»   » ರಿಯಲ್ ಲೈಫ್ ನಲ್ಲೂ ಧಂ ಎಳೆಯುವ ನಟಿಯರು

ರಿಯಲ್ ಲೈಫ್ ನಲ್ಲೂ ಧಂ ಎಳೆಯುವ ನಟಿಯರು

By: ರವಿಕಿಶೋರ್
Subscribe to Filmibeat Kannada

ತೆರೆಯ ಮೇಲೆ ಸಿನಿಮಾ ತಾರೆಗಳು ಧಂ ಎಳೆಯುವ ದೃಶ್ಯಗಳು, ಸನ್ನಿವೇಶಗಳು ಸರ್ವೇ ಸಾಮಾನ್ಯ. ಚಿತ್ರದ ಕಥೆ, ಪಾತ್ರಕ್ಕೆ ತಕ್ಕಂತೆ ತೆರೆಯ ಮೇಲೆ ಧಂ ಎಳೆಯುವ ಸನ್ನಿವೇಶಗಳು ಆಗಾಗ ಬಂದು ಹೋಗುತ್ತಿರುತ್ತವೆ. ಆದರೆ ಕೆಲವು ನಟಿಯರು ರಿಯಲ್ ಲೈಫ್ ನಲ್ಲೂ ಧಂ ಎಳೆಯುತ್ತಾರೆ ಎಂಬುದು ಅಚ್ಚರಿಯಾದರೂ ಅಷ್ಟೇ ಕಾಮನ್ ಸಂಗತಿ.

ಕೆಲವರಿಗೆ ಧಂ ಎಳೆಯಲಿಲ್ಲ ಎಂದರೆ ದಿನ ಕಳೆದಂತೆ ಭಾಸವಾಗದ ಪರಿಸ್ಥಿತಿ. ಕೆಲವು ಸ್ಟಾರ್ ಹೀರೋಯಿನ್ ಗಳು ಈ ಪಟ್ಟಿಯಲ್ಲಿದ್ದಾರೆ. ಆರಂಭದಲ್ಲಿ ತಮಾಷೆಗೆ ಆರಂಭಿಸಿದ ಇವರು ಬರುಬರುತ್ತಾ ಧೂಮಪಾನದ ವ್ಯಸನಕ್ಕೆ ಬಿದ್ದವರು.

ಇನ್ನು ಚಿತ್ರೋದ್ಯಮ ಎಂದರೆ ತೀವ್ರ ಒತ್ತಡದಿಂದ ಕೂಡಿದ ಜೀವನಶೈಲಿಯ ಬದುಕು. ಸಿನಿಮಾ ಸೆಟ್ ನಲ್ಲೇ ಸಿಗರೇಟ್ ಮೇಲೆ ಸಿಗರೇಟ್ ಸೇದುವ ಹೀರೋಯಿನ್ ಗಳ ಸಂಖ್ಯೆಯೂ ಬೆಳೆಯುತ್ತಿದೆ. ಬನ್ನಿ ನೋಡೋಣ ಯಾವ ತಾರೆಗಳು ಧೂಮಪಾನಿಗಳಾಗಿದ್ದಾರೆ ಎಂಬುದನ್ನು.

ರಾಣಿ ಮುಖರ್ಜಿ

ಸಿಗರೇಟ್ ಸೇದುವ ಅಭ್ಯಾಸ ಇರುವ ತಾರೆಗಳಲ್ಲಿ ಬಾಲಿವುಡ್ ತಾರೆ ರಾಣಿ ಮುಖರ್ಜಿ ಸಹ ಒಬ್ಬರು. ಬೆಳಗ್ಗೆ ಸಿಗರೇಟ್ ಹಚ್ಚದೆ ಆಕೆಗೆ ದಿನದ ಆರಂಭವಾಗುವುದಿಲ್ಲ. ಸಿಗರೇಟ್ ಬಿಡಲು ಅವರು ಮಾಡದ ಪ್ರಯತ್ನಗಳೂ ಇಲ್ಲ. ಆದರೂ ಸಿಗರೇಟ್ ಅವರ ತುಟಿಗಳನ್ನು ಬಿಡುತ್ತಿಲ್ಲ.

ಸುಸ್ಮಿತಾ ಸೇನ್

ಮಾಜಿ ಮಿಸ್ ವರ್ಲ್ಡ್ ಬಾಲಿವುಡ್ ತಾರೆ ಸುಸ್ಮಿತಾ ಸೇನ್ ಗೆ ಧಂ ಎಳೆಯುವ ಅಭ್ಯಾಸ ಇದೆ. ಸಾಮಾನ್ಯವಾಗಿ ಸಿನಿಮಾ ತಾರೆಗಳು ಸಿಗರೇಟ್ ಸೇದಬೇಕಾದರೆ ಕದ್ದುಮುಚ್ಚಿ ಸೇದುವವರೇ ಹೆಚ್ಚು. ಆದರೆ ಸುಸ್ಮಿತಾ ಮಾತ್ರ ಸಾರ್ವಜನಿಕ ಸ್ಥಳಗಳಲ್ಲೇ ಧಂ ಎಳೆದು ಕ್ಯಾಮೆರಾ ಕಣ್ಣಿಗೆ ಸಾಕಷ್ಟು ಸಲ ಸಿಕ್ಕಿಬಿದ್ದಿದ್ದಾರೆ.

ಕಂಗನಾ ರನೌತ್

ಈ ಬಾಲಿವುಡ್ ಬ್ಯೂಟಿ ತೆರೆಯ ಮೇಲೆ ಅಭಿನಯಿಸಿದ ಸಾಕಷ್ಟು ಚಿತ್ರಗಳಲ್ಲಿ ಸಿಗರೇಟ್ ಹಿಡಿದೇ ಅಭಿನಯಿಸಿದ್ದಾರೆ. ಫ್ಯಾಷನ್, ತನು ವೆಡ್ಸ್ ಮನು, ಗ್ಯಾಂಗ್ ಸ್ಟರ್ ಚಿತ್ರಗಳಲ್ಲಿ ಧಂ ಎಳೆಯುವ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ವಾಸ್ತವ ಏನೆಂದರೆ ಕಂಗನಾ ನಿಜ ಜೀವನದಲ್ಲೂ ಚೈನ್ ಸ್ಮೋಕರ್.

ಕೊಂಕಣಾ ಸೇನ್

ಇನ್ನೊಬ್ಬ ಬಾಲಿವುಡ್ ತಾರೆ ಕೊಂಕನಾ ಸೇನ್ ಸಹ ಚೈನ್ ಸ್ಮೋಕರ್. ಗರ್ಭಿಣಿಯಾದಾಗ ಧೂಮಪಾನದಿಂದ ದೂರ ಉಳಿದ ಕಾರಣ ಸಾಕಷ್ಟು ಚಡಪಡಿಸಿದ್ದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ರಣವೀರ್ ಷೋರೆ ಅವರನ್ನು ಮದುವೆಯಾದ ಸಂಗತಿ ಗೊತ್ತೇ ಇದೆ.

ಮನೀಷಾ ಕೋಯಿರಾಲ

ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಮಿಂಚಿದ ಬೆಡಗಿ ಮನಿಷಾ ಕೋಯಿರಾಲ. ಮದ್ಯಪಾನದ ಜೊತೆಗೆ ಧೂಮಪಾನವನ್ನೂ ಮೈಗೂಡಿಸಿಕೊಂಡಿದ್ದ ತಾರೆ. ಸದ್ಯಕ್ಕೆ ಅವರು ಕ್ಯಾನ್ಸರ್ ಗೆದ್ದು ಬಂದು ತಮ್ಮ ಉಳಿದ ಜೀವನವನ್ನು ಕಳೆಯುತ್ತಿದ್ದಾರೆ.

ನಮಿತಾ

ಅಯ್ಯೋ ನಮಿತಾ ಸಹ ಸಿಗರೇಟ್ ಸೇದುತ್ತಾರಾ ಎಂದು ಅಚ್ಚರಿ ಪಡಬೇಡಿ. ನಮಿತಾ ಇದುವರೆಗೂ ಯಾವುದೇ ಕ್ಯಾಮೆರಾಗೂ ಸಿಕ್ಕಿಬಿದ್ದಿಲ್ಲ. ಆದರೆ ಆಕೆಯನ್ನು ಬಲ್ಲವರು ಮಾತ್ರ ಅವರಿಗೆ ಸಿಗರೇಟ್ ಅಭ್ಯಾಸ ಇದೆ ಎನ್ನುತ್ತಾರೆ. ಅವರ ಈ ದುರಭ್ಯಾಸದ ಕಾರನ ಸೆಟ್ ನಲ್ಲಿ ಉಳಿದ ತಾರೆಗಳು ಸಾಕಷ್ಟು ತೊಂದರೆ ಅನುಭವಿಸಿದ್ದನ್ನು ಒಮ್ಮೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು.

English summary
We have witnessed a number of actresses smoking on screen but there are many mainstream actresses who have failed to quit smoking in real lives too.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada