For Quick Alerts
  ALLOW NOTIFICATIONS  
  For Daily Alerts

  ಆರು ದಿನ: ಹತ್ತತ್ರ ಐವತ್ತು ಕೋಟಿ ಕಲೆಕ್ಷನ್ ಮಾಡಿದ 'ಧಡಕ್'

  By Harshitha
  |

  ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅಭಿನಯದ ಚೊಚ್ಚಲ ಸಿನಿಮಾ 'ಧಡಕ್' ಬಾಕ್ಸ್ ಆಫೀಸ್ ನಲ್ಲಿ ತಕ್ಕಮಟ್ಟಿಗೆ ಯಶಸ್ಸು ಕಾಣುತ್ತಿದೆ.

  ಅಷ್ಟಕ್ಕೂ, ಜಾಹ್ನವಿ-ಇಶಾನ್ ಅಭಿನಯದ 'ಧಡಕ್' ಸಿನಿಮಾ ಮರಾಠಿಯ 'ಸೈರಾಟ್' ಚಿತ್ರದ ರೀಮೇಕ್. 'ಧಡಕ್' ಚಿತ್ರ 'ಸೈರಾಟ್'ನಷ್ಟು ಪರಿಣಾಮಕಾರಿ ಆಗಿ ಮೂಡಿಬಂದಿಲ್ಲ ಎಂಬ ಕಾರಣಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ, ಬಾಕ್ಸ್ ಆಫೀಸ್ ನಲ್ಲಿ 'ಧಡಕ್' ಪರ್ಫಾಮೆನ್ಸ್ ಚೆನ್ನಾಗಿದೆ.

  ಬಿಡುಗಡೆ ಆದ ಆರು ದಿನಗಳಲ್ಲಿ 'ಧಡಕ್' ಸಿನಿಮಾ 48.01 ಕೋಟಿ ಕಲೆಕ್ಷನ್ ಮಾಡಿದೆ. ಹಾಗ್ನೋಡಿದ್ರೆ, 'ಧಡಕ್' ಸಿನಿಮಾದಲ್ಲಿ ಸಿಕ್ಕಾಪಟ್ಟೆ ಫ್ಯಾನ್ ಫಾಲೋವಿಂಗ್ ಹೊಂದಿರುವ 'ಸ್ಟಾರ್'ಗಳು ಯಾರೂ ಇಲ್ಲ. ಮುಖ್ಯಭೂಮಿಕೆಯಲ್ಲಿ ಇರುವವರೆಲ್ಲಾ ಹೊಸಬರೇ. ಹೀಗಿದ್ದರೂ, 'ಧಡಕ್' ಸಿನಿಮಾ ಆರು ದಿನಗಳಲ್ಲಿ ಹತ್ತತ್ರ ಐವತ್ತು ಕೋಟಿವರೆಗೂ ಕಲೆಕ್ಷನ್ ಮಾಡಿರುವುದು ಅಚ್ಚರಿಯ ಬೆಳವಣಿಗೆ.

  ಶ್ರೀದೇವಿ ಪುತ್ರಿಯ ಚೊಚ್ಚಲ ಸಿನಿಮಾ 'ಧಡಕ್' ಮಾಡಿದ ಕಲೆಕ್ಷನ್ ಎಷ್ಟು.? ಶ್ರೀದೇವಿ ಪುತ್ರಿಯ ಚೊಚ್ಚಲ ಸಿನಿಮಾ 'ಧಡಕ್' ಮಾಡಿದ ಕಲೆಕ್ಷನ್ ಎಷ್ಟು.?

  'ಧಡಕ್' ಸಿನಿಮಾ ನೋಡಿ ವಿಮರ್ಶಕರು ಮಿಶ್ರ ಪ್ರತಿಕ್ರಿಯೆ ಕೊಟ್ಟಿರಬಹುದು. ಆದ್ರೆ, ಬಾಲಿವುಡ್ ಸೆಲೆಬ್ರಿಟಿಗಳಿಗೆ 'ಧಡಕ್' ಚಿತ್ರ ತುಂಬಾ ಇಷ್ಟ ಆಗಿದೆ. ಅನಿಲ್ ಕಪೂರ್, ಸೋನಂ ಕಪೂರ್, ಮಾಧುರಿ ದೀಕ್ಷಿತ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು 'ಧಡಕ್' ಚಿತ್ರವನ್ನ ಹಾಡಿ ಹೊಗಳಿದ್ದಾರೆ. ಜಾಹ್ನವಿ ಕಪೂರ್ ಹಾಗೂ ಇಶಾನ್ ಅಭಿನಯ ಕೂಡ ಹಲವರಿಗೆ ಖುಷಿ ನೀಡಿದೆ.

  ಆರು ದಿನಗಳಲ್ಲಿ 'ಧಡಕ್' ಮಾಡಿರುವ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ ನೋಡಿ...

  ದಿನ 1 - 8.71 ಕೋಟಿ
  ದಿನ 2 - 11.04 ಕೋಟಿ
  ದಿನ 3 - 13.92 ಕೋಟಿ
  ದಿನ 4 - 5.52 ಕೋಟಿ
  ದಿನ 5 - 4.76 ಕೋಟಿ
  ದಿನ 6 - 4.06 ಕೋಟಿ

  English summary
  Ishaan Khatter-Janhvi Kapoor's Dhadak minted Rs. 48.01 crores in 6 days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X