»   » ಶಾರೂಖ್ ಖಾನ್, ಗೌರಿ ದಂಪತಿಗಳಿಗೆ ಗಂಡು ಮಗು

ಶಾರೂಖ್ ಖಾನ್, ಗೌರಿ ದಂಪತಿಗಳಿಗೆ ಗಂಡು ಮಗು

Posted By:
Subscribe to Filmibeat Kannada

ಬಾಲಿವುಡ್ ಬಾದಶಾ ಶಾರೂಖ್ ಖಾನ್ ಗಂಡು ಮಗುವಿನ ತಂದೆಯಾಗಿದ್ದಾರೆ. ತನ್ನ ಮಡದಿ ಗೌರಿ ಖಾನ್ ಅವರ ಅತ್ತಿಗೆ ನಮಿತಾ ಚಿಬ್ಬರ್ ಹೆತ್ತು ಕೊಟ್ಟ ಮಗುವಿಗೆ ಶಾರೂಖ್ ಖಾನ್ ಅಪ್ಪ ಆಗಿದ್ದಾರೆ.

ಶಾರೂಖ್ ಮತ್ತು ಗೌರಿ ಬಾಡಿಗೆ ತಾಯಿ ಮೂಲಕ ಗಂಡು ಮಗುವನ್ನು ಪಡೆಯಲಿದ್ದಾರೆ ಎನ್ನುವ ಸುದ್ದಿಯಾಗಿತ್ತು. ಅದು ಈಗ ನಿಜವಾಗಿದೆ. ಗೌರಿ ಅತ್ತಿಗೆ ನಮಿತಾ ಕಳೆದ ಜೂನ್ ನಾಲ್ಕರಂದೇ ಮಗುವಿಗೆ ಜನ್ಮ ನೀಡಿದ್ದರು. ಆದರೆ ಪ್ರಿಮೆಚ್ಯೂರ್ಡ್ ಮಗುವಾಗಿರುವುದರಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಇಡಲಾಗಿದೆ.

ಮಗು ಬೇಕಾದಷ್ಟು ತೂಕ ಬರುವವರೆಗೆ ಆಸ್ಪತ್ರೆಯಲ್ಲೇ ಉಳಿಯಲಿದೆ ಎನ್ನಲಾಗುತ್ತಿದೆ. ನಮಿತಾ ಚೆಬ್ಬರ್ ಆಸ್ಪತ್ರೆಯಿಂದ ಬಿಡುಗಡೆಯಾದಾಗ ಡಿಸ್ಚಾರ್ಜ್ ಫಾರಂನಲ್ಲಿ ಶಾರೂಖ್ ಖಾನ್ ಅವರ ಖಾಸಾಗಿ ಮೊಬೈಲ್ ಸಂಖ್ಯೆಯನ್ನು ನಮೂದಿಸಿದ್ದಾರೆ, ಅಲ್ಲದೇ ಮಗುವಿನ ಹೆಸರನ್ನು 'ಅಬ್ರಾಂ' ಎಂದು ಬರೆದಿದ್ದಾರೆ.

ಶಾರೂಖ್ ಮತ್ತು ಗೌರಿ ದಂಪತಿಗಳಿಗೆ ಆರ್ಯನ್ ಮತ್ತು ಸುಹಾನ ಎಂಬ ಇಬ್ಬರು ಮಕ್ಕಳಿದ್ದಾರೆ. ಬಾಲಿವುಡ್ ತಾರೆಗಳು ದತ್ತು ಪಡೆಯುವುದು ಹೊಸದೇನಲ್ಲ. ಕೆಲವೊಂದು ಸ್ಲೈಡಿನಲ್ಲಿದೆ ನೋಡಿ..

ಶಾರೂಖ್ - ಗೌರಿ

ಶಾರುಖ್ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ತಾರಾಗಣದಲ್ಲಿರುವ ಚೆನ್ನೈ ಎಕ್ಸ್ ಪ್ರೆಸ್ ಚಿತ್ರದ ಚಿತ್ರೀಕರಣದ ವೇಳೆ ಶಾರೂಖ್ ದಂಪತಿಗಳಿಗೆ ಇನ್ನೊಂದು ಮಗು ಪಡೆಯುವ ಆಸೆಯಾಗಿತ್ತು. ಆದರೆ ಗೌರಿಗೆ ನಲವತ್ತು ವರ್ಷ ದಾಟಿದ್ದರಿಂದ ಅಪಾಯ ತಂದುಕೊಳ್ಳಲು ಇಷ್ಟಪಡದೇ ದತ್ತು ಪಡೆಯಲು ನಿರ್ಧರಿಸಿದ್ದರು.

ಅಮೀರ್ ಖಾನ್ - ಕಿರಣ್ ರಾವ್

ಬಾಲಿವುಡ್ ಜಗತ್ತಿನ Mr. Perfectionist ಎಂದೇ ಹೆಸರಾಗಿರುವ ಅಮೀರ್ ಖಾನ್ ಮತ್ತು ಕಿರಣ್ ರಾವ್ ದಂಪತಿಗಳೂ ಬಾಡಿಗೆ ತಾಯಿ ಮೂಲಕ ಗಂಡು ಮಗುವನ್ನು ಪಡೆದಿದ್ದರು. ಮಗುವಿಗೆ ಆಜಾದ್ ರಾವ್ ಎಂದು ಹೆಸರಿಡಲಾಗಿದೆ.

ಸುಭಾಷ್ ಘಾಯ್

ಹೆಸರಾಂತ ಹಿಂದಿ ಚಿತ್ರ ನಿರ್ಮಾಪಕ ಸುಭಾಷ್ ಘಾಯ್ ಹೆಣ್ಣು ಮಗುವನ್ನು ದತ್ತು ಪಡೆದಿದ್ದರು. ಇವಳಿಗೆ ಸಂಪೂರ್ಣವಾಗಿ ಲಂಡನ್ ನಲ್ಲಿ ವಿದ್ಯಾಭ್ಯಾಸ ನೀಡಿದ ಸುಭಾಷ್ ಘಾಯ್ , ನಟನೆಯ ಜವಾಬ್ದಾರಿಯನ್ನು ವಿಜಲಿಂಗ್ ವುಡ್ಸ್ ಎನ್ನುವ ಸಂಸ್ಥೆಗೆ ನೀಡಿದ್ದರು. ಈಕೆಯ ಹೆಸರು ಮೇಘನಾ.

ರವೀನಾ ಟಂಡನ್

ಇಬ್ಬರು ಹೆಣ್ಣು ಮಕ್ಕಳನ್ನು ರವೀನಾ ದತ್ತು ಪಡೆದಿದ್ದರು. ರವೀನಾ, ಅನಿಲ್ ತಡಾನಿ ಅವರನ್ನು ವರಿಸುವ ಮುನ್ನವೇ ದತ್ತು ಪಡೆದಿದ್ದರು. ಇವರ ಹೆಸರು ಛಾಯಾ ಮತ್ತು ಪೂಜಾ.

ಸುಷ್ಮಿತಾ ಸೇನ್

ಎರಡು ಹೆಣ್ಣು ಮಗುವನ್ನು ದತ್ತು ಪಡೆದ ಬಾಲಿವುಡ್ಡಿನ ಮತ್ತೊಬ್ಬ ನಟಿ. ಮಕ್ಕಳನ್ನು ತನ್ನ ಜೊತೆಯೇ ಸಾಕುತ್ತಿರುವ ಸುಷ್ಮಿತಾ, ಮಕ್ಕಳಿಗೆ ರೀನೆ ಮತ್ತು ಆಲಿಶ್ ಎಂದು ಹೆಸರಿಟ್ಟಿದ್ದಾರೆ.

English summary
Bollywood stars who have adopted kids. The list of five celebrities Sharukh Khan, Aamir Khan, Shubhash Ghai, Raveena Tandon and Sushmita Sen.
Please Wait while comments are loading...