»   » ಶ್ರೀದೇವಿ ಬರ್ತಡೇಗೆ ಕಾದಿತ್ತು ಬಹುದೊಡ್ಡ ಸರ್ಪ್ರೈಸ್: ನೋಡಲು ಆಕೆಯೇ ಇಲ್ಲ.!

ಶ್ರೀದೇವಿ ಬರ್ತಡೇಗೆ ಕಾದಿತ್ತು ಬಹುದೊಡ್ಡ ಸರ್ಪ್ರೈಸ್: ನೋಡಲು ಆಕೆಯೇ ಇಲ್ಲ.!

Posted By:
Subscribe to Filmibeat Kannada
ಶ್ರೀದೇವಿ ಬರ್ತಡೇಗೆ ಕಾದಿತ್ತು ಬಹುದೊಡ್ಡ ಸರ್ಪ್ರೈಸ್: ನೋಡಲು ಆಕೆಯೇ ಇಲ್ಲ.!

ಆಗಸ್ಟ್ 13 ರಂದು ಶ್ರೀದೇವಿಯ 55ನೇ ಹುಟ್ಟುಹಬ್ಬ. ಈ ಹುಟ್ಟುಹಬ್ಬವನ್ನ ಆಚರಿಸಿಲು ಸ್ವತಃ ಶ್ರೀದೇವಿಯೇ ಇಲ್ಲದಂತಾಗಿದೆ. ಶ್ರೀದೇವಿಯ ಸಾವು ಕಪೂರ್ ಕುಟುಂಬಕ್ಕೆ ದೊಡ್ಡ ಆಘಾತವಾಗಿದೆ. ಅದರಲ್ಲೂ ಪತಿ ಬೋನಿ ಕಪೂರ್ ಗಂತೂ ಮರೆಯಲಾಗದ ಘಟನೆಯಾಗಿದೆ.

ಪತ್ನಿಯನ್ನ ತುಂಬ ಪ್ರೀತಿಸುತ್ತಿದ್ದ ಬೋನಿ ಕಪೂರ್ ಶ್ರೀದೇವಿ ಹುಟ್ಟುಹಬ್ಬಕ್ಕೆ ಬಹುದೊಡ್ಡ ಸರ್ಪ್ರೈಸ್ ನೀಡಲು ತಯಾರಿ ನಡೆಸಿದ್ದರು. ಯಾರಿಗೂ ಗೊತ್ತಿಲ್ಲದೇ ಹಾಗೆ ಪತ್ನಿಯ ಬರ್ತಡೇಯನ್ನ ಅದ್ಧೂರಿಯಾಗಿ ಆಚರಿಸಲು ಈಗಿನಿಂದಲೇ ಸಿದ್ದತೆ ಮಾಡಿಕೊಂಡಿದ್ದರು. ದುರಾದೃಷ್ಟವಶಾತ್ ಶ್ರೀದೇವಿ ಸಾವನ್ನಪ್ಪಿದರು.

ಶ್ರೀದೇವಿಯ ಅಂತಿಮ ದರ್ಶನದ ವೇಳೆ ಟೀಕೆಗೆ ಗುರಿಯಾದ ನಟಿ ಜಾಕ್ವೆಲಿನ್

ಈಗ ಬೋನಿ ಕಪೂರ್ ಕಂಡಂತ ಕನಸು ಛಿದ್ರವಾಗಿದೆ. ಪತ್ನಿಗಾಗಿ ಸರ್ಪ್ರೈಸ್ ನೀಡಬೇಕೆಂದುಕೊಂಡಿದ್ದ ಬೋನಿಗೆ ಸ್ವತಃ ಪತ್ನಿಯೇ ಇಷ್ಟು ದೊಡ್ಡ ಸರ್ಪ್ರೈಸ್ ಕೊಡ್ತಾರೆ ಎಂಬುದನ್ನ ಕಲ್ಪನೆ ಕೂಡ ಮಾಡಿರಲ್ಲ. ಅಷ್ಟಕ್ಕೂ, ಶ್ರೀದೇವಿ ಹುಟ್ಟುಹಬ್ಬಕ್ಕೆ ಬೋನಿ ಕಪೂರ್ ಪ್ಲಾನ್ ಏನಿತ್ತು.? ಮುಂದೆ ಓದಿ....

ಹಳೆ ಮನೆಯಲ್ಲಿ ಸೆಲೆಬ್ರೆಷನ್ ಗೆ ತಯಾರಿ

ಮುಬೈನ ಅಂಧೇರಿಯಲ್ಲಿದ್ದ ಹಳೆ ಮನೆಯನ್ನ ಸಿದ್ದ ಮಾಡಿಸಿ ಶ್ರೀದೇವಿಗೆ ಸರ್ಪ್ರೈಸ್ ನೀಡಬೇಕು ಎಂದುಕೊಂಡಿದ್ದರು ಪತಿ ಬೋನಿ ಕಪೂರ್. ಶ್ರೀದೇವಿಗೂ ಇದೇ ಆಸೆ ಇತ್ತು. ಮತ್ತೆ ಅದೇ ಮನೆಯಲ್ಲಿ ಎಲ್ಲರೂ ವಾಸ ಮಾಡಬೇಕು ಎಂದುಕೊಂಡಿದ್ದರು. ಈ ಸಲದ ಹುಟ್ಟುಹಬ್ಬವನ್ನ ಕೂಡ ಅಲ್ಲೇ ಮಾಡುವುದಕ್ಕು ತಯಾರಿ ನಡೆದಿತ್ತು.

ಶ್ರೀದೇವಿಯ ಆಸೆ ನೆರವೇರಲಿಲ್ಲ

ಶ್ರೀದೇವಿಯ ಆಸೆ ಕೊನೆಗೂ ನೆರವೇರಲಿಲ್ಲ. ಹಾಗೆ, ಪತಿ ಬೋನಿ ಕಪೂರ್ ಅವರ ಸರ್ಪ್ರೈಸ್ ಕೂಡ ಹಾಗೆಯೇ ಉಳಿದುಕೊಂಡಿದೆ. ಈಗೇನಿದ್ರು ಮಕ್ಕಳ ಭವಿಷ್ಯದ ಬಗ್ಗೆ ಮಾತ್ರ ಚಿಂತಿಸಬೇಕಿದೆ.

ಪತ್ನಿಯನ್ನ ಕಳೆದುಕೊಂಡ ದುಃಖ ಪತ್ರ ಮುಖೇನ ಹೊರಹಾಕಿದ ಬೋನಿ ಕಪೂರ್

ಮನೆಗೆ ಬೆಂಕಿ ಬಿದ್ದಿತ್ತು

2013 ರಲ್ಲಿ ಶ್ರೀದೇವಿ ಮತ್ತು ಬೋನಿ ಕಪೂರ್ ಕುಟುಂಬ ವಾಸವಿದ್ದ ಮನೆಯಲ್ಲಿ ಬೆಂಕಿ ಅಪಘಾತ ಸಂಭವಿಸಿತ್ತು. ಅದೃಷ್ಟವಶಾತ್ ಶ್ರೀದೇವಿ ಮತ್ತು ಪತಿ, ಮಕ್ಕಳು ಪಾರಾಗಿದ್ದರು. ನಂತರ ಅಲ್ಲಿಂದ ಶ್ರೀದೇವಿ ಕುಟುಂಬ ಗ್ರೀನ್ ಎಕರ್ಸ್ ಮನೆಗೆ ಶಿಫ್ಟ್ ಆಗಿದ್ದರು.

ಬೋನಿ ಹೃದಯದ ಮಾತು

''ಓರ್ವ ಸ್ನೇಹಿತೆ, ಪತ್ನಿ ಹಾಗೂ ಇಬ್ಬರು ಹೆಣ್ಮಕ್ಕಳ ತಾಯಿಯನ್ನು ಕಳೆದುಕೊಂಡ ದುಃಖ ಅಕ್ಷರಗಳಲ್ಲಿ ವ್ಯಕ್ತಪಡಿಸಲು ಅಸಾಧ್ಯ. ನನ್ನ ಕುಟುಂಬಸ್ಥರು, ಸ್ನೇಹಿತರು, ಹಿತೈಷಿಗಳು ಹಾಗೂ ಶ್ರೀದೇವಿಯ ಅಸಂಖ್ಯಾತ ಅಭಿಮಾನಿಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಜಾಹ್ನವಿ, ಖುಷಿ ಹಾಗೂ ನನಗೆ ಮಾನಸಿಕ ಸ್ಥೈರ್ಯ ತುಂಬಿದ ಅರ್ಜುನ್ ಹಾಗೂ ಅನ್ಷುಲಾ ರನ್ನ ಪಡೆದ ನಾನೇ ಧನ್ಯ. ನಮ್ಮ ಇಡೀ ಕುಟುಂಬಕ್ಕೆ ಶ್ರೀದೇವಿ ನಿಧನ ತುಂಬಲಾರದ ನಷ್ಟ. ಇಡೀ ಜಗತ್ತಿಗೆ ಶ್ರೀದೇವಿ ಜಾಂದಿನಿ. ಆದ್ರೆ, ಆಕೆ ನನ್ನ ಪ್ರೀತಿ, ನನ್ನ ಸ್ನೇಹಿತೆ, ನನ್ನ ಮಕ್ಕಳಿಗೆ ತಾಯಿ ಹಾಗೂ ನನ್ನ ಜೊತೆಗಾತಿ. ನನ್ನ ಮಕ್ಕಳಿಗೆ ಆಕೆಯೇ ಎಲ್ಲ.

ನನ್ನದೊಂದು ಮನವಿ

ಅಭಿಮಾನಿಗಳ ಬಳಿ ನನ್ನದೊಂದು ಮನವಿ. ನಮ್ಮ ನೋವನ್ನು ಖಾಸಗಿಯಾಗಿ ಇರಲು ಬಿಡಿ. ನೀವು ಶ್ರೀದೇವಿ ಬಗ್ಗೆ ಮಾತನಾಡಬೇಕು ಅಂದ್ರೆ, ಒಳ್ಳೆ ವಿಷಯ ಮಾತನಾಡಿ. ಶ್ರೀದೇವಿ ಇಲ್ಲದ ನನ್ನ ಮಕ್ಕಳಿಗೆ ಒಂದು ದಾರಿ ಮಾಡುವುದೇ ನನ್ನ ಸದ್ಯದ ಕಾಳಜಿ. ಶ್ರೀದೇವಿ ನಮಗೆ ಜೀವ ಹಾಗೂ ಶಕ್ತಿ. ನಮ್ಮ ನಗುವಿಗೆ ಆಕೆಯೇ ಕಾರಣವಾಗಿದ್ದಳು. ಶ್ರೀದೇವಿ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ತಮ್ಮ ಅಂತರಂಗವನ್ನ ಪತ್ರದ ಮುಖೇನ ಬೋನಿ ಕಪೂರ್ ಬಿಚ್ಚಿಟ್ಟಿದ್ದಾರೆ.

ಶ್ರೀದೇವಿ ಪಾರ್ಥಿವ ಶರೀರ ಭಾರತಕ್ಕೆ ತರಲು ಈ ವ್ಯಕ್ತಿಯೇ ಕಾರಣ

English summary
Boney Kapoor had planned a special surprise for the actress on her birthday. after her death, He Just Wants To PROTECT His Daughters.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada