For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಗಾಯಕಿಗೆ ಕೊರೊನಾ ವೈರಸ್: ಕನಿಕಾ ಉದ್ಧಟತನದಿಂದ ಶುರುವಾಯ್ತು ಆತಂಕ

  |

  ಕೊರೊನಾ ವೈರಸ್‌ ಬಗ್ಗೆ ಎಚ್ಚರ ವಹಿಸುವಂತೆ ಬಾಲಿವುಡ್ ಮಂದಿ ಒಂದೆಡೆ ಸಲಹೆಗಳನ್ನು ನೀಡುತ್ತಿದ್ದಾರೆ, ಇನ್ನೊಂದೆಡೆ ಬಾಲಿವುಡ್‌ನ ಮಂದಿಯೇ ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದು ಬೆಳಕಿಗೆ ಬಂದಿದೆ. 'ಬಾಬಿ ಡಾಲ್', 'ಚಿಟ್ಟಿಯಾನ್ ಕಲೈಯಾನ್' ಹಾಡುಗಳಿಂದ ಜನಪ್ರಿಯರಾಗಿರುವ ಗಾಯಕಿ ಕನಿಕಾ ಕಪೂರ್ ಅವರಲ್ಲಿ ಕೊರೊನಾ ವೈರಸ್ ಇರುವುದು ಶುಕ್ರವಾರ ಪತ್ತೆಯಾಗಿದೆ. ಅವರನ್ನು ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

  ಲಂಡನ್‌ಗೆ ತೆರಳಿದ್ದ 41 ವರ್ಷದ ಕನಿಕಾ ಕಪೂರ್, ಮಾರ್ಚ್ 15ರಂದು ಸ್ವದೇಶಕ್ಕೆ ಮರಳಿದ್ದರು. ತಾವು ಲಂಡನ್‌ಗೆ ಹೋಗಿ ಬಂದಿದ್ದನ್ನು ಅಧಿಕಾರಿಗಳಿಂದ ಮುಚ್ಚಿಟ್ಟಿದ್ದ ಅವರು ಈ ಐದು ದಿನಗಳಲ್ಲಿ ಎಲ್ಲೆಡೆ ಸುತ್ತಾಡಿದ್ದಾರೆ. ಲಕ್ನೋದ ನಿವಾಸಕ್ಕೆ ಮರಳಿದ ನಂತರ ತಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೆ ಪಂಚತಾರಾ ಹೋಟೆಲ್ ಒಂದರಲ್ಲಿ ಭರ್ಜರಿ ಪಾರ್ಟಿ ಕೊಡಿಸಿದ್ದರು ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

  ತಿಳಿದೂ ತಿಳಿದೂ ಮಾಡುತ್ತಿದ್ದಾರೆ

  ತಿಳಿದೂ ತಿಳಿದೂ ಮಾಡುತ್ತಿದ್ದಾರೆ

  ವಿದೇಶಗಳಿಗೆ ಹೋಗಿಬಂದವರಿಂದಲೇ ಭಾರತದಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡುಬಂದಿದ್ದು, ತಮ್ಮ ಪ್ರಯಾಣದ ಮಾಹಿತಿಯನ್ನು ಮುಚ್ಚಿಟ್ಟು ಅವಿವೇಕತನದಿಂದ ವರ್ತಿಸಿರುವ ಕನಿಕಾ ಕಪೂರ್ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗಿವೆ. ಸುಶಿಕ್ಷಿತರ ಉದ್ಧಟತನದಿಂದಲೇ ಕೊರೊನಾ ವೈರಸ್ ಹೆಚ್ಚಾಗಿ ಹರಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

  ಪಾರ್ಟಿಯಲ್ಲಿ ಭಾಗಿ

  ಪಾರ್ಟಿಯಲ್ಲಿ ಭಾಗಿ

  ಲಕ್ನೋದ ಬಹು ದೊಡ್ಡದಾದ ಅಪಾರ್ಟ್‌ಮೆಂಟ್ ಒಂದರಲ್ಲಿ ಕನಿಕಾ ವಾಸಿಸುತ್ತಿದ್ದಾರೆ. ಲಂಡನ್‌ನಿಂದ ಬಂದ ಸಂದರ್ಭದಲ್ಲಿ ಅವರು ಯಾವುದೇ ತಪಾಸಣೆಗೆ ಒಳಗಾಗಿಲ್ಲ. ವಿದೇಶದಿಂದ ಬಂದವರು ಕನಿಷ್ಠ 14 ದಿನ ಎಲ್ಲರಿಂದ ಪ್ರತ್ಯೇಕವಾಗಿ ಇರಬೇಕೆಂಬ ಸಲಹೆಯನ್ನು ನಿರ್ಲಕ್ಷಿಸಿ ಪಾರ್ಟಿಗಳಲ್ಲಿ ಭಾಗವಹಿಸಿದ್ದಾರೆ. ಅನೇಕರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.

  ಅಪಾರ್ಟ್‌ಮೆಂಟ್‌ನಲ್ಲಿ ಆತಂಕ

  ಅಪಾರ್ಟ್‌ಮೆಂಟ್‌ನಲ್ಲಿ ಆತಂಕ

  ಕನಿಕಾ ಆಯೋಜಿಸಿದ್ದ ಪಾರ್ಟಿಯಲ್ಲಿ ಸಿನಿಮಾ ರಂಗದವರು, ಅಧಿಕಾರಿಗಳು ಮತ್ತು ರಾಜಕಾರಣಿಗಳು ಮತ್ತಿತರರು ಕೂಡ ಭಾಗವಹಿಸಿದ್ದರು ಎನ್ನಲಾಗಿದೆ. ಕನಿಕಾ ಅವರು ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ನ ಜನರಲ್ಲಿಯೂ ಆತಂಕ ಹೆಚ್ಚಾಗಿದ್ದು, ಇಡೀ ಕಟ್ಟಡವನ್ನು ಹೇಗೆ ಪ್ರತ್ಯೇಕವಾಗಿ ನಿಗಾದಲ್ಲಿ ಇರಿಸುವುದು ಎಂಬುದು ಅಧಿಕಾರಿಗಳಿಗೂ ಸವಾಲಾಗಿ ಪರಿಣಮಿಸಿದೆ.

  ಪಾರ್ಟಿ ಮಾಡಿಲ್ಲವೆಂದ ಕನಿಕಾ

  ಪಾರ್ಟಿ ಮಾಡಿಲ್ಲವೆಂದ ಕನಿಕಾ

  ಆದರೆ ಮಾಧ್ಯಮದವರ ಜತೆಗೆ ಮಾತನಾಡಿರುವ ಕನಿಕಾ ಕಪೂರ್, ತಾವು ಎಲ್ಲ ರೀತಿಯ ಕ್ರಮಗಳನ್ನು ಅನುಸಿರಿಸಿದ್ದಾಗಿ ಸಮರ್ಥಿಸಿಕೊಂಡಿದ್ದಾರೆ. ಲಂಡನ್‌ನಿಂದ ಬಂದ ಬಳಿಕ ಸ್ಕ್ರೀನಿಂಗ್ ಮಾಡಲಾಗಿತ್ತು. ಅಲ್ಲಿ ಯಾವುದೇ ಸಮಸ್ಯೆ ಕಂಡುಬಂದಿರಲಿಲ್ಲ. 14 ದಿನ ಮನೆಯಲ್ಲಿಯೇ ಇರುವಂತೆ ತಮಗೆ ಯಾರೂ ಸೂಚಿಸಿರಲಿಲ್ಲ. ಹಾಗೂ ಪಾರ್ಟಿಗಳಲ್ಲಿ ಭಾಗವಹಿಸಿಯೇ ಇರಲಿಲ್ಲ ಎಂದು ಅವರು ವಾದಿಸಿದ್ದಾರೆ.

  ಕನಿಕಾ ತಂದೆ ರಾಜೀವ್ ಹೇಳಿದ್ದು...

  ಕನಿಕಾ ಕಪೂರ್ ತಂದೆ ರಾಜೀವ್ ಕಪೂರ್ ನೀಡಿರುವ ಹೇಳಿಕೆ ಪ್ರಕಾರ, ಲಂಡನ್‌ನಿಂದ ಬಂದ ಬಳಿಕ ಕನಿಕಾ, ಲಕ್ನೋದಲ್ಲಿ ಮೂರು ಪಾರ್ಟಿಗಳಲ್ಲಿ ಭಾಗವಹಿಸಿದ್ದಾರೆ. ನಮ್ಮ ಕುಟುಂಬದ ನಾಲ್ಕು ಮಂದಿ ಇಂದು ತಪಾಸಣೆಗೆ ಒಳಗಾಗಲಿದ್ದೇವೆ. ಕನಿಕಾ ಮೂರು ಪಾರ್ಟಿಗಳಲ್ಲಿ ಭಾಗವಹಿಸಿದ್ದಾಳೆ. ಆ ಮೂರು ಪಾರ್ಟಿಗಳಲ್ಲಿ ಆಕೆ ಸುಮಾರು 350-400 ಕುಟುಂಬಗಳೊಂದಿಗೆ ಸಂಪರ್ಕಕ್ಕೆ ಬಂದಿದ್ದಾಳೆ ಎಂದು ತಿಳಿಸಿದ್ದಾರೆ. ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಆಕೆ ಮಾಹಿತಿ ನೀಡಿಲ್ಲ ಎಂಬುದನ್ನು ಅವರು ನಿರಾಕರಿಸಿದ್ದಾರೆ.

  ರಾಧಿಕಾ ಭಾರತ-ಲಂಡನ್ ಓಡಾಟ

  ರಾಧಿಕಾ ಭಾರತ-ಲಂಡನ್ ಓಡಾಟ

  ಇನ್ನೊಂದೆಡೆ ನಟಿ ರಾಧಿಕಾ ಆಪ್ಟೆ, ಕೊರೊನಾ ವೈರಸ್ ಭೀತಿಯ ನಡುವೆಯೂ ಲಂಡನ್‌ನಲ್ಲಿ ಅಡ್ಡಾಡುತ್ತಿದ್ದಾರೆ. ಲಂಡನ್ ಮೂಲದ ಮ್ಯುಸಿಷಿಯನ್ ಬೆನೆಡಿಕ್ಟ್ ಟೇಲರ್ ಅವರನ್ನು ಮದುವೆಯಾಗಿರುವ ರಾಧಿಕಾ ಆಪ್ಟೆ, ಭಾರತಕ್ಕೆ ಇತ್ತೀಚೆಗೆ ಬಂದಿದ್ದರು. ಈಗ ಮತ್ತೆ ಲಂಡನ್‌ಗೆ ತೆರಳಿದ್ದಾರೆ.

  ವಿಮಾನ ಭರ್ತಿಯಾಗಿತ್ತು

  ವಿಮಾನ ಭರ್ತಿಯಾಗಿತ್ತು

  'ನನ್ನ ಸ್ನೇಹಿತರು ಮತ್ತು ಸಹೋದ್ಯೋಗಿಗಳಿಂದ ಅನೇಕ ಕಾಳಜಿಯುಕ್ತ ಮತ್ತು ಕುತೂಹಲಭರಿತ ಸಂದೇಶಗಳು ಬಂದಿದ್ದವು. ನಾನು ಲಂಡನ್‌ಗೆ ಸುರಕ್ಷಿತವಾಗಿ ಮರಳಿದ್ದೇನೆ. ವಲಸೆ ವಿಭಾಗದಲ್ಲಿಯೂ ಯಾವುದೇ ಸಮಸ್ಯೆಯಾಗಲಿಲ್ಲ. ಅಲ್ಲಿ ಖಾಲಿ ಖಾಲಿ ಇತ್ತು. ಅವರೊಂದಿಗೆ ಹರಟಲೂ ಸಾಧ್ಯವಾಯಿತು. ಹೀಥ್ರೂ ಎಕ್ಸ್‌ಪ್ರೆಸ್ ಸಂಪೂರ್ಣ ಖಾಲಿಯಿತ್ತು. ಬ್ರಿಟಿಷ್ ಏರ್‌ವೇಸ್ ವಿಮಾನ ತುಂಬಿಕೊಂಡಿತ್ತು. ಎರಡು ದಿನಗಳ ಹಿಂದೆ ನಾನು ಭಾರತಕ್ಕೆ ಲಂಡನ್‌ನಿಂದ ಹೋದಾಗ ವಿಮಾನ ಖಾಲಿಯಿತ್ತು. ಯುಕೆಯ ಗಡಿಯನ್ನು ಮುಚ್ಚುವುದರ ವಿಚಾರವಾಗಿ ವಲಸೆ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇರಲಿಲ್ಲ' ಎಂದು ರಾಧಿಕಾ ಹೇಳಿದ್ದಾರೆ.

  English summary
  Bollywood singer Kanika Kapoor tested coronavirus positive on Friday. She was back to lucknow from London 5 days ago.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X