»   » ಕಾಶ್ಮೀರದ ಬಾಲಕಿಯ ಅತ್ಯಾಚಾರ ವಿರುದ್ಧ ಧ್ವನಿ ಎತ್ತಿದ ಬಾಲಿವುಡ್ ನಟಿಯರು

ಕಾಶ್ಮೀರದ ಬಾಲಕಿಯ ಅತ್ಯಾಚಾರ ವಿರುದ್ಧ ಧ್ವನಿ ಎತ್ತಿದ ಬಾಲಿವುಡ್ ನಟಿಯರು

Posted By:
Subscribe to Filmibeat Kannada

ಕೆಲ ದಿನಗಳ ಹಿಂದೆ ಕಾಶ್ಮೀರದಲ್ಲಿ ನಡೆದ ಒಂದು ಘಟನೆ ಇಡೀ ಮನುಕುಲವನ್ನು ತಲೆ ತಗ್ಗಿಸುವಂತೆ ಮಾಡಿದೆ. ಎಂಟು ವರ್ಷದ ಬಾಲಕಿಗೆ ಡ್ರಗ್ಸ್ ನೀಡಿ ಆರು ಮಂದಿ ಕೀಚಕರು ಸೇರಿ ಮೂರು ದಿನಗಳ ಕಾಲ ಲೈಂಗಿಕವಾಗಿ ಕಿರುಕುಳ ನೀಡಿ, ಅತ್ಯಾಚಾರ ಎಸಗಿ ಬಳಿಕ ಹತ್ಯೆ ಮಾಡಿದ್ದರು. ಇಂತಹ ಅಮಾನವಿಯ ಘಟನೆಗೆ ಈಗ ಇಡೀ ದೇಶವೇ ನ್ಯಾಯ ಕೇಳುತ್ತಿದೆ.

8 ವರ್ಷದ ಬಾಲಕಿಯ ಸಾವಿಗೆ ನ್ಯಾಯ ಕೇಳುತ್ತಿದೆ ಕನ್ನಡ ಚಿತ್ರರಂಗ

ಸ್ಯಾಂಡಲ್ ವುಡ್, ಬಾಲಿವುಡ್ ಸೇರಿದಂತೆ ಈಗ ಚಿತ್ರರಂಗದ ನಟ ನಟಿಯರು ಸಹ ನ್ಯಾಯಕ್ಕಾಗಿ ಹೋರಾಟಕ್ಕೆ ನಿಂತಿದ್ದಾರೆ. #justiceforasifa ಮತ್ತು #SpeakUpIndia ಎಂಬ ಹ್ಯಾಶ್ ಟ್ಯಾಗ್ ಬಳಸಿ ಅನೇಕ ಕಲಾವಿದರು ಟ್ವೀಟ್ ಮಾಡುತ್ತಿದ್ದಾರೆ. ಈ ಮೂಲಕ ಘಟನೆಯ ವಿರುದ್ಧ ಧ್ವನಿ ಎತ್ತಿದ್ದಾರೆ. ಬಾಲಿವುಡ್ ನಟಿಯರಾದ ಜೂಹಿ ಚಾವ್ಲಾ, ರವಿನಾ ಟಂಡನ್, ಪ್ರಿಯಾಂಕ ಚೋಪ್ರಾ, ಕರೀನಾ ಕಪೂರ್, ಸೋನಮ್ ಕಪೂರ್, ಕಲ್ಕಿ ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ನ್ಯಾಯ ಕೇಳುತ್ತಿದ್ದಾರೆ.

ಪ್ಲೇ ಕಾರ್ಡ್ ಪ್ರದರ್ಶಿಸುವ ಮೂಲಕ ಕರೀನಾ ಕಪೂರ್, ಸೋನಮ್ ಕಪೂರ್, ಕಲ್ಕಿ ಎಂಟು ವರ್ಷವ ಕಂದನಿಗೆ ಆಗಿರುವ ಅತ್ಯಾಚಾರವನ್ನು ವಿರೋಧಿಸಿದ್ದಾರೆ. ಬಾಲಿವುಡ್ ಮಾತ್ರವಲ್ಲದೆ ಕನ್ನಡದ ನಟಿಯರಾದ ಅಮೂಲ್ಯ, ನಭಾ ನಟೇಶ್, ಶಾನ್ವಿ ಶ್ರೀವಾಸ್ತವ್, ರಾಗಿಣಿ ದ್ವಿವೇದಿ, ಶರ್ಮಿಳಾ ಮಾಂಡ್ರೆ ಮತ್ತು ಗಾಯಕ ರಘು ದೀಕ್ಷಿತ್ ಈಗಾಗಲೇ ಈ ಬಗ್ಗೆ ಮಾತನಾಡಿದ್ದಾರೆ. ನಟ, ನಟಿಯರು, ಚಿತ್ರರಂಗದ ಗಣ್ಯರು ಮಾತ್ರವಲ್ಲದೆ ಲಕ್ಷಾಂತರ ಜನರು ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ.

bollywood film actresses joins the celebrity bandwagon over Kathua rape

ಘಟನೆಯ ವಿವರ
ಜಮ್ಮು ಕಾಶ್ಮೀರದಲ್ಲಿ ಎಂಟು ವರ್ಷದ ಬಾಲಕಿಯ ಮೇಲೆ ಆರು ಮಂದಿ ಕೀಚಕರು ಸೇರಿ ಡ್ರಗ್ಸ್ ನೀಡಿ ಮೂರು ದಿನಗಳ ಕಾಲ ಲೈಂಗಿಕವಾಗಿ ಕಿರುಕುಳ ನೀಡಿದ್ದರು. ಬಾಲಕಿಯನ್ನು ಕಿಡ್ನಾಪ್ ಮಾಡಿ ದೇವಿಸ್ಥಾನ್ ಎಂಬ ದೇವಾಲಯದಲ್ಲಿಟ್ಟು ಅತ್ಯಾಚಾರವೆಸಗಿ ಬಳಿಕ ಹತ್ಯೆ ಮಾಡಿದ್ದರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮಗುವಿಗೆ ನ್ಯಾಯ ಸಿಗಬೇಕು ಎಂದು ಹೋರಾಟ ಹೆಚ್ಚಾಗಿದೆ.

English summary
Kathua Rape Case: bollywood film actresses juhi chawla, priyanka chopra, kareena kapoor and Kalki Koechlin have taken social media platform to demand #JusticeForAsifa 8 years old girl, Gangraped, Murdered in ‘Devi’-sthaan temple.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X