Don't Miss!
- News
ಫೆಬ್ರವರಿ 1ರಂದು 324 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ
- Sports
IND vs NZ 3rd T20: ಅಹಮದಾಬಾದ್ ಪಿಚ್ ಬಗ್ಗೆ ಆಸಕ್ತಿಕರ ಮಾಹಿತಿ ನೀಡಿದ ಕ್ಯುರೇಟರ್: ಹೇಗಿರಲಿದೆ ಪಿಚ್?
- Lifestyle
Horoscope Today 1 Feb 2023: ಬುಧವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ವಿವೋ Y100; ಖರೀದಿಗೆ ಕ್ಯೂ ಖಚಿತ!
- Automobiles
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅರ್ಧ ವರ್ಷ ಬಾಲಿವುಡ್ ಬಾಕ್ಸಾಫೀಸ್ ಕಥೆಯೇನು? KGF 2, RRR, ದಿ ಕಾಶ್ಮೀರ್ ಫೈಲ್ಸ್‌ನದ್ದೇ ಸದ್ದು!
ಕೋವಿಡ್ 19 ಭಾರತಕ್ಕೆ ಎಂಟ್ರಿ ಕೊಟ್ಟಲ್ಲಿಂದ ಬಾಲಿವುಡ್ ಬಾಕ್ಸಾಫೀಸ್ ಚೇತರಿಸಿಕೊಳ್ಳುವುದಕ್ಕೆ ತುಂಬಾನೇ ಕಷ್ಟ ಪಡುತ್ತಿದೆ. ಸೂಪರ್‌ಸ್ಟಾರ್ ಸಿನಿಮಾಗಳೇ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ್ದವು. ಇನ್ನೇನು ಬಾಲಿವುಡ್ ಕಥೆ ಮುಗಿದೇ ಹೋಯ್ತು ಅನ್ನುವಾಗಲೇ ಚಿಕ್ಕದೊಂದು ಚೇತರಿಕೆ ಕಂಡಿದೆ.
ಕೊರೊನಾ ಕಾಲದಲ್ಲಿ ಬಾಲಿವುಡ್ ಸಿನಿಮಾಗಳು ಥಿಯೇಟರ್‌ಗಳಲ್ಲಿ ಸದ್ದು ಮಾಡಲೇ ಇಲ್ಲ. ಆದರೆ, ಒಟಿಟಿಯಲ್ಲಿ ತೆರೆಕಂಡ ಸಿನಿಮಾಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಹೀಗಾಗಿ ಥಿಯೇಟರ್‌ನಲ್ಲಿ ಬಾಲಿವುಡ್ ಸಿನಿಮಾಗಳು ರಿಲೀಸ್ ಆಗುವುದು ಅನುಮಾನ ಎಂದೇ ನಂಬಲಾಗಿತ್ತು.
ಅರ್ಧ
ವರ್ಷ
ಮುಗಿದೇ
ಹೋಯ್ತು:
'ಜೇಮ್ಸ್',
'ಕೆಜಿಎಫ್
2',
'777
ಚಾರ್ಲಿ'
ಜೊತೆ
ಗೆದ್ದೋರು
ಯಾರು?!
2022 ಬಾಲಿವುಡ್ ಮಂದಿಗೆ ಹೊಸ ಹುರುಪು ನೀಡಿದೆ. ಕೆಲವು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದು, ದಕ್ಷಿಣದ ಫ್ಯಾನ್ ಇಂಡಿಯಾ ಸಿನಿಮಾಗಳೂ ಕೂಡ ಸಾಥ್ ನೀಡಿವೆ. ಹಾಗಿದ್ದಂತೆ ಜನವರಿಯಿಂದ ಜೂನ್‌ವರೆಗೆ ಮೊದಲ ಆರು ತಿಂಗಳು ಬಾಲಿವುಡ್ ಬಾಕ್ಸಾಫೀಸ್ ಹೇಗಿತ್ತು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಆಲಿಯಾ ಭಟ್- 'ಗಂಗೂಬಾಯಿ ಕಾಠಿಯಾವಾಡಿ'
ಬಾಲಿವುಡ್ ಲಕ್ಕಿ ಗರ್ಲ್ ಆಲಿಯಾ ಭಟ್ ಸಿನಿಮಾ 'ಗಂಗೂಬಾಯಿ ಕಾಠಿಯಾವಾಡಿ' ಇದೇ ವರ್ಷ ಫೆಬ್ರವರಿಯಲ್ಲಿ ರಿಲೀಸ್ ಆಗಿತ್ತು. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ್ದ ಈ ಸಿನಿಮಾಗೆ ಬಾಕ್ಸಾಫೀಸ್‌ನಲ್ಲಿ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿತ್ತು. ಗಂಗೂಬಾಯಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸುಮಾರು 129.10ಸ ಕೋಟಿ ರೂ. ಗಳಿಕೆ ಕಂಡಿತ್ತು. ಇದು ಈ ವರ್ಷದ ಆರಂಭದಲ್ಲಿ ಬಾಲಿವುಡ್‌ಗೆ ಸಿಕ್ಕ ಮೊದಲ ದೊಡ್ಡ ಯಶಸ್ಸು.
ಕರಣ್
ಜೋಹರ್ಗೆ
ಸಿನಿಮಾ
ಮಾಡುವುದಕ್ಕೆ
ಬರಲ್ವಾ?
ಸಮಂತಾ
ಮಾತಿನ
ಅರ್ಥವೇನು?

ದಕ್ಷಿಣ ಭಾರತದ ಸಿನಿಮಾಗಳದ್ದೇ ದರ್ಬಾರ್
ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 2022ರ ಮೊದಲ ಆರು ತಿಂಗಳು ಅದ್ಭುತ ಗಳಿಕೆ ಕಂಡಿದ್ದರೂ ಅದರ ಕಲೆಕ್ಷನ್‌ನ ಬಹುಪಾಲು ದಕ್ಷಿಣದ ಸಿನಿಮಾದಿಂದಲೇ ಬಂದಿವೆ. 'ಕೆಜಿಎಫ್ 2' ಹಾಗೂ RRR ಸಿನಿಮಾದ ಕಲೆಕ್ಷನ್ ಅನ್ನು ಹಿಂದಿಕ್ಕಲು ಒರಿಜಿನಲ್ ಬಾಲಿವುಡ್ ಸಿನಿಮಾಗಳಿಂದಲೇ ಸಾಧ್ಯವಾಗಿಲ್ಲ. 'ಕೆಜಿಎಫ್ 2' 434.70 ಕೋಟಿ ರೂ. ಗಳಿಕೆ ಕಂಡಿದೆ. ಇದೂವರೆಗೂ ಬಾಲಿವುಡ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಎರಡನೇ ಸಿನಿಮಾ. ಇನ್ನು RRR ಸಿನಿಮಾ 274.31 ಕೋಟಿ ರೂ. ಗಳಿಸಿದೆ.

ಬಾಕ್ಸಾಫೀಸ್‌ನಲ್ಲಿ ಜಾದು ಮಾಡಿದ ಸಿನಿಮಾಗಳಿವು
ಈ ವರ್ಷ ಎಲ್ಲಾ ಚಿತ್ರರಂಗದ ಕಣ್ಣು ಬಾಲಿವುಡ್ ಮೇಲೆ ಇಟ್ಟಿತ್ತು. ಈ ವರ್ಷ ಬಾಲಿವುಡ್ ಬಾಕ್ಸಾಫೀಸ್ ಚೇತರಿಕೆ ಕಂಡಿದ್ದರಿಂದ ಕೊಂಚ ಮಟ್ಟಿಗೆ ನಿರಾಳರಾಗಿದ್ದಾರೆ. ದಕ್ಷಿಣದ ಸಿನಿಮಾಗಳು ಸೇರಿದಂತೆ ಬಾಲಿವುಡ್‌ನ ನಾಲ್ಕೈದು ಸಿನಿಮಾಗಳು ಬಾಕ್ಸಾಫೀಸ್ ದೋಚಿವೆ.
ಗಂಗೂಬಾಯಿ
ಕಾಠಿಯಾವಾಡಿ
129.10
ಕೋಟಿ
ರೂ.
ದಿ
ಕಾಶ್ಮೀರ್
ಫೈಲ್ಸ್
252.90
ಕೋಟಿ
ರೂ.
ಭೂಲ್
ಭುಲಯ್ಯ
2
184.32
ಕೋಟಿ
ರೂ.
RRR
274.31
ಕೋಟಿ
ರೂ.
ಕೆಜಿಎಫ್
2
434.70
ಕೋಟಿ
ರೂ.
3
ಬಾರಿ
ಮದುವೆ
ಆಗೋ
ಅವಕಾಶವಿದ್ದರೂ
ಬಾಲಿವುಡ್
ನಟಿ
ಸುಶ್ಮಿತಾ
ಸೇನ್
ಮದುವೆ
ಆಗಿಲ್ಲವೇಕೆ?

ಅರ್ಧ ವರ್ಷದ ಬ್ಯುಸಿನೆಸ್ ಎಷ್ಟು?
ಬಾಲಿವುಡ್ ಅರ್ಧ ವರ್ಷದಲ್ಲಿ ಸುಮಾರು ಸುಮಾರು ಎರಡು ಸಾವಿರ ಕೋಟಿ ರೂ. ಬ್ಯುಸಿನೆಸ್ ಮಾಡಿದೆ ಎಂಬುದು ಟ್ರೇಡ್ ಅನಲಿಸ್ಟ್‌ಗಳ ಲೆಕ್ಕಾಚಾರ. ಕೋವಿಡ್‌ಗಿಂತ ಮುನ್ನ ಬಾಲಿವುಡ್ ಸಿನಿಮಾಗಳು 2300 ರಿಂದ 2500 ಕೋಟಿ ರೂ. ಬ್ಯುಸಿನೆಸ್ ಮಾಡಿದ್ದು ಇದೆ. ಆದರೆ, ಕೋವಿಡ್ ಬಳಿಕ ನಷ್ಟದಲ್ಲಿದ್ದ ಚಿತ್ರರಂಗ ಚೇತರಿಸಿಕೊಂಡಿದ್ದಕ್ಕೆ ಸಮಾಧಾನಗೊಂಡಿದ್ದಾರೆ. ಆದರೂ ಈ ಗಳಿಕೆಯಲ್ಲಿ ದಕ್ಷಿಣ ಭಾರತದ ಸಿನಿಮಾಗಳ ಪಾಲು ಹೆಚ್ಚಿದೆ ಎನ್ನುವುದನ್ನು ಮರೆಯುವಂತಿಲ್ಲ.