»   » ಸ್ಯಾಂಡಲ್ ವುಡ್ ನಲ್ಲಿ ಯಾರಾಗಲಿದ್ದಾರೆ 'ಕ್ವೀನ್?

ಸ್ಯಾಂಡಲ್ ವುಡ್ ನಲ್ಲಿ ಯಾರಾಗಲಿದ್ದಾರೆ 'ಕ್ವೀನ್?

Posted By:
Subscribe to Filmibeat Kannada

ಬಾಲಿವುಡ್ ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ಈ ವರ್ಷದ ಸೂಪರ್ ಹಿಟ್ ಚಿತ್ರ 'ಕ್ವೀನ್' ಕನ್ನಡಕ್ಕೆ ರೀಮೇಕ್ ಆಗುತ್ತಿದೆ. ಹಾಟ್ ಬೆಡಗಿ ಕಂಗನಾ ರನೌತ್ ಮುಖ್ಯಭೂಮಿಕೆಯಲ್ಲಿರುವ ಈ ಕಾಮಿಡಿ ಡ್ರಾಮಾ ಚಿತ್ರದ ರೀಮೇಕ್ ಹಕ್ಕುಗಳನ್ನು ತೆಲುಗು ನಿರ್ಮಾಪಕ ತ್ಯಾಗರಾಜ್ ಎಂಬುವವರು ಪಡೆದಿದ್ದಾರೆ.

ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ 'ಕ್ವೀನ್' ಚಿತ್ರವನ್ನು ರೀಮೇಕ್ ಮಾಡುವುದಾಗಿ ಅವರು ಹೇಳಿದ್ದಾರೆ. ಮಧ್ಯಮ ವರ್ಗದ ಮಡಿವಂತ ಕುಟುಂಬದ ಹುಡುಗಿಯ ಸುತ್ತ ಸುತ್ತುವ ಕಥೆ ಇದಾಗಿದ್ದು ಅದ್ದೂರಿಯಾಗಿ ಚಿತ್ರವನ್ನು ನಿರ್ಮಿಸಿದ್ದಾರೆ. [ಕ್ವೀನ್ ಚಿತ್ರವಿಮರ್ಶೆ]


ವಿಕಾಸ್ ಬಾಹ್ಲ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರವನ್ನು ಸರಿಸುಮಾರು ರು.12.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಬಾಕ್ಸ್ ಆಫೀಸಲ್ಲಿ ರು.97 ಕೋಟಿ ಗಳಿಸುವ ಮೂಲಕ ಸ್ಟಾರ್ ನಟರು ಕಣ್ಣುಕಣ್ಣು ಬಿಡುವಂತೆ ಮಾಡಿದ ಚಿತ್ರ.

ಮದುವೆಗೂ ಎರಡು ದಿನ ಮುನ್ನ ಈ ಮದುವೆ ನನಗಿಷ್ಟವಿಲ್ಲ ಎಂದಿರುತ್ತಾನೆ ಹುಡುಗ. ಆದರೆ ಹುಡುಗಿ ಏಕಾಂಗಿಯಾಗಿ ಪ್ಯಾರಿಸ್ ಹಾಗೂ ಆಮ್ ಸ್ಟರ್ ಡ್ಯಾಮ್ ಗೆ ಮಧುಚಂದ್ರಕ್ಕೆ ಹೋಗುತ್ತಾಳೆ. ಮುಂದೇನು ನಡೆಯುತ್ತದೆ ಎಂಬ ಕುತೂಹಲದಲ್ಲಿ ಕಥೆ ಸಾಗುತ್ತದೆ. ಕಂಗನಾ ರನೌತ್ ಪೋಷಿಸಿರುವ ಪಾತ್ರವನ್ನು ಕನ್ನಡದಲ್ಲಿ ಯಾರು ಮಾಡಲಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕು. (ಏಜೆನ್ಸೀಸ್)

English summary
Bollywood box office hit movie Queen to be remade in Kannada. The original movie directed by Vikas Bahl, the film stars Kangana Ranaut, Lisa Haydon and Rajkummar Rao in lead roles.
Please Wait while comments are loading...