For Quick Alerts
  ALLOW NOTIFICATIONS  
  For Daily Alerts

  ಮೊದಲ ದಿನ ಕೋಟಿ ಕೋಟಿ ಬಾಚಿ RRR ಹಿಂದಿಕ್ಕಿದ ಬ್ರಹ್ಮಾಸ್ತ್ರ; ಕೆಜಿಎಫ್ 2 ಮುಂದೆ ಇದು ಏನೇನೂ ಅಲ್ಲ!

  |

  ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಅಭಿನಯದ ಬಹುನಿರೀಕ್ಷಿತ ಚಿತ್ರ ಬ್ರಹ್ಮಾಸ್ತ್ರ ನಿನ್ನೆಯಷ್ಟೇ ( ಸೆಪ್ಟೆಂಬರ್ 9 ) ವಿಶ್ವದಾದ್ಯಂತ ಬಿಡುಗಡೆಗೊಂಡಿದೆ. ಅಯಾನ್ ಮುಖರ್ಜಿ ನಿರ್ದೇಶನವಿರುವ ಈ ಚಿತ್ರ ಮೂಲತಃ ಹಿಂದಿ ಭಾಷೆಯದ್ದಾಗಿದ್ದು, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಬಿಡುಗಡೆಯಾಗಿದೆ.

  ಇನ್ನು ಬಾಲಿವುಡ್ ಕ್ಯೂಟ್ ಕಪಲ್ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಇದೇ ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ಅಭಿನಯಿಸಿದ್ದು, ಈ ಚಿತ್ರಕ್ಕೂ ಸಹ ಹಿಂದಿನ ಹಿಂದಿ ಸಿನಿಮಾಗಳ ಹಾಗೆ ಬಾಯ್ಕಾಟ್ ಹಿನ್ನಡೆ ಉಂಟಾಗಿತ್ತು. ಇತ್ತೀಚೆಗೆ ಬಂದ ಹಿಂದಿ ಚಿತ್ರಗಳೆಲ್ಲಾ ಈ ಬಾಯ್ಕಾಟ್ ಟ್ರೆಂಡ್ ಎದುರು ಮಕಾಡೆ ಮಲಗಿದ್ದವು. ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಛಡ್ಡಾ ಮೊದಲ ದಿನ ಕೇವಲ 11 ಕೋಟಿ ಗಳಿಸಿ ವಿಫಲವಾಗಿತ್ತು ಹಾಗೂ ಅಕ್ಷಯ್ ಕುಮಾರ್ ಅಭಿನಯದ ರಕ್ಷಾಬಂಧನ್ ಹತ್ತು ಕೋಟಿಯನ್ನು ಕೂಡ ಮೊದಲ ದಿನ ದಾಟಿರಲಿಲ್ಲ. ಇಷ್ಟರಮಟ್ಟಿಗೆ ಹಿಂದಿ ಚಿತ್ರಗಳಿಗೆ ಬಾಯ್ಕಾಟ್ ಅಭಿಯಾನ ಪೆಟ್ಟು ನೀಡಿತ್ತು.

  ಈ ಭಯ ಬ್ರಹ್ಮಾಸ್ತ್ರ ಚಿತ್ರಕ್ಕೂ ಕೂಡ ಇತ್ತು. ಆದರೆ ಬ್ರಹ್ಮಾಸ್ತ್ರ ಚಿತ್ರತಂಡ ಉತ್ತಮ ಪ್ರಮೋಷನ್ ಮಾಡಿತು ಹಾಗೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುವಲ್ಲಿ ಯಶಸ್ವಿಯಾಯಿತು. ಅದರಂತೆ ಮೊದಲ ದಿನ ಹಲವೆಡೆ ಹೌಸ್ ಫುಲ್ ಪ್ರದರ್ಶನಗಳನ್ನು ಕೂಡ ಚಿತ್ರ ಕಂಡಿತು ಹಾಗೂ ಚಿತ್ರ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತು. ಕೆಲವರು ಚಿತ್ರ ತುಂಬಾ ಚೆನ್ನಾಗಿದೆ ಎಂದರೆ ಇನ್ನೂ ಕೆಲವರು ಚಿತ್ರ ಅಷ್ಟಕಷ್ಟೆ ಎಂದು ತಳ್ಳಿಹಾಕಿದರು. ಹೀಗಿದ್ದರೂ ಸಹ ಚಿತ್ರ ಮೊದಲ ದಿನ ದೊಡ್ಡ ಮೊತ್ತವನ್ನೇ ಕಲೆಹಾಕಿದ್ದು, ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ RRR ಹಿಂದಿಕ್ಕಿ ಹಿಂದಿ ಚಿತ್ರಗಳ ಟಾಪ್ 15 ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಆದರೆ ಈ ಸಿನಿಮಾದ ಮೊದಲ ದಿನದ ಗಳಿಕೆಗೂ ಕೆಜಿಎಫ್ 2 ಹಿಂದಿ ಡಬ್ಬಿಂಗ್ ಮೊದಲ ದಿನದ ಗಳಿಕೆಗೂ ಅಜಗಜಾಂತರ ವ್ಯತ್ಯಾಸವಿದೆ!

   ಹಿಂದಿ ವರ್ಷನ್ ಮೊದಲ ದಿನದ ಗಳಿಕೆ ಎಷ್ಟು?

  ಹಿಂದಿ ವರ್ಷನ್ ಮೊದಲ ದಿನದ ಗಳಿಕೆ ಎಷ್ಟು?

  ಬ್ರಹ್ಮಾಸ್ತ್ರ ಸಿನಿಮಾ ಮೊದಲ ದಿನ ಎಲ್ಲ ಭಾಷೆಯೂ ಸೇರಿದಂತೆ 36.5ರಿಂದ 38.5 ಕೋಟಿ ರೂ ಗಳಿಕೆ ಮಾಡಿದೆ ಎಂದು ವರದಿಗಳು ತಿಳಿಸಿವೆ. ಇನ್ನು ಬ್ರಹ್ಮಾಸ್ತ್ರ ಹಿಂದಿ ವರ್ಷನ್ ಮೊದಲ ದಿನ 32 ಕೋಟಿ ಗಳಿಕೆ ಮಾಡಿದೆ. ಈ ಮೂಲಕ ಮೊದಲ ದಿನ ಅತಿ ಹೆಚ್ಚು ಗಳಿಸಿದ ಹಿಂದಿ ವರ್ಷನ್ ಚಿತ್ರಗಳ ಪಟ್ಟಿಯಲ್ಲಿ ಬ್ರಹ್ಮಾಸ್ತ್ರ ಹದಿನೈದನೇ ಸ್ಥಾನ ಪಡೆದುಕೊಂಡಿದೆ.

   ಹಿಂದಿ ಮಾರುಕಟ್ಟೆಯಲ್ಲಿ ರಾಕಿ ಭಾಯ್ ದ ಬಾಸ್!

  ಹಿಂದಿ ಮಾರುಕಟ್ಟೆಯಲ್ಲಿ ರಾಕಿ ಭಾಯ್ ದ ಬಾಸ್!

  ಇನ್ನು ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರದ ಹಿಂದಿ ವರ್ಷನ್ ಮೊದಲನೇ ದಿನ ಬರೋಬ್ಬರಿ 53.95 ಕೋಟಿ ಕಲೆಕ್ಷನ್ ಮಾಡಿತ್ತು. ಇದು ಹಿಂದಿ ವರ್ಷನ್ ಚಿತ್ರವೊಂದು ಮೊದಲನೇ ದಿನ ಗಳಿಸಿದ ಅತಿ ದೊಡ್ಡ ಮೊತ್ತವಾಗಿದೆ. ಈ ಮೂಲಕ ಕೆಜಿಎಫ್ ಚಾಪ್ಟರ್ 2 ಚಿತ್ರ ಹಿಂದಿ ವರ್ಷನ್ ಚಿತ್ರಗಳ ಮೊದಲನೆಯ ಗಳಿಕೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಮೂಲಕ ಬ್ರಹ್ಮಾಸ್ತ್ರದ ಮೊದಲ ದಿನದ ಗಳಿಕೆಗೂ ಕೆಜಿಎಫ್ ಚಾಪ್ಟರ್ 2 ಹಿಂದಿ ವರ್ಷನ್ ಮೊದಲ ದಿನದ ಗಳಿಕೆಗೂ ಅಜಗಜಾಂತರ ವ್ಯತ್ಯಾಸವಿದೆ.

   ಮೊದಲ ಅತಿ ಹೆಚ್ಚು ಗಳಿಸಿದ ಹಿಂದಿ ವರ್ಷನ್ ಚಿತ್ರಗಳ ಟಾಪ್ 5 ಪಟ್ಟಿ

  ಮೊದಲ ಅತಿ ಹೆಚ್ಚು ಗಳಿಸಿದ ಹಿಂದಿ ವರ್ಷನ್ ಚಿತ್ರಗಳ ಟಾಪ್ 5 ಪಟ್ಟಿ

  1. ಕೆಜಿಎಫ್ ಚಾಪ್ಟರ್ 2 - 53.95 ಕೋಟಿ

  2. ವಾರ್ - 51.6 ಕೋಟಿ3. ಥಗ್ಸ್ ಆಫ್ ಹಿಂದೂಸ್ಥಾನ್ - 50.75 ಕೋಟಿ4. ಹ್ಯಾಪಿ ನ್ಯೂ ಇಯರ್ - 42.62 ಕೋಟಿ5. ಭಾರತ್ - 42.3 ಕೋಟಿ
   ಬಾಹುಬಲಿ 2 ಮತ್ತು RRR ಗಳಿಸಿದ್ದೆಷ್ಟು?

  ಬಾಹುಬಲಿ 2 ಮತ್ತು RRR ಗಳಿಸಿದ್ದೆಷ್ಟು?

  ರಾಜಮೌಳಿ ನಿರ್ದೇಶನದ ಬಾಹುಬಲಿ 2 ಚಿತ್ರದ ಹಿಂದಿ ವರ್ಷನ್ ಮೊದಲನೇ ದಿನ 41 ಕೋಟಿ ಗಳಿಕೆ ಮಾಡಿತ್ತು. ಈ ಮೂಲಕ ಬಾಹುಬಲಿ 2 ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ವರ್ಷನ್ ಚಿತ್ರಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಇನ್ನು ಇದೇ ವರ್ಷ ತೆರೆಕಂಡ ರಾಜಮೌಳಿ ಅವರ ಮತ್ತೊಂದು ಸಿನಿಮಾ RRR ಹಿಂದಿ ವರ್ಷನ್ ಮೊದಲ ದಿನ 20.07 ಕೋಟಿ ಗಳಿಕೆ ಮಾಡಿತ್ತು. ಈ ಮೂಲಕ ಬ್ರಹ್ಮಾಸ್ತ್ರ ಮೊದಲ ದಿನದ ಗಳಿಕೆಯಲ್ಲಿ RRR ಹಿಂದಿ ವರ್ಷನ್ ಚಿತ್ರವನ್ನು ಹಿಂದಿಕ್ಕಿದ್ದು, ಬಾಹುಬಲಿಯನ್ನು ಬೀಟ್ ಮಾಡುವಲ್ಲಿ ವಿಫಲವಾಗಿದೆ.

  English summary
  Brahmastra hindi version day 1 box office collection beats RRR but failed to beat KGF Chapter 2

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X