twitter
    For Quick Alerts
    ALLOW NOTIFICATIONS  
    For Daily Alerts

    'ಬ್ರಹ್ಮಾಸ್ತ್ರ' ಠುಸ್: ಪಿವಿಆರ್ ಹಾಗೂ ಐನಾಕ್ಸ್‌ಗೆ ₹800 ಕೋಟಿ ನಷ್ಟ ಹೇಗೆ?

    |

    ಬಾಕ್ಸಾಫೀಸ್‌ ಮೇಲೆ ಬಾಲಿವುಡ್‌ ಬಿಟ್ಟ 'ಬ್ರಹ್ಮಾಸ್ತ್ರ' ಠುಸ್ ಆಗಿದೆ. ಮೊದಲ ದಿನ, ಮೊದಲ ಶೋನಿಂದಲೇ ನೆಗೆಟಿವ್ ಕಮೆಂಟ್‌ಗಳು ಹೊರಬರುತ್ತಿವೆ. ಬಾಲಿವುಡ್‌ ಅನ್ನು ಈ ಸಿನಿಮಾ ಕೈ ಹಿಡಿಯಬಹುದು ಅನ್ನೋ ನಿರೀಕ್ಷೆ ಸುಳ್ಳಾಗಿದೆ.

    ಆಮಿರ್ ಖಾನ್ 'ಲಾಲ್ ಸಿಂಗ್ ಚಡ್ಡ', ಅಕ್ಷಯ್ ಕುಮಾರ್ 'ರಕ್ಷಾ ಬಂಧನ್' ಸೇರಿದಂತೆ ಬಿಡುಗಡೆಯಾದ ಬಾಲಿವುಡ್‌ ಸಿನಿಮಾಗಳೆಲ್ಲಾ ನೆಲಕ್ಕಚ್ಚುತ್ತಿವೆ. ಈ ಬೆನ್ನಲ್ಲೇ 'ಬ್ರಹ್ಮಾಸ್ತ್ರ' ಕೈ ಹಿಡಿಯಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಈ ಸಿನಿಮಾನೂ ಕೈ ಕೊಟ್ಟಿದೆ.

    ಕಾಶ್ಮೀರ್ ಫೈಲ್ಸ್ ನಿರ್ದೇಶಕ ಗೋ ಮಾಂಸ ವಿಡಿಯೋ ವೈರಲ್: ಸುಮ್ನೆ 'ಬ್ರಹ್ಮಾಸ್ತ್ರ' ನೋಡಿ ಎಂದ ನೆಟ್ಟಿಗರು!ಕಾಶ್ಮೀರ್ ಫೈಲ್ಸ್ ನಿರ್ದೇಶಕ ಗೋ ಮಾಂಸ ವಿಡಿಯೋ ವೈರಲ್: ಸುಮ್ನೆ 'ಬ್ರಹ್ಮಾಸ್ತ್ರ' ನೋಡಿ ಎಂದ ನೆಟ್ಟಿಗರು!

    'ಬ್ರಹ್ಮಾಸ್ತ್ರ' ಸಿನಿಮಾಗೆ ನೆಗೆಟಿವ್ ಕಮೆಂಟ್ ಬಂದಿರೋದ್ರಿಂದ ಭಾರತದ ಎರಡು ಅತೀ ದೊಡ್ಡ ಥಿಯೇಟರ್‌ ಚೈನ್ ಹೊಂದಿರೋ ಪಿವಿಆರ್ ಹಾಗೂ ಐನಾಕ್ಸ್ ನಷ್ಟಕ್ಕೆ ಸಿಲುಕಿವೆ. ಮೂಲಗಳ ಪ್ರಕಾರ, ಪಿವಿಆರ್ ಹಾಗೂ ಐನಾಕ್ಸ್ ₹800 ಕೋಟಿ ನಷ್ಟಕ್ಕೆ ಸಿಲುಕಿದೆ ಎನ್ನಲಾಗಿದೆ. ಅಷ್ಟಕ್ಕೂ ಇಷ್ಟೊಂದು ನಷ್ಟ ಆಗಿದ್ದು ಹೇಗೆ? ತಿಳಿಯಲು ಮುಂದೆ ಓದಿ.

    'ಬ್ರಹ್ಮಾಸ್ತ್ರ' ಬಜೆಟ್ ಎಷ್ಟು?

    'ಬ್ರಹ್ಮಾಸ್ತ್ರ' ಬಜೆಟ್ ಎಷ್ಟು?

    ರಣ್‌ಬೀರ್ ಕಪೂರ್, ಆಲಿಯಾ ಭಟ್ ಅಮಿತಾಬ್ ಬಚ್ಚನ್ ಹಾಗೂ ಟಾಲಿವುಡ್ ಸ್ಟಾರ್ ನಾಗಾರ್ಜುನಾ ಅಭಿನಯಿಸಿದ ಸಿನಿಮಾ 'ಬ್ರಹ್ಮಾಸ್ತ್ರ'. ಇದೇ ಸಿನಿಮಾದಲ್ಲಿ ಬಾಲಿವುಡ್‌ನ ಕಿಂಗ್ ಖಾನ್ ಶಾರುಖ್ ಖಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟು ದೊಡ್ಡ ತಾರಾಗಣವಿರುವ 'ಬ್ರಹ್ಮಾಸ್ತ್ರ' ₹410 ಕೋಟಿ ಬಜೆಟ್‌ನಲ್ಲಿ ನಿರ್ಮಾಣ ಆಗಿದೆ ಎನ್ನಲಾಗಿದೆ. ಈ ಸಿನಿಮಾದ ನಿರ್ಮಾಪಕರಲ್ಲಿ ಕರಣ್ ಜೋಹರ್ ಕೂಡ ಒಬ್ಬರು. ಇವರೊಂದಿಗೆ ರಣ್‌ಬೀರ್ ಕಪೂರ್ ಸೇರಿದಂತೆ ನಿರ್ದೇಶಕ ಅಯಾನ್ ಮುಖರ್ಜಿ ಕೂಡ ನಿರ್ಮಾಪಕರಲ್ಲಿ ಒಬ್ಬರು.

    Brahmastra First Review : 'ಬ್ರಹ್ಮಾಸ್ತ್ರ' ಮೂಲಕ ಮತ್ತೊಂದು ಫ್ಲಾಪ್‌ನತ್ತ ಬಾಲಿವುಡ್: ವಿಮರ್ಶಕ ಟೀಕೆBrahmastra First Review : 'ಬ್ರಹ್ಮಾಸ್ತ್ರ' ಮೂಲಕ ಮತ್ತೊಂದು ಫ್ಲಾಪ್‌ನತ್ತ ಬಾಲಿವುಡ್: ವಿಮರ್ಶಕ ಟೀಕೆ

    ಪಿವಿಆರ್‌-ಐನಾಕ್ಸ್‌ಗೆ ನಷ್ಟ ಹೇಗೆ?

    ಪಿವಿಆರ್‌-ಐನಾಕ್ಸ್‌ಗೆ ನಷ್ಟ ಹೇಗೆ?

    'ಬ್ರಹಾಸ್ತ್ರ'ಗೂ ಪಿವಿಆರ್‌ ಹಾಗೂ ಐನಾಕ್ಸ್‌ಗೂ ಏನು ಸಂಬಂಧ ಅನ್ನುವ ಪ್ರಶ್ನೆ ಮೂಡಬಹುದು. ಸಿನಿಮಾವನ್ನು ಪ್ರದರ್ಶನ ಮಾಡುವುದು ಬಿಟ್ಟರೆ, ಬೇರೆ ಯಾವುದೇ ವ್ಯವಹಾರವಿಲ್ಲ. ಆದರೂ, ಇವೆರಡೂ ಮಲ್ಟಿಪ್ಲೆಕ್ಸ್‌ಗೆ ₹800 ಕೋಟಿ ನಷ್ಟ ಆಗಿದೆ. ಅಷ್ಟಕ್ಕೂ ಇಷ್ಟೊಂದು ನಷ್ಟ ಆಗಿದ್ದೇಗೆ? ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ. ಪಿವಿಆರ್ ಹಾಗೂ ಐನಾಕ್ಸ್ ಎರಡರ ಷೇರುಗಳು ಕಳೆದ ಎರಡು ವಾರಗಳಲ್ಲಿ ಶೇ.7 ರಿಂದ 10ರಷ್ಟು ಏರಿಕೆಯಾಗಿತ್ತು. ಹೀಗಾಗಿ 'ಬ್ರಹ್ಮಾಸ್ತ್ರ' ಸಿನಿಮಾದಿಂದ ಮತ್ತೆ ಏರಿಕೆಯಾಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಕೆಟ್ಟ ವಿಮರ್ಶೆಯಿಂದ ಪಿವಿಆರ್ ಹಾಗೂ ಐನಾಕ್ಸ್‌ನ ಗಣನೀಯ ಇಳಿಕೆ ಕಂಡಿದೆ. ಪಿವಿಆರ್ ಶೆ.5.31ರಷ್ಟು ಕುಸಿತ ಕಂಡಿದ್ರೆ, ಐನಾಕ್ಸ್ ಶೇ.5.31ರಷ್ಟು ಇಳಿಕೆ ಕಂಡಿದೆ. ಹೀಗಾಗಿ ಇವೆರಡರಿಂದ ₹800 ಕೋಟಿ ಬಂಡವಾಳ ಕಳೆದುಕೊಂಡಿದೆ ಎಂದು ವರದಿಯಾಗಿದೆ.

    'ಬ್ರಹ್ಮಾಸ್ತ್ರ' ಎಷ್ಟು ಸ್ಕ್ರೀನ್‌ಗಳಲ್ಲಿ ರಿಲೀಸ್

    'ಬ್ರಹ್ಮಾಸ್ತ್ರ' ಎಷ್ಟು ಸ್ಕ್ರೀನ್‌ಗಳಲ್ಲಿ ರಿಲೀಸ್

    ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಸಿನಿಮಾ 'ಬ್ರಹ್ಮಾಸ್ತ್ರ' ವಿಶ್ವದಾದ್ಯಂತ ಸುಮಾರು 8 ಸಾವಿರ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿದೆ. ಭಾರತದಲ್ಲಿ 5 ಸಾವಿರ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದ್ದರೆ. ವಿದೇಶದಲ್ಲಿ ಸುಮಾರು 3 ಸಾವಿರ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿದೆ.

    ಮಹಾಕಾಳೇಶ್ವರ ದೇವಾಲಯ ಪ್ರವೇಶಿಸದಂತೆ ಆಲಿಯಾ-ರಣ್ಬೀರ್‌ಗೆ ತಡೆಮಹಾಕಾಳೇಶ್ವರ ದೇವಾಲಯ ಪ್ರವೇಶಿಸದಂತೆ ಆಲಿಯಾ-ರಣ್ಬೀರ್‌ಗೆ ತಡೆ

    ಕಿಕ್ ಕೊಟ್ಟಿತ್ತು ಅಡ್ವಾನ್ಸ್ ಬುಕಿಂಗ್

    ಕಿಕ್ ಕೊಟ್ಟಿತ್ತು ಅಡ್ವಾನ್ಸ್ ಬುಕಿಂಗ್

    'ಬ್ರಹ್ಮಾಸ್ತ್ರ' ಬಿಡುಗಡೆಗೂ ಮುನ್ನವೇ ಸುಮಾರು 1 ಲಕ್ಷ ಟಿಕೆಟ್‌ಗಳನ್ನು ಸೇಲ್ ಮಾಡಿತ್ತು. ಹೀಗಾಗಿ ಮೊದಲ ದಿನ ಸುಮಾರು 23 ಕೋಟಿ ರೂ. ಕಲೆ ಹಾಕಿರಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಈಗ ಹೊರಬಿದ್ದಿರೋ ವಿಮರ್ಶೆಯ ಪ್ರಕಾರ, 'ಬ್ರಹ್ಮಾಸ್ತ್ರ' 200 ರಿಂದ 270 ಕೋಟಿ ಲೈಫ್‌ ಟೈಮ್‌ನಲ್ಲಿ ಕಲೆ ಹಾಕಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

    English summary
    Brahmastra Weak Review: PVR and Inox Have Cumulatively Lost Over ₹800 Crore, Know More.
    Friday, September 9, 2022, 18:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X