For Quick Alerts
  ALLOW NOTIFICATIONS  
  For Daily Alerts

  ದಿಗ್ಗಜ ಅಥ್ಲೀಟ್ ಮಿಲ್ಕಾ ಸಿಂಗ್ ನಿಧನಕ್ಕೆ ಸಿನಿ ಗಣ್ಯರ ಕಂಬನಿ

  |

  'ಫ್ಲೈಯಿಂಗ್ ಸಿಖ್' ಖ್ಯಾತಿಯ ಲೆಜೆಂಡರಿ ಅಥ್ಲೀಟ್ ಮಿಲ್ಕಾ ಸಿಂಗ್ ಶುಕ್ರವಾರ ತಡರಾತ್ರಿ ನಿಧಹೊಂದಿದರು. 91 ವರ್ಷದ ಮಿಲ್ಕಾ ಸಿಂಗ್ ಕೊರೊನಾ ವೈರಸ್ ಗೆ ತುತ್ತಾಗಿದ್ದರು. ಒಂದು ತಿಂಗಳು ಕೊರೊನಾ ವಿರುದ್ಧ ಹೋರಾಟದ ಬಳಿಕ ಮಿಲ್ಕಾ ಸಿಂಗ್ ಕೊನೆಯುಸಿರೆಳೆದರು. ಕಳೆದ ಒಂದು ತಿಂಗಳಿಂದ ಚಂಡೀಗಡದ ಪಿಜಿಐಎಂಆರ್ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ಮಿಲ್ಕಾ ಸಿಂಗ್ ಚಿಕಿತ್ಸೆ ದಾಖಲಾಗಿದ್ದರು.

  ಫ್ಲೈಯಿಂಗ್ ಸಿಖ್ Milka Singh ಕೊರೊನಾಗೆ ಬಲಿ | Oneindia Kannada

  ಮಿಲ್ಕಾ ಸಿಂಗ್ ಪತ್ನಿ, ಭಾರತದ ವಾಲಿಬಾಲ್ ತಂಡದ ಮಾಜಿ ನಾಯಕಿ ನಿರ್ಮಲಾ ಕೌರ್ ಇತ್ತೀಚಿಗಷ್ಟೆ ಕೋವಿಡ್ ನಿಂದ ನಿಧರಾಗಿದ್ದರು. ಮಿಲ್ಕಾ ಸಿಂಗ್ ನಿಧನದ ಸುದ್ದಿ ಕೇಳುತ್ತಿದ್ದಂತೆ ಅನೇಕರು ಕಂಬನಿ ಮಿಡಿದಿದ್ದಾರೆ. ಬಾಲಿವುಡ್ ನ ಖ್ಯಾತ ಕಲಾವಿದರು ಸಹ ಮಿಲ್ಕಾ ಸಿಂಗ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ..

  ನಟ ಶಾರುಖ್ ಖಾನ್

  ನಟ ಶಾರುಖ್ ಖಾನ್

  ಶಾರುಖ್ ಖಾನ್ ಸಂತಾಪ ಸೂಚಿಸಿ, "ಫ್ಲೈಯಿಂಗ್ ಸಿಖ್ ಇನ್ಮುಂದೆ ನಮ್ಮೊಂದಿಗೆ ಇಲ್ಲ, ಆದರೆ ಅವರ ಉಪಸ್ಥಿತಿ ಯಾವಾಗಲೂ ಇರುತ್ತದೆ ಮತ್ತು ಸಾಟಿಯಿಲ್ಲದ ಅವರ ಲೆಗಸಿ ಯಾವಾಗಲೂ ಶಾಶ್ವತ. ನನಗೆ ಮತ್ತು ಲಕ್ಷಾಂತರ ಜನರ ಸ್ಫೂರ್ತಿ. ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಟ್ವೀಟ್ ಮಾಡಿದ್ದಾರೆ.

  ನಟ ಅಕ್ಷಯ್ ಕುಮಾರ್

  ನಟ ಅಕ್ಷಯ್ ಕುಮಾರ್

  ಇನ್ನು ನಟ ಅಕ್ಷಯ್ ಕುಮಾರ್ ಟ್ವೀಟ್ ಮಾಡಿ ಮಿಲ್ಕಾ ಸಿಂಗ್ ಅವರ ಪಾತ್ರವನ್ನು ಮಾಡದೆ ಇರುವುದು ತುಂಬಾ ನೋವಿದೆ ಎಂದಿದ್ದಾರೆ. "ಮಿಲ್ಕಾ ಸಿಂಗ್ ಅವರ ನಿಧನದ ಸುದ್ದಿ ಕೇಳಿ ತುಂಬಾ ದುಃಖವಾಗಿದೆ. ಅವರ ಪಾತ್ರವನ್ನು ಮಾಡದಿರುವುದಕ್ಕೆ ನಾನು ಶಾಶ್ವತವಾಗಿ ವಿಷಾದಿಸುತ್ತೇನೆ. ಫ್ಲೈಯಿಂಗ್ ಸಿಖ್, ನೀವು ಸ್ವರ್ಗದಲ್ಲಿ ಚಿನ್ನದ ಓಟವನ್ನು ಹೊಂದಿರಲಿ. ಓಂ ಶಾಂತಿ" ಎಂದು ಟ್ವೀಟ್ ಮಾಡಿದ್ದಾರೆ.

  ನಟಿ ರವೀನಾ ಟಂಡನ್

  ನಟಿ ರವೀನಾ ಟಂಡನ್

  ನಟಿ ರವೀನಾ ಟಂಡನ್, ಮಿಲ್ಕಾ ಸಿಂಗ್ ಜೊತೆ ಇರುವ ಹಳೆಯ ಫೋಟೋವನ್ನು ಶೇರ್ ಮಾಡಿ ಸಂತಾಪ ಸೂಚಿಸಿದ್ದಾರೆ. ನೀವು ಯಾವಾಗಲು ನಮ್ಮೆಲ್ಲರ ಹೃದಯದಲ್ಲಿ ವಿಶೇಷ ಸ್ಥಾನ ಹೊಂದಿರುತ್ತೀರಿ. ನಮಗೆ ಸ್ಫೂರ್ತಿ ಬೇಕಾದಾಗಲೆಲ್ಲಾ ಭಾಗ್ ಮಿಲ್ಕಾ ಭಾಗ್ ನಮ್ಮ ಕಿವಿಯಲ್ಲಿ ಮೂಡುತ್ತದೆ. ಓಂ ಶಾಂತಿ" ಎಂದು ಟ್ವೀಟ್ ಮಾಡಿದ್ದಾರೆ.

  ರಾಹುಲ್ ಬೋಸ್

  ರಾಹುಲ್ ಬೋಸ್

  "ಭಾರತಕ್ಕೆ ಎಂತಹ ದುಃಖದ ದಿನ. ಕ್ರೀಡಾಲೋಕಕ್ಕೆ ದುಃಖದ ದಿನ. ಒಂದು ಸ್ಫೂರ್ತಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸರ್" ಎಂದು ಟ್ವೀಟ್ ಮಾಡಿದ್ದಾರೆ.

  English summary
  Bollywood celebrities mourn death of Legendary sprinter Milkha Singh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X