TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಶ್ರೀದೇವಿ ಸಾವಿನ ಹಿಂದೆ ಬಿದ್ದ ಪ್ರಿಯಾ ವಾರಿಯರ್: ಬೋನಿ ಕಪೂರ್ ವಾರ್ನಿಂಗ್.!
ಕಣ್ಸನ್ನೆ ಮೂಲಕ ಇಂಟರ್ ನೆಟ್ ನಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಮತ್ತೆ ಹೆಡ್ ಲೈನ್ ಆಗಿದ್ದಾರೆ. ಬಾಲಿವುಡ್ ಸಿನಿಮಾವೊಂದರಲ್ಲಿ ಅಭಿನಯಿಸುವ ಮೂಲಕ ಬಿಗ್ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಿದ್ದಾರೆ ಎಂಬ ಸಹಿ ಸುದ್ದಿಯ ಮಧ್ಯೆ ವಿವಾದವೊಂದಕ್ಕೆ ಗುರಿಯಾಗಿದ್ದಾರೆ.
ಹೌದು, ಕಳೆದ ವರ್ಷ ದುಬೈನಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದ ನಟಿ ಶ್ರೀದೇವಿ ಅವರ ಸಾವಿನ ಹಿಂದೆ ಪ್ರಿಯಾ ವಾರಿಯರ್ ಬಿದ್ದಿದ್ದಾರೆ. ಈ ವಿಷ್ಯ ತಿಳಿದ ಶ್ರೀದೇವಿ ಪತಿ ಬೋನಿ ಕಪೂರ್ ಕೋಪಿಸಿಕೊಂಡಿದ್ದು, ಪ್ರಿಯಾ ವಾರಿಯರ್ ಮತ್ತು ತಂಡಕ್ಕೆ ಲೀಗಲ್ ನೋಟೀಸ್ ನೀಡಿದ್ದಾರೆ.
ನಟಿ ಶ್ರೀದೇವಿ ಪೋಸ್ಟ್ ಮಾರ್ಟಂ ರಿಪೋರ್ಟ್ ಸುತ್ತ ಅನುಮಾನದ ಹುತ್ತ.!
ಅಷ್ಟಕ್ಕೂ, ಏನಿದು ದಿವಂಗತ ನಟಿ ಶ್ರೀದೇವಿ ಮತ್ತು ಸೋಶಿಯಲ್ ಮೀಡಿಯಾ ಸ್ಟಾರ್ ಪ್ರಿಯಾ ಪ್ರಕಾಶ್ ವಾರಿಯರ್ ಡೆತ್ ವಿವಾದ ಎಂಬುದನ್ನ ತಿಳಿಯಲು ಮುಂದೆ ಓದಿ.....
ಎಲ್ಲದಕ್ಕೂ ಕಾರಣ 'ಶ್ರೀದೇವಿ ಬಂಗಲೆ'
ಪ್ರಿಯಾ ಪ್ರಕಾಶ್ ವಾರಿಯರ್ ಮತ್ತು ತಂಡಕ್ಕೆ ಬೋನಿ ಕಪೂರ್ ಲೀಗಲ್ ನೋಟೀಸ್ ನೀಡಲು ಕಾರಣ 'ಶ್ರೀದೇವಿ ಬಂಗಲೆ' ಸಿನಿಮಾ. ಪ್ರಶಾಂತ್ ಮಂಬಲಿ ನಿರ್ದೇಶನದ ಈ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಇದು ಶ್ರೀದೇವಿ ಸಾವಿನ ಸುತ್ತ ಕಥೆ ಮಾಡಲಾಗಿದೆ ಎಂಬ ಅನುಮಾನ ಮೂಡಿಸಿದೆ.
ನಟಿ ಶ್ರೀದೇವಿ ಅಕಾಲ ಸಾವಿಗೆ ನಿಜವಾದ ಕಾರಣ 'ಇದೇ'ನಾ.?
ಬಾತ್ ಟಬ್ ನಲ್ಲಿ ಶ್ರೀದೇವಿ
ದುಬೈನಲ್ಲಿ ಮದುವೆ ಸಮಾರಂಭಕ್ಕೆ ಹೋಗಿದ್ದ ಶ್ರೀದೇವಿ ಬಾತ್ ಟಬ್ ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಈಗ ರಿಲೀಸ್ ಆಗಿರುವ 'ಶ್ರೀದೇವಿ ಬಂಗಲೆ' ಚಿತ್ರದ ಟೀಸರ್ ನಲ್ಲೂ ಆ ದೃಶ್ಯವಿದೆ. ಜೊತೆಗೆ ಈ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿರುವ ಪ್ರಿಯಾ ಪಾತ್ರದ ಹೆಸರು ಶ್ರೀದೇವಿ. ಈಕೆಯೊಬ್ಬ ಖ್ಯಾತ ನಟಿಯ ಪಾತ್ರ ನಿರ್ವಹಿಸಿದ್ದಾರೆ. ಇದೆಲ್ಲವನ್ನ ಗಮನಿಸಿದ್ರೆ ಇದು ಶ್ರೀದೇವಿ ಸಾವಿನ ಸುತ್ತ ಮಾಡುತ್ತಿರುವ ಸಿನಿಮಾ ಎಂಬುದು ಸಾಮಾನ್ಯ ಜನರಿಗೂ ಗೊತ್ತಾಗುತ್ತೆ.
ಸರ್ಪ್ರೈಸ್ ಕೊಡಲು ಹೋದ ಬೋನಿ ಕಪೂರ್ ಗೆ ಕಾದಿತ್ತು ಶಾಕ್: ಬಾತ್ ಟಬ್ ನಲ್ಲಿ ಬಿದ್ದಿದ್ದ ಶ್ರೀದೇವಿ!
ಬೋನಿ ಕಪೂರ್ ಕೋಪ.!
ಇದೀಗ, 'ಶ್ರೀದೇವಿ ಬಂಗಲೆ' ಟೀಸರ್ ನೋಡಿದ ಬೋನಿ ಕಪೂರ್ ಚಿತ್ರತಂಡಕ್ಕೆ ಲೀಗಲ್ ನೋಟಿಸ್ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಪ್ರಶಾಂತ್ ಮಂಬಲಿ, ನಾವು ಇದನ್ನ ಎದರಿಸುತ್ತೇವೆ. ನಮ್ಮದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಶ್ರೀದೇವಿ ಎಂಬುದು ಕಾಮನ್ ಹೆಸರು. ನಟಿಯೊಬ್ಬರ ಕಥೆ ಮಾಡುತ್ತಿದ್ದೇವೆ'' ಎಂದು ಸ್ಪಷ್ಟಪಡಿಸಿದ್ದಾರೆ.
ಸಾವಿಗೂ ಮುನ್ನ ನೆರವೇರಲಿಲ್ಲ ಶ್ರೀದೇವಿ ಅವರ ಈ ಒಂದು ಆಸೆ
ಪ್ರಿಯಾ ಪ್ರಕಾಶ್ ಕಥೆಯೇನು?
'ಒರು ಅದಾರ್ ಲವ್' ಚಿತ್ರದ ಹಾಡಿನ ಮೂಲಕ ಭಾರಿ ಸದ್ದು ಮಾಡಿದ ಪ್ರಿಯಾ, ಈಗ ಶ್ರೀದೇವಿ ಬಂಗಲೆ ಚಿತ್ರದಿಂದ ಬಾಲಿವುಡ್ ಗೆ ಪ್ರವೇಶ ಮಾಡ್ತಿದ್ದಾರೆ. ಮೊದಲ ಸಿನಿಮಾನೇ ವಿವಾದಕ್ಕೆ ಸಿಲುಕಿಕೊಂಡಿದೆ. ಲೀಗಲ್ ನೋಟೀಸ್ ಬಗ್ಗೆ ಪ್ರಿಯಾ ಏನೂ ಮಾತನಾಡಿಲ್ಲ. ಸದ್ಯ, ಶೂಟಿಂಗ್ ನಡೆಯುತ್ತಿದ್ದು, ಟೀಸರ್ ಬಿಸಿಬಿಸಿ ಚರ್ಚೆಯಾಗ್ತಿದೆ.