ನಟಿ ವಾಣಿ ಕಪೂರ್ ಅಭಿನಯಿಸಿರುವುದು ಎರಡ್ಮೂರು ಸಿನಿಮಾಗಳಲ್ಲಿ ಅಷ್ಟೇ. ಆದರೂ, ನಟಿ ವಾಣಿ ಕಪೂರ್ ಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಇದ್ದಾರೆ. ಇನ್ಸ್ಟಾಗ್ರಾಮ್ ಒಂದರಲ್ಲಿಯೇ ನಟಿ ವಾಣಿ ಕಪೂರ್ ಗೆ 1.8 ಮಿಲಿಯನ್ ಫಾಲೋವರ್ಸ್ ಇದ್ದಾರೆ.
'ಬೇಫಿಕ್ರೇ' ಸಿನಿಮಾ ಆದ್ಮೇಲೆ, ಸಿಕ್ಕಾಪಟ್ಟೆ ಚ್ಯೂಸಿ ಆಗಿರುವ ವಾಣಿ ಕಪೂರ್ ಈಗ ಸುದ್ದಿ ಆಗುತ್ತಿರುವುದೇ ಬೇರೆ ಕಾರಣಕ್ಕೆ. ಇನ್ಸ್ಟಾಗ್ರಾಮ್ ನಲ್ಲಿ ನಟಿ ವಾಣಿ ಕಪೂರ್ ಟ್ರೋಲ್ ಆಗಿದ್ದಾರೆ.
ಇತ್ತೀಚೆಗಷ್ಟೇ ಫ್ಯಾಶನ್ ವೀಕ್ ಒಂದರಲ್ಲಿ ನಟಿ ವಾಣಿ ಕಪೂರ್ ಭಾಗವಹಿಸಿದ್ದರು. ಸಿಕ್ಕಾಪಟ್ಟೆ ಇಷ್ಟ ಪಟ್ಟು ಬಿಳಿ ಬಣ್ಣದ ಔಟ್ ಫಿಟ್ ಧರಿಸಿ ವಾಣಿ ಕಪೂರ್ Ramp Walk ಮಾಡಿದ್ದರು.
ಆದ್ರೆ, ಇದೀಗ ಅದೇ ಬಿಳಿ ಔಟ್ ಫಿಟ್ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ.
ಟೀಕೆಗೆ ಗುರಿಯಾದ 'ಬಿಗ್ ಬಾಸ್' ಸ್ಪರ್ಧಿಯ ವಿಚಿತ್ರ ಉಡುಪು
ವಾಣಿ ಕಪೂರ್ ಧರಿಸಿದ್ದ ಉಡುಪು 'ಬೆಡ್ ಶೀಟ್ ನಂತೆ ಕಾಣುತ್ತಿದೆ', 'ಡ್ರೆಸ್ ಖರೀದಿ ಮಾಡಲು ದುಡ್ಡು ಇಲ್ಲದೇ ಇರುವಾಗ ಕರ್ಟನ್ ನ ತೊಡುವುದೇ ಫ್ಯಾಶನ್', 'ಇದು ಬೇಫಿಕ್ರೇ ಬೆಡ್ ಶೀಟ್ ಇರಬೇಕು' ಅಂತೆಲ್ಲ ನೆಟ್ಟಿಗರು ವಾಣಿ ಕಪೂರ್ ಬಗ್ಗೆ ಲೇವಡಿ ಮಾಡಿದ್ದಾರೆ.
ನೆಟ್ಟಿಗರು ಬಾಯಿಗೆ ಬಂದ ಹಾಗೆ ಕಾಮೆಂಟ್ ಮಾಡುತ್ತಿದ್ದರೂ, ವಾಣಿ ಕಪೂರ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ | Subscribe to Kannada Filmibeat.