»   » ಶಿಕಾಗೋದಲ್ಲಿ ಅಮೀರ್ ಖಾನ್, ಕತ್ರಿನಾ ಮದುವೆ!

ಶಿಕಾಗೋದಲ್ಲಿ ಅಮೀರ್ ಖಾನ್, ಕತ್ರಿನಾ ಮದುವೆ!

Posted By:
Subscribe to Filmibeat Kannada

ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಹಾಗೂ ಯಶಸ್ವಿ ನಟಿ ಕತ್ರಿನಾ ಕೈಫ್ ಮದುವೆ ಭರ್ಜರಿಯಾಗಿ ನಡೆದಿದೆ. ಅಮೀರ್ ಹಾಗೂ ಕತ್ರಿನಾ, ಹೊಳೆಯುವ ಬಿಳಿ ಬಟ್ಟೆಯಲ್ಲಿ ಮದುಮಗ ಹಾಗೂ ಮದುಮಗಳಾಗಿ ಕಂಗೊಳಿಸುತ್ತಿದ್ದರು. ಅವರಿಬ್ಬರನ್ನು ನೋಡಲು ಇಷ್ಟಪಟ್ಟು ಬಂದಿದ್ದ ಜನರಿಗೆ ಸಾಕಷ್ಟು ಕಷ್ಟವಾದರೂ ಅವರು ಈ ಇಬ್ಬರನ್ನೂ ನೋಡಿ ಕಣ್ತುಂಬಿಕೊಳ್ಳುತ್ತಿದ್ದರು. ಈ ಜೋಡಿಯನ್ನು ಹಾಗೂ ಮದುವೆಯನ್ನು ಎಲ್ಲರೂ ನೋಡುವ ಅವಕಾಶ ಕೂಡ ಲಭಿಸಲಿದೆ.

ಏಕೆಂದರೆ ಅಮೀರ್ ಖಾನ್ ಹಾಗೂ ಕತ್ರಿನಾ ಕೈಫ್ ಮದುವೆಯಾಗಿದ್ದು, ಜೋಡಿ ಹಕ್ಕಿಗಳಾಗಿ ಫೋಸ್ ನೀಡಿದ್ದು 'ಧೂಮ್- 3' ಚಿತ್ರದ ಶೂಟಿಂಗ್ ಸೆಟ್ ನಲ್ಲಿ. ಆಕ್ಷನ್, ಥ್ರಿಲ್ಲರ್ ಚಿತ್ರವಾಗಿರುವ 'ಧೂಮ್- 3' ಚಿತ್ರೀಕರಣವು ಶಿಕಾಗೋದಲ್ಲಿ ಕಳೆದೆರಡು ತಿಂಗಳಿನಿಂದ ಸತತವಾಗಿ ಚಿತ್ರೀಕರಣಗೊಳ್ಳುತ್ತಿದೆ. ಚಿತ್ರದ ನಾಯಕರಾದ ಅಮೀರ್ ಖಾನ್ ಹಾಗೂ ಅಭಿಷೇಕ್ ಬಚ್ಚನ್ ತಮ್ಮ ಕುಟುಂಬ ಸಮೇತರಾಗಿ ಶಿಕಾಗೋದಲ್ಲಿ ಬೀಡುಬಿಟ್ಟಿದ್ದಾರೆ, ಬೇಕಾದಾಗ ಮುಂಬೈಗೆ ಬಂದು ಹೋಗುತ್ತಿದ್ದಾರೆ.

Aamir Khan Katrina Kaif

ಮದುಮಕ್ಕಳಾಗಿ ನಟಿಸಿರುವ ಅಮೀರ್ ಹಾಗೂ ಕತ್ರಿನಾ ಜೋಡಿ ಧರಿಸಿರುವ ಬಟ್ಟೆ ಎಲ್ಲರನ್ನೂ ಸೆಳೆಯುತ್ತಿತ್ತು. ಬಿಳಿ ಫಾರ್ಮಲ್ ಸ್ಯೂಟ್ ನಲ್ಲಿ ಅಮೀರ್ ಮಿಂಚುತ್ತಿದ್ದರೆ ಬಳಿ ವೆಡ್ಡಿಂಗ್ ಗೌನ್ ತೊಟ್ಟಿದ್ದ ಕತ್ರಿನಾ ಸಾಕ್ಷಾತ್ ದೇವತೆಯಂತೆ ಮಿರಮಿರ ಮಿಂಚುತ್ತಿದ್ದರು. ಈ ಮದುವೆಯನ್ನು ಧೂಮ್-3 ಚಿತ್ರದಲ್ಲಿ ಪ್ರೇಕ್ಷಕರು ನೋಡಿ ಕಣ್ತುಂಬಿಕೊಳ್ಳುವ ಅವಕಾಶ ಇರುವುದರಿಂದ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ.

ಇನ್ನೊಂದು ವಿಶೇಷವೆಂದರೆ, ಈ ಚಿತ್ರದಲ್ಲಿ ಆಸ್ಟ್ರೇಲಿಯಾದ ಮಾಡಲ್ ಹಾಗೂ ನಟಿ ತಬ್ರೆತ್ ಬೆಥೆಲ್ ಕೂಡ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 2008 ರಿಂದ ನಟನೆಯನ್ನೂ ಪ್ರಾರಂಭಿಸಿರುವ ಈ ರೂಪದರ್ಶಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವವರು. ಮೊದಲೇ ಧೂಮ್- 3 ಚಿತ್ರದ ಬಗ್ಗೆ ಇದ್ದ ಭಾರೀ ನಿರೀಕ್ಷೆ ಈ ಮೂಲಕ ಇನ್ನೂ ಹೆಚ್ಚಾಗಲಿದೆ. ಒಟ್ಟಿನಲ್ಲಿ ಕತ್ರಿನಾ-ಅಮೀರ್ ಮದುವೆ ಕಣ್ತುಂಬಿಕೊಳ್ಳಲು ಮರೆಯದಿರಿ ಎಂಬ ಕಳಕಳಿ ಬಾಲಿವುಡ್ ಅಂಗಳದಿಂದ ಕೇಳಿಬರುತ್ತಿದೆ. (ಏಜೆನ್ಸೀಸ್)

English summary
Here are the pictures of Dhoom 3 from the sets. By looking at the pictures we can say that Aamir Khan is getting married to Katrina Kaif in Dhoom 3.
 
Please Wait while comments are loading...