For Quick Alerts
  ALLOW NOTIFICATIONS  
  For Daily Alerts

  'ಎಮಿ' ಗೆದ್ದ 'ಡೆಲ್ಲಿ ಕ್ರೈಂ'ಗೆ ಅಭಿನಂದಿಸಿದ ಬಾಲಿವುಡ್ ಸ್ಟಾರ್ ಸೆಲೆಬ್ರಿಟಿಗಳು

  |

  ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ವೆಬ್ ಸರಣಿ 'ಡೆಲ್ಲಿ ಕ್ರೈಂ' ಎಮಿ ಇಂಟರ್ನ್ಯಾಷನಲ್ 2020 ಪ್ರಶಸ್ತಿ ಗೆದ್ದಿದೆ. ಟಿವಿ ಶೋ, ವೆಬ್ ಸರಣಿಗಳ ಆಸ್ಕರ್ ಎಂದೇ ಎಮಿಯನ್ನು ಪರಿಗಣಿಸಲಾಗುತ್ತದೆ.

  ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧಿಸಿದ ಈ ಶೋ ಅದ್ಭುತ ನಿರೂಪಣೆ, ನಟನೆ, ಸಂಭಾಷಣೆಗಳಿಂದ ಗಮನ ಸೆಳೆದಿತ್ತು. ಈ ವೆಬ್ ಸರಣಿಯು ಅತ್ಯುತ್ತಮ 'ಡ್ರಾಮಾ ಸೀರೀಸ್' ಕ್ಯಾಟಗೆರಿಯಲ್ಲಿ ಎಮಿ ಗೆದ್ದುಕೊಂಡಿದೆ.

  'ಡೆಲ್ಲಿ ಕ್ರೈಂ' ಸರಣಿಯು ಎಮಿ ಗೆದ್ದಿದ್ದಕ್ಕೆ ಅತೀವ ಸಂತಸವನ್ನು ವೆಬ್ ಸರಣಿಯ ಪಾತ್ರ, ತಂತ್ರಜ್ಞ ವರ್ಗ ಹಂಚಿಕೊಂಡಿದೆ. ಇದಕ್ಕೆ ಜೊತೆಯಾಗಿ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಡೆಲ್ಲಿ ಕ್ರೈಂ ತಂಡಕ್ಕೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

  'ಡೆಲ್ಲಿ ಕ್ರೈಂ' ನಿರ್ದೇಶಕ ರಿಚ್ಚಿ ಮೆಹ್ತಾಗೆ ಅಭಿನಂದನೆ ಸಲ್ಲಿಸಿರುವ ಹೃತಿಕ ರೋಷನ್, ನಿಮಗೆ ನನ್ನ ನಮನಗಳು ಮತ್ತು ಪ್ರತಿಭಾವಂತ ಡೆಲ್ಲಿ ಕ್ರೈಂ ತಂಡಕ್ಕೂ ಸಹ. ನಿಮಗೆ ಎಮಿ ಪ್ರಶಸ್ತಿ ಪಡೆವ ಅರ್ಹತೆ ಇತ್ತು, ಅಂತೆಯೇ ನೀವು ಪಡೆದುಕೊಂಡಿದ್ದೀರಿ ಎಂದಿದ್ದಾರೆ.

  ಕರಣ್ ಜೋಹರ್ ಸಹ ಸಂತಸವನ್ನು ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದು, 'ಇದು ಅದ್ಭುತ ವಿಷಯ, ಡೆಲ್ಲಿ ಕ್ರೈಂ ತಂಡಕ್ಕೆ ಅಭಿನಂದನೆಗಳು, ರಿಚ್ಚಿ ಮೆಹ್ತಾ ನಿಮಗೆ ಅರ್ಹತೆ ಇತ್ತು, ಅಂತೆಯೇ ಪ್ರಶಸ್ತಿ ಒಲಿದಿದೆ' ಎಂದಿದ್ದಾರೆ.

  ನಟ ವಿಕ್ಕಿ ಕೌಶಲ್, 'ಭಾರತ ತನ್ನ ಮೊದಲ ಎಮಿ ಪ್ರಶಸ್ತಿ ಪಡೆದಿದೆ' ಡೆಲ್ಲಿ ಕ್ರೈಂ ತಂಡಕ್ಕೆ ಅಭಿನಂದನೆಗಳು ಎಂದು ಹೇಳಿದ್ದಾರೆ. ನಿರ್ದೇಶಕಿ ಜೋಹಾ ಅಖ್ತರ್ ಸಹ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ.

  ಯಾಮಿ ಗೌತಮ್ ಸಹ ಸಂತಸ ಹಂಚಿಕೊಂಡಿದ್ದು, 'ಬಹಳ ಹೆಮ್ಮೆ ಮತ್ತು ಸಂತೋಶವಾಗುತ್ತಿದೆ. ಭಾರತ ತನ್ನ ಮೊದಲ ಎಮಿ ಪ್ರಶಸ್ತಿ ಗೆದ್ದುಕೊಂಡಿದೆ. ಡೆಲ್ಲಿ ಕ್ರೈಂ ತಂಡಕ್ಕೆ ಅಭಿನಂದನೆಗಳು' ಎಂದಿದ್ದಾರೆ. ಅದಿತಿ ರಾವ್ ಹೈದಿರಿ ಸೇರಿ ಇನ್ನೂ ಹಲವರು ಡೆಲ್ಲಿ ಕ್ರೈಂ ತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ.

  English summary
  Bollywood star celebrities like Karan Johar, Hritik Roshan, Joya Akhtar and many others wished Delhi Crime web series team for winning Emmy award 2020.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X