For Quick Alerts
  ALLOW NOTIFICATIONS  
  For Daily Alerts

  ಅಂದು ವೇಶ್ಯೆ ಆಗಿದ್ದಾಕೆ ಇಂದು ಬಾಲಿವುಡ್ ಸ್ಟಾರ್

  |

  ಈ ನಿಜ ಕತೆ ಯಾವ ಸಿನಿಮಾ ಕತೆಗಳಿಗಿಂತಲೂ ಕಡಿಮೆಯಿಲ್ಲ. ವರ್ಷಗಳ ಹಿಂದೆ ಮುಂಬೈನಲ್ಲಿ ವೇಶ್ಯೆಯಾಗಿದ್ದ ಮಹಿಳೆ ಒಬ್ಬರು ಇಂದು ಬಾಲಿವುಡ್‌ನಲ್ಲಿ ಮಿರಿ-ಮಿರಿ ಮಿಂಚುತಿದ್ದಾರೆ.

  ಬಿಗ್ ಬಾಸ್ ದಿವಾಕರ್ ವಿರುದ್ಧ ದೂರು ಕೊಡಲು ಮುಂದಾದ ಅಹೋರಾತ್ರ..?

  ಹೌದು, ಆಕೆಯ ಹೆಸರು ಶಗುಫ್ತಾ ರಫಿಕಿ. ಕುಟುಂಬಕ್ಕೆ ಊಟ ಹೊಂದಿಸಲು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾಕೆ ಇಂದು ಬಾಲಿವುಡ್‌ನ ಸ್ಟಾರ್ ಬರಹಗಾರ್ತಿ. ಈಕೆ ಬರೆದ ಕತೆಗಳು ಸಿನಿಮಾ ಆಗಿ ಕೋಟಿ-ಕೋಟಿ ಬಾಚಿವೆ.

  '16ನೇ ವಯಸ್ಸಿನಲ್ಲೇ ನನ್ನ ಮೇಲೆ ಅತ್ಯಾಚಾರ ನಡೆದಿತ್ತು' ಎಂದ ಟಿವಿ ನಿರೂಪಕಿ'16ನೇ ವಯಸ್ಸಿನಲ್ಲೇ ನನ್ನ ಮೇಲೆ ಅತ್ಯಾಚಾರ ನಡೆದಿತ್ತು' ಎಂದ ಟಿವಿ ನಿರೂಪಕಿ

  ಬಾಲಿವುಡ್‌ನ ಖ್ಯಾತ ನಿರ್ದೇಶಕ, ನಿರ್ಮಾಪಕ ಮಹೇಶ್ ಭಟ್ ಅವರು ನಿರ್ಮಿಸಿರುವ ಬಹುತೇಕ ಸಿನಿಮಾಗಳಿಗೆ ಇವರೇ ಮುಖ್ಯ ಬರಹಗಾರ್ತಿ. 'ವೋಹ್ ಲಮ್ಹೆ', 'ರಾಜ್2-3', ಸೂಪರ್ ಹಿಟ್ ಚಿತ್ರ ಆಶಿಕಿ 2, ಮರ್ಡರ್ 2, ಅಂಕುರ್ ಅರೋರಾ ಮರ್ಡರ್ ಕೇಸ್, ಹೀಗೆ ಪಟ್ಟಿ ಸಾಗುತ್ತಲೇ ಇರುತ್ತದೆ.

  ತಂದೆ-ತಾಯಿ ಯಾರೆಂದು ಗೊತ್ತಿಲ್ಲ

  ತಂದೆ-ತಾಯಿ ಯಾರೆಂದು ಗೊತ್ತಿಲ್ಲ

  ತನ್ನ ತಂದೆ-ತಾಯಿ ಯಾರು ಎಂದೂ ಸಹ ಗೊತ್ತಿರದ ಶಗುಫ್ತಾ ರಫಿಕಿಯನ್ನು ಯಾರೋ ಹೆಣ್ಣು ಮಗಳೊಬ್ಬಳು ಸಾಕಿದರು. ಆಕೆಗೆ ಕೊಲ್ಕತ್ತದ ವ್ಯಕ್ತಿಯೊಬ್ಬನೊಂದಿಗೆ ಅಕ್ರಮ ಸಂಬಂಧವಿತ್ತು. ಆದರೆ ಆತ ಅಕಾಲಿಕ ಮರಣಕ್ಕೆ ಈಡಾದ ಕಾರಣ, ಶಗುಫ್ತಾ ಮತ್ತು ಆಕೆಯ ಸಾಕು ತಾಯಿ ಸಂಕಷ್ಟಕ್ಕೆ ಸಿಲುಕಿದರು.

  11 ನೇ ವಯಸ್ಸಿನಲ್ಲಿ ಡಾನ್ಸ್‌ ಬಾರ್‌ನಲ್ಲಿ ನೃತ್ಯ

  11 ನೇ ವಯಸ್ಸಿನಲ್ಲಿ ಡಾನ್ಸ್‌ ಬಾರ್‌ನಲ್ಲಿ ನೃತ್ಯ

  ಹಾಗಾಗಿ ಕೇವಲ 11 ನೇ ವಯಸ್ಸಿನಲ್ಲಿಯೇ ಹಣಕ್ಕಾಗಿ ಡಾನ್ಸ್‌ ಬಾರ್‌ನಲ್ಲಿ ಕುಣಿಯಲು ಪ್ರಾರಂಭಿಸಿದರು ಶಗುಫ್ತಾ. 17 ನೇ ವಯಸ್ಸಿಗೆ ಒಬ್ಬ ಸಾಧಾರಣ ಶ್ರೀಮಂತ ವ್ಯಕ್ತಿ ಶಗುಫ್ತಾಳನ್ನು ಮದುವೆಯಾದ, ಆದರೆ ಆತ ಕೊಟ್ಟ ಹಿಂಸೆ ತಡೆಯಲಾರದೆ ಆತನನ್ನು ತೊರೆದರು ಶಗುಫ್ತಾ.

  ಅವಕಾಶ ಕೊಡಿಸುತ್ತೇನೆಂದು ರೇಪ್ ಮಾಡಲು ಯತ್ನಿಸಿದ್ದ: ಖ್ಯಾತ ನಟಿಯ ಶಾಕಿಂಗ್ ಹೇಳಿಕೆಅವಕಾಶ ಕೊಡಿಸುತ್ತೇನೆಂದು ರೇಪ್ ಮಾಡಲು ಯತ್ನಿಸಿದ್ದ: ಖ್ಯಾತ ನಟಿಯ ಶಾಕಿಂಗ್ ಹೇಳಿಕೆ

  ವೇಶ್ಯಾವಾಟಿಕೆಗಿಳಿದ ಶಗುಫ್ತಾ

  ವೇಶ್ಯಾವಾಟಿಕೆಗಿಳಿದ ಶಗುಫ್ತಾ

  ಮುಂಬೈನಲ್ಲಿ ವೇಶ್ಯಾವಾಟಿಕೆ ವೃತ್ತಿಯಲ್ಲಿ ತೊಡಗಿದ ಶಗುಫ್ತಾ ಸ್ವಲ್ಪ ಹಣವನ್ನೂ ಮಾಡಿದರು. ನಂತರ ಮುಂಬೈನಲ್ಲಿಯೇ ಕೆಲ ದಿನ ಡಾನ್ಸ್‌ ಬಾರ್‌ನಲ್ಲಿ ದುಡಿದ ಶಗುಫ್ತಾ, ತನ್ನ 25ನೇ ವಯಸ್ಸಿಗೆ ಕೆಲವರ ಒತ್ತಾಯದ ಮೇರೆಗೆ ದುಬೈಗೆ ತೆರಳಿದರು. ಅಲ್ಲಿಗೂ ಅವರು ವೇಶ್ಯಾವಾಟಿಕೆಗೆಂದೇ ಹೋಗಿದ್ದರು.

  ಮದುವೆಯಾಗುತ್ತೇನೆ ಎಂದ ಪಾಕಿಸ್ತಾನಿ ವ್ಯಕ್ತಿ

  ಮದುವೆಯಾಗುತ್ತೇನೆ ಎಂದ ಪಾಕಿಸ್ತಾನಿ ವ್ಯಕ್ತಿ

  ದುಬೈನಲ್ಲಿ ಅವರಿಗಿಂತ ಇಪ್ಪತ್ತು ವರ್ಷ ದೊಡ್ಡವನಾದ ಪಾಕಿಸ್ತಾನಿ ಬ್ಯುಸಿನೆಸ್‌ಮ್ಯಾನ್ ಒಬ್ಬ ಶಗುಫ್ತಾ ಅವರನ್ನನು ಮದುವೆಯಾಗುವುದಾಗಿ ಹೇಳಿದ. ಹಾಗೂ-ಹೀಗೂ ಒಂದು ನೆಲೆಯಾದರೂ ಸಿಗುತ್ತದೆಂದು ಹೂಂ ಎಂದರು ಶಗುಫ್ತಾ. ಆದರೆ ಅವರ ದುರಾದೃಷ್ಟಕ್ಕೆ ಆತ ಅಚಾನಕ್ಕಾಗಿ ಮರಣಕ್ಕೀಡಾದ.

  ಹೆಣ್ಣಾಗಿ ಹುಟ್ಟಿದ್ದು ತಪ್ಪೇ?: ಕಣ್ಣೀರು ಹಾಕಿದ ನಟಿ ಅದಿತಿಹೆಣ್ಣಾಗಿ ಹುಟ್ಟಿದ್ದು ತಪ್ಪೇ?: ಕಣ್ಣೀರು ಹಾಕಿದ ನಟಿ ಅದಿತಿ

  ಡಾನ್ಸ್‌ ಬಾರ್‌ನಲ್ಲಿ ಕುಣಿಯುವುದು ಮುಂದುವರೆಸಿದರು

  ಡಾನ್ಸ್‌ ಬಾರ್‌ನಲ್ಲಿ ಕುಣಿಯುವುದು ಮುಂದುವರೆಸಿದರು

  ನಂತರ ಅವರು ಮುಂಬೈಗೆ ಬಂದು ಡಾನ್ಸ್‌ ಬಾರ್‌ಗಳಲ್ಲಿ ಕುಣಿಯುವ ಕೆಲಸ ಮುಂದುವರೆಸಿದರು. ಅದರ ನಡುವೆಯೇ ಕತೆಗಳನ್ನು ಬರೆಯಲು ಪ್ರಾರಂಭಿಸಿದರು. ತಾವು ಅನುಭವಿಸಿದ, ತಾವು ಕಂಡ, ಕೇಳಿದ ಕತ್ತಲ ಸಾಮ್ರಾಜ್ಯದ ಕತೆಗಳನ್ನು ಬರೆದರು.

   19 ಬಾಲಿವುಡ್‌ ಸಿನಿಮಾಗಳಿಗೆ ಕತೆ

  19 ಬಾಲಿವುಡ್‌ ಸಿನಿಮಾಗಳಿಗೆ ಕತೆ

  ಸಿನಿಮಾಗಳಲ್ಲಿ ಪ್ರಯತ್ನಿಸುವಾಗ ವಿನೇಶ್ ಸ್ಟುಡಿಯೋಸ್‌ನ ಮಹೇಶ್ ಭಟ್, ಶಗುಫ್ತಾ ಅವರ ಪ್ರತಿಭೆ ಗುರುತಿಸಿ ತಮ್ಮ ಸ್ಟುಡಿಯೋಕ್ಕೆ ಸೇರಿಸಿಕೊಂಡರು. ಈ ವರೆಗೆ 19 ಸಿನಿಮಾಗಳಿಗೆ ಕತೆ, ಚಿತ್ರಕತೆ ಬರೆದಿದ್ದಾರೆ ಶಗುಫ್ತಾ. ಒಂದು ತೆಲುಗು ಸಿನಿಮಾಕ್ಕೂ ಕತೆ ಬರೆದಿದ್ದಾರೆ.

  ಮೂರು ಸಿನಿಮಾ ನಿರ್ದೇಶನ ಸಹ ಮಾಡಿದ್ದಾರೆ

  ಮೂರು ಸಿನಿಮಾ ನಿರ್ದೇಶನ ಸಹ ಮಾಡಿದ್ದಾರೆ

  ಶಗುಫ್ತಾ ಸ್ವತಃ ನಿರ್ದೇಶನಕ್ಕೂ ಇಳಿದಿದ್ದು, ಪಂಜಾಬಿಯಲ್ಲಿ ದುಶ್ಮನ್, ಬಂಗಾಳಿಯಲ್ಲಿ ಮೋನ್ ಜಾನೆ ನಾ ಸಿನಿಮಾ ನಿರ್ದೇಶಿಸಿದ್ದಾರೆ. ಅವರ ಮತ್ತೊಂದು ನಿರ್ದೇಶನದ ಸಿನಿಮಾ 'ಸೆವೆನ್' ಬಿಡುಗಡೆ ಆಗಬೇಕಿದೆ.

  English summary
  Shagufta Rafique who is once a bar dancer now Bollywood prominent script and story writer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X