For Quick Alerts
  ALLOW NOTIFICATIONS  
  For Daily Alerts

  ಪ್ರಾಣಾಪಾಯದಿಂದ ಬೋನಿ ಕಪೂರ್ ಪಾರು

  By Rajendra
  |

  ಬಾಲಿವುಡ್ ನಿರ್ಮಾಪಕ, ಶ್ರೀದೇವಿ ಪತಿ ಬೋನಿ ಕಪೂರ್ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಗುರಿಯಾಗಿದ್ದು ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬುಧವಾರ (ಮೇ 14) ರಾತ್ರಿ ಮುಂಬೈನಲ್ಲಿ ಈ ಅಪಘಾತ ಸಂಭವಿಸಿದೆ.

  ಮುಂಬೈನ ಸತಾರಾ ಪ್ರದೇಶದಲ್ಲಿ ಬೋನಿ ಕಪೂರ್ ಪ್ರಯಾಣಿಸುತ್ತಿದ್ದ ಕಾರು ಟ್ರಾಕ್ಟರ್ ಒಂದಕ್ಕೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಬೋನಿ ಕಪೂರ್ ಸೇರಿದಂತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

  "ಬೋನಿ ಕಪೂರ್ ಅವರ ಪ್ರಾಣಾಪಾಯದಿಂದ ಪಾರಾಗಿದ್ದು ಈಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ" ಎಂದು ಈ ಬಗ್ಗೆ ಬೋನಿ ಕಪೂರ್ ಅವರ ಮ್ಯಾನೇಜರ್ ಅಪಘಾತದ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಕಾರಿನ ಚಾಲಕನ ಪಕ್ಕದ ಸೀಟಿನಲ್ಲೇ ಬೋನಿ ಕಪೂರ್ ಹಾಗೂ ಹಿಂಬದಿ ಸೀಟಿನಲ್ಲಿ ಅವರ ಕಡೆಯ ಹುಡುಗ ಕುಳಿತಿದ್ದ.

  ಅಪಘಾತವಾದ ಕೂಡಲೆ ಕಾರಿನ ಏರ್ ಬ್ಯಾಗ್ಸ್ ತೆರೆದುಕೊಂಡು ಅವರನ್ನು ದುರಂತದಿಂದ ಪಾರು ಮಾಡಿವೆ. ಏರ್ ಬ್ಯಾಗ್ಸ್ ಓಪನ್ ಆದ ಕಾರಣ ನಮಗೇನು ಗಂಭೀರವಾಗಿ ಗಾಯಗಳಾಗಲಿಲ್ಲ. ನಾವೆಲ್ಲಾ ಪ್ರಾಣಾಪಾಯದಿಂದ ಪಾರಾದೆವು ಎಂದಿದ್ದಾರೆ ಬೋನಿ ಕಪೂರ್. ತಮ್ಮ ನಿರ್ಮಾಣದ 'ತೇವರ್' ಚಿತ್ರದ ಶೂಟಿಂಗ್ ಸ್ಪಾಟ್ ನಿಂದ ಬೋನಿ ಕಪೂರ್ ಮನೆಗೆ ಹಿಂತಿರುಗುತ್ತಿದ್ದರು.

  English summary
  Bollywood films producer Boney Kapoor suffered a major car accident on Wednesday night. Boney was returning back from Satara to Mumbai when his car collided with a tractor. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X