದರು. ಆ ಶಾಲೆಯ ಅಭಿವೃದ್ದಿಗೆ ತನ್ನ ಕೈನಲ್ಲಿ ಆದ ಸಹಾಯ ಮಾಡಿದ್ದರು. 300 ವಿಧ್ಯಾರ್ಥಿಗಳು ಆ ಶಾಲೆಯಲ್ಲಿ ಓದುತ್ತಿದ್ದು, ಮಕ್ಕಳ ಸೌಲಭ್ಯಕ್ಕಾಗಿ ಗೌರವ ಧನವನ್ನು ನೀಡಿದ್ದರು. ಅಲ್ಲದೆ, ಆಗಾಗ ಆ ವಿಧ್ಯಾರ್ಥಿಗಳಿಗೆ ಅಗತ್ಯಗಳನ್ನು ಪೂರೈಸುತ್ತಿದ್ದರು.

  ವಯಸ್ಸಾಗಿರುವ ದಂಪತಿಯ ಆರೈಕೆ

  ವಯಸ್ಸಾಗಿರುವ ದಂಪತಿಯ ಆರೈಕೆ

  ಸನ್ನಿಲಿಯೋನ್ ಮೂಲತಃ ಸಿಖ್ ಧರ್ಮಕ್ಕೆ ಸೇರಿದವರು. ಆ ಧರ್ಮದ ಪ್ರಕಾರ ಹಿರಿಯರನ್ನು ಚೆನ್ನಾಗಿ ನೋಡಿಕೊಳ್ಳುವುದು ಪುಣ್ಯದ ಕೆಲಸ. ವಯಸ್ಸಾದವರ ಸೇವೆ ಮಾಡಿದರೆ, ದೇವರ ಸೇವೆ ಮಾಡಿದ ಹಾಗೆ. ಅದೇ ಕಾರಣದಿಂದ ಸನ್ನಿ ಲಿಯೋನ್ ವಯಸ್ಸಾಗಿರುವ ಅಜ್ಜ, ಅಜ್ಜಿಯನ್ನು ದತ್ತು ತೆರೆದುಕೊಂಡಿದ್ದಾರಂತೆ. ಆ ಹಿರಿ ಜೀವಗಳ ಆರೈಕೆಯನ್ನು ಅವರು ಮಾಡುತ್ತಿದ್ದಾರೆ.

  ಹಾರಾಜಿನಿಂದ ಬಂದ ಹಣ ಕ್ಯಾನ್ಸರ್ ಗಾಗಿ

  ಹಾರಾಜಿನಿಂದ ಬಂದ ಹಣ ಕ್ಯಾನ್ಸರ್ ಗಾಗಿ

  'ಜಿಸ್ಮ್ 2' ಸನ್ನಿಲಿಯೋನ್ ಅವರ ಮೊದಲ ಬಾಲಿವುಡ್ ಸಿನಿಮಾ. ಈ ಸಿನಿಮಾದಲ್ಲಿ ಸನ್ನಿ ಲಿಯೋನ್ ಧರಿಸಿದ್ದ ಬಿಕಿನಿಯನ್ನು ಹಾರಾಜಿಗೆ ಇಡಲಾಗಿತ್ತು. ಬಳಿಕ ಇದರಿಂದ ಬಂದ ಪೂರ್ಣ ಹಣವನ್ನು ಅವರು ಕ್ಯಾನ್ಸರ್ ಚಿಕಿತ್ಸೆ ಬಳಕೆ ಆಗಲಿ ಎನ್ನುವ ಕಾರಣಕ್ಕೆ ಒಂದು ಎನ್ ಜಿ ಓ ಸಂಸ್ಥೆಗೆ ನೀಡಿದ್ದರು.

  English summary
  List of Bollywood actress Sunny Leone social works.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X