»   » ಬಚ್ಚನ್ ಕುಟುಂಬಕ್ಕೆ ಒಲಿದ ಪದ್ಮ ಪ್ರಶಸ್ತಿಗಳು, ಒಂದಾ ಎರಡಾ?

ಬಚ್ಚನ್ ಕುಟುಂಬಕ್ಕೆ ಒಲಿದ ಪದ್ಮ ಪ್ರಶಸ್ತಿಗಳು, ಒಂದಾ ಎರಡಾ?

Posted By:
Subscribe to Filmibeat Kannada

2015ನೇ ಸಾಲಿನ ಪದ್ಮ ಪ್ರಶಸ್ತಿಯನ್ನು ಕೇಂದ್ರ ಸರಕಾರ ಪ್ರಕಟಿಸಿದೆ. ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವ 'ಪದ್ಮ ವಿಭೂಷಣ' ಪ್ರಶಸ್ತಿ ಒಂಬತ್ತು ಸಾಧಕರಿಗೆ ಘೋಷಣೆಯಾಗಿದೆ.

ಈ ಪಟ್ಟಿಯಲ್ಲಿ ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ಅವರ ಹೆಸರೂ ಒಂದು. 11.10.1942ರಲ್ಲಿ ಅಲಹಾಬಾದ್ ನಲ್ಲಿ ಜನಿಸಿದ ಅಮಿತಾಬ್, ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಅಮೃತಧಾರೆ ಚಿತ್ರದಲ್ಲೂ ಅಮಿತಾಬ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

72 ವರ್ಷದ ಅಮಿತಾಬ್ ಬಚ್ಚನ್ ಅವರಿಗೆ ಇದು ಮೂರನೇ ಪದ್ಮ ಪ್ರಶಸ್ತಿ. ಈ ಹಿಂದೆ ಅವರಿಗೆ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಬಂದಿತ್ತು. (2015ರ ಪದ್ಮಪ್ರಶಸ್ತಿ ಪ್ರಕಟ)

ಈ ಬಾರಿಯ ಪದ್ಮ ಪ್ರಶಸ್ತಿ ಪ್ರಕಟವಾಗುತ್ತಿದ್ದಂತೇ ಟ್ವೀಟ್ ಸಂದೇಶ ರವಾನಿಸಿರುವ ಬಿಗ್ ಬಿ, ನನ್ನನ್ನು ಅಭಿನಂದಿಸಿರುವ ಅಭಿಮಾನಿಗಳಿಗೆ ನಾನು ಹೇಳುವುದಿಷ್ಟು, ನಿಮ್ಮಿಂದಾಗಿಯೇ ನನಗೆ ಈ ಪ್ರಶಸ್ತಿ ಲಭ್ಯವಾಗಿದೆ ಎಂದಿದ್ದಾರೆ.

ಭಾರತ ಸರಕಾರ ನನಗಿಂದು ಪದ್ಮವಿಭೂಷಣ ಪ್ರಶಸ್ತಿ ಘೋಷಿಸಿದೆ. ನನಗೆ ಮಾತೇ ಹೊರಡದಂತಾಗಿದೆ. ನನ್ನ ಅಭಿಮಾನಿಗಳಿಗೆ, ಆಯ್ಕೆ ಮಂಡಳಿ ಸದಸ್ಯರಿಗೆ ನನ್ನ ಅನಂತಾನಂತ ಧನ್ಯವಾದಗಳು ಎಂದು ಬಚ್ಚನ್ ತನ್ನ ಬ್ಲಾಗಿನಲ್ಲಿ ಬರೆದುಕೊಂಡಿದ್ದಾರೆ.

ಸೀನಿಯರ್ ಬಚ್ಚನ್ ಕುಟುಂಬಕ್ಕೆ ಇದುವರೆಗೆ ಒಲಿದ ಪದ್ಮ ಪ್ರಶಸ್ತಿಗಳೆಷ್ಠು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಅಮಿತಾಬ್ ಬಚ್ಚನ್ ಗೆ ಮೂರು ಬಾರಿ

1984ರಲ್ಲಿ ಅಮಿತಾಬ್ ಅವರಿಗೆ ಪದ್ಮಶ್ರೀ ಮತ್ತು 2001ರಲ್ಲಿ ಪದ್ಮಭೂಷಣ ಪ್ರಶಸ್ತಿ ಲಭಿಸಿತ್ತು. ಇದಲ್ಲದೇ ಈಗ 2015ರ ಪದ್ಮವಿಭೂಷಣ ಪ್ರಶಸ್ತಿ.

ಒಟ್ಟು ಏಳು ಪ್ರಶಸ್ತಿಗಳು

ಈ ಬಾರಿಯ ಪದ್ಮ ಪ್ರಶಸ್ತಿ ಪ್ರಕಟಗೊಂಡ ನಂತರ ಅಮಿತಾಬ್ ಬಚ್ಚನ್ ಕಲಾ ಕುಟುಂಬಕ್ಕೆ ಒಟ್ಟು ಒಲಿದ ಪದ್ಮ ಪ್ರಶಸ್ತಿಗಳ ಸಂಖ್ಯೆ ಒಟ್ಟು ಏಳು.

ಬ್ಲಾಗಿನಲ್ಲಿ ಬಚ್ಚನ್ ಬರೆದದ್ದು ಏನು?

ನನ್ನ ಕುಟುಂಬಕ್ಕೆ ಬಂದ ಏಳನೇ ಪ್ರಶಸ್ತಿಯಿದು. ನನ್ನ ತಂದೆ ಹರಿವಂಶ ರೈ ಬಚ್ಚನ್ ಅವರಿಗೆ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಲಭಿಸಿತ್ತು ಎಂದು ಬಚ್ಚನ್ ಬ್ಲಾಗಿನಲ್ಲಿ ಹೇಳಿದ್ದಾರೆ.

ಕುಟುಂಬದ ಇತರರಿಗೆ

ಪತ್ನಿ ಜಯಾ ಬಚ್ಚನ್ ಮತ್ತು ಸೊಸೆ ಐಶ್ವರ್ಯ ರೈ ಬಚ್ಚನ್ ಅವರಿಗೂ ಪದ್ಮಶ್ರೀ ಈ ಹಿಂದೆ ಲಭಿಸಿತ್ತು. ಹೀಗೆ ಒಟ್ಟು ನನ್ನ ಕುಟುಂಬಕ್ಕೆ ಒಟ್ಟು ಏಳು ಪ್ರಶಸ್ತಿ ಬಂತಂತಾಗಿದೆ ಎಂದು ಬಚ್ಚನ್ ಬ್ಲಾಗಿನಲ್ಲಿ ಸಂತೋಷ ವ್ಯಕ್ತ ಪಡಿಸಿದ್ದಾರೆ.

ಶಮಿತಾಬ್ ಬಿಡುಗಡೆಗೆ ಸಿದ್ದ

ಅಮಿತಾಬ್ ಬಚ್ಚನ್ ಮತ್ತು ಧನುಶ್ ಪ್ರಮುಖ ಭೂಮಿಕೆಯಲ್ಲಿರುವ ಶಮಿತಾಬ್ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಈ ನಡುವೆ ಸುದೀಪ್ ಅಭಿನಯದ 'ಹೆಬ್ಬುಲಿ' ಚಿತ್ರದಲ್ಲೂ ಬಚ್ಚನ್ ಅತಿಥಿ ಪಾತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

English summary
Bollywood superstar Amitabh Bachchan has been conferred with India’s second highest civilian award 'Padma Vibhushan'this year.With this, Bachchan and his family now have 7 Padma Awards.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada