For Quick Alerts
  ALLOW NOTIFICATIONS  
  For Daily Alerts

  ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಬಾಲಿವುಡ್‌ ಮಂದಿ ಪ್ರತಿಕ್ರಿಯೆ ಏನು?

  |

  ದೇಶದಲ್ಲಿ ಏನೇ ನಡೆದರೂ ಬಾಲಿವುಡ್‌ ಮಂದಿ ಸೋಶಿಯಲ್ ಮೀಡಿಯಾಗಳಲ್ಲಿ ಮೊದಲಿ ಪ್ರತಿಕ್ರಿಯೆ ನೀಡುತ್ತಾರೆ. ಇನ್ನು ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿರುವ ಹಿನ್ನೆಲೆಯಲ್ಲಿ ಬಾಲಿವುಡ್‌ ಮಂದಿ ರಿಯಾಕ್ಷನ್ ನೀಡಿದ್ದಾರೆ.

  ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಕುತೂಹಲ ಸೃಷ್ಟಿಸಿದೆ. ಉದ್ಧವ್ ಠಾಕ್ರೆ ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶಿವ ಸೇನೆಯ ಬಂಡಾಯ ಮುಖಂಡ ಏಕ್‌ನಾಥ್ ಶಿಂಧೆ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದ್ದಾರೆ. ಈ ಬೆಳವಣಿಗೆ ಬಗ್ಗೆ ಬಾಲಿವುಡ್ ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.

  ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕಂಗನಾ ಏಕವಚನದ ವಾಗ್ದಾಳಿಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕಂಗನಾ ಏಕವಚನದ ವಾಗ್ದಾಳಿ

  ಸ್ವರಾ ಭಾಸ್ಕರ್ ಟ್ವೀಟ್

  " COVID-19 ಬಿಕ್ಕಟ್ಟಿನ ವೇಳೆ ನಿಮ್ಮ ನಾಯಕತ್ವಕ್ಕೆ ಧನ್ಯವಾದಗಳು. ನೀವು ನಿಷ್ಪಕ್ಷಪಾತ ಮತ್ತು ರಾಜ್ಯದ ಜವಾಬ್ದಾರಿಯುತ ನಾಯಕ, ಪಾರದರ್ಶಕ, ಸಂವಹನ ಮತ್ತು ಭರವಸೆ ನಾಯಕ ಎನಿಸಿದ್ದೀರಿ." ಎಂದು ಬಾಲಿವುಡ್ ನಟಿ ಸ್ವರ ಭಾಸ್ಕರ್ ಟ್ವೀಟ್ ಮಾಡಿದ್ದಾರೆ.

  ಕಂಗನಾ ರನೌತ್ ತಿರುಗೇಟು

  ಕಂಗನಾ ರನೌತ್ ನಿಯಮ ಬಾಹಿರವಾಗಿ ಆಫೀಸ್ ಕಟ್ಟಿದ್ದಾರೆ ಮಹಾರಾಷ್ಟ್ರದ ಬಿಎಂಸಿ, ಅಧಿಕಾರಿಗಳು ಕಚೇರಿ ಒಂದು ಭಾಗವನ್ನು ಕೆಡವಿದ್ದರು. ಅಂದು ಕಂಗನಾ ಉದ್ಧವ್ ಠಾಕ್ರೆ ವಿರುದ್ಧ ಕೆಂಡಾಮಂಡವಾಗಿದ್ದರು. " ಉದ್ಧವ್ ಠಾಕ್ರೆ ನಿಮಗೆ ಏನು ಅನಿಸುತ್ತೆ? ಇಂದು ನನ್ನ ಮನೆಯನ್ನು ಕೆಡವಿದ್ದೀರಿ. ನಾಳೆ ನಿಮ್ಮ ಅಹಂಕಾರವು ಕೆಳಗೆ ಬೀಳುತ್ತೆ." ಎಂದಿದ್ದರು. ಇಂದು ಉದ್ದವ್ ಠಾಕ್ರೆ ರಾಜೀನಾಮೆ ನೀಡುತ್ತಿದ್ದಂತೆ "ಕೆಡುಕು ಹೆಚ್ಚಾದಾಗ, ವಿನಾಶ ಅನಿವಾರ್ಯ. ಅದರ ನಂತರ ಹೊಸ ಸೃಷ್ಟಿಯಾಗುತ್ತೆ." ಎಂದು ಕಂಗನಾ ರನೌತ್ ವಿಡಿಯೋದಲ್ಲಿ ಹೇಳಿದ್ದಾರೆ.

  ರಿತೇಶ್ ದೇಶ್‌ಮುಖ್‌ ಟ್ವೀಟ್

  "ಉದ್ಧವ್ ಠಾಕ್ರೆಯವರೇ ನಿಮಗೆ ಬಿಗ್ ಥಾಂಕ್ಯೂ. ನೀವು ಪ್ರಗತಿಪರ, ಪೂರ್ವಭಾವಿ ಮತ್ತು ಕಾಳಜಿಯುಳ್ಳ ಮಹಾರಾಷ್ಟ್ರ ಮುಖ್ಯಮಂತ್ರಿ ಆಗಿದ್ರಿ. ಇದೂವರೆಗೆ ಎದುರಿಸಿದ ಅತ್ಯಂತ ಕಷ್ಟಕರವಾದ ಮತ್ತು ಕರಾಳವಾಗಿ ಕೊರೊನಾ ಸಮಯದಲ್ಲಿ ನಮಗೆ ಮಾರ್ಗದರ್ಶನ ನೀಡಿದ್ದಕ್ಕಾಗಿ ಧನ್ಯವಾದಗಳು." ಎಂದು ರಿತೇಶ್ ದೇಶ್‌ಮುಖ್‌ ಟ್ವೀಟ್ ಮಾಡಿದ್ದಾರೆ.

  ಪ್ರಕಾಶ್ ರಾಜ್ ಟ್ವೀಟ್

  "ಉದ್ಧವ್ ಠಾಕ್ರೆಯವರೇ ನೀವು ಅದ್ಭುತವಾದ ಕೆಲಸ ಮಾಡಿದ್ದೀರಿ. ನೀವು ರಾಜ್ಯವನ್ನು ನಿಭಾಯಿಸಿದ ರೀತಿಗೆ ಮಹಾರಾಷ್ಟ್ರದ ಜನರು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ ಎಂದು ನನಗೆ ನಂಬಿಕೆಯಿದೆ. ಚಾಣಕ್ಯ ಇಂದು ಲಡ್ಡು ತಿನ್ನುತ್ತಿರಬಹುದು. ಆದರೆ, ನಿಮ್ಮ ಪ್ರಾಮಾಣಿಕತೆ ಹೆಚ್ಚು ದಿನ ಉಳಿಯುತ್ತದೆ. ನಿಮಗೆ ಇನ್ನಷ್ಟು ಶಕ್ತಿ ಸಿಗಲಿ." ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.

  ಕುಬ್ರಾ ಸೇಠ್ ಟ್ವೀಟ್

  " ನಿಮ್ಮ ಸೇವೆಗೆ ಧನ್ಯವಾದಗಳು. ನೀವು ಅತ್ಯುದ್ಭುತ ಆಡಳಿತಗಾರ ಮತ್ತು ಜಂಟಲ್‌ಮ್ಯಾನ್. ಸಾಂಕ್ರಾಮಿಕದಂತಹ ಕಠಿಣ ಕ್ಷಣದಲ್ಲಿ ನೀವು ನಮ್ಮೊಂದಿಗೆ ನೇರವಾಗಿ ಮಾತಾಡಿದ್ದೀರಿ." ಎಂದು ಕುಬ್ರಾ ಸೇಠ್ ಟ್ವೀಟ್ ಮಾಡಿದ್ದಾರೆ.

  English summary
  Bollywood Reaction On New CM Eknath Shinde & Uddhav Thackeray resignation, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X