»   » ಆಗಸ್ಟ್ 19ಕ್ಕೆ ಬ್ರೆಟ್ ಲೀ ಬಣ್ಣದ ಲೋಕದ ಭವಿಷ್ಯ

ಆಗಸ್ಟ್ 19ಕ್ಕೆ ಬ್ರೆಟ್ ಲೀ ಬಣ್ಣದ ಲೋಕದ ಭವಿಷ್ಯ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಗೆ ಭಾರತದಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಹಾಡು, ಡ್ಯಾನ್ಸ್ ಮೂಲಕ ಗಮನ ಸೆಳೆದಿರುವ ಬ್ರೆಟ್ ಈಗ ಹೊಸ ಇನ್ನಿಂಗ್ಸ್ ಶುರು ಮಾಡಿರುವುದು ಎಲ್ಲರಿಗೂ ಗೊತ್ತೇ ಇದೆ. ಬಾಲಿವುಡ್ ಅಂಗಳಕ್ಕೆ ಬ್ರೆಟ್ ಲೀ ಅಧಿಕೃತ ಎಂಟ್ರಿ ಕೊಟ್ಟಿದ್ದು, ಆಗಸ್ಟ್ 19ರಂದು ಅವರ ಚೊಚ್ಚಲ ಸಿನಿಮಾ 'ಅನ್ ಇಂಡಿಯನ್' ತೆರೆ ಕಾಣಲಿದೆ.

ಭಾರತದ ಕ್ರಿಕೆಟ್ ಅಭಿಮಾನಿಗಳ ಅಚ್ಚುಮೆಚ್ಚಿನ ಲೀ ಮೈದಾನ ಹೊರಗೂ ಒಳಗೂ ತಮ್ಮ ಪ್ರತಿಭೆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕ್ರಿಕೆಟ್ ಕೋಚಿಂಗ್ ಬಿಟ್ಟು ಬಣ್ಣದ ಲೋಕದತ್ತ ಮುಖ ಮಾಡಿದ್ದಾರೆ.

ಇಂಗ್ಲೆಂಡ್ ಕೌಂಟಿ, ಆಸ್ಟ್ರೇಲಿಯಾದ ಕ್ಲಬ್ ಗಳಿಗೆ ಕೋಚಿಂಗ್ ಮಾಡುವ ಆಫರ್ ಬಂದಿದ್ದರೂ ಬ್ರೆಟ್ ಲೀ ಮನಸ್ಸು ನಟನೆಯತ್ತ ಹೊರಳಿ ವರ್ಷ ಕಳೆಯುತ್ತಾ ಬಂದಿದೆ. 'ರಾಕ್ ಸ್ಟಾರ್' ಲೀ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಅವರ ಚೊಚ್ಚಲ ಚಿತ್ರದ ಟ್ರೈಲರ್ ಸದ್ದು ಮಾಡಿತ್ತು. ಈಗ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಹಿಂದೆ ಆಶಾ ಭೋಂಸ್ಲೆ ಜೊತೆ ರಾಕ್ ಆಲ್ಬಂ ಹೊರ ತಂದಿದ್ದ ಬ್ರೆಟ್ ಲೀ ಈಗ ಪೂರ್ಣ ಪ್ರಮಾಣದಲ್ಲಿ ನಟನೆಗೆ ಇಳಿದಿದ್ದಾರೆ. ಬಾಲಿವುಡ್ ಗೆ ಬೌಲರ್ ಬ್ರೆಟ್ ಲೀ ಎಂಟ್ರಿ ಹೇಗೆ ಇರುತ್ತೆ ಮುಂದೆ ಓದಿ...

ಆಸ್ಟ್ರೇಲಿಯಾದಲ್ಲಿ ರಿಲೀಸ್ ಆಗಿದೆ

"ಅನ್‌ ಇಂಡಿಯನ್‌' ಎಂಬ ಇಂಗ್ಲೀಷ್ ಕಮ್ ಹಿಂದಿ ಚಲನಚಿತ್ರದಲ್ಲಿ ಬ್ರೆಟ್ ಲೀ ಸಾಫ್ಟ್ ಪಾತ್ರ ಮಾಡುತ್ತಿದ್ದಾರೆ. ಹಾಡು, ಕುಣಿತ, ರೋಮ್ಯಾನ್ಸ್ ಎಲ್ಲವನ್ನು ಒಳಗೊಂಡಿರುವ ಈ ಚಿತ್ರ ಅಕ್ಟೋಬರ್ 15, 2015ಕ್ಕೆ ತೆರೆಗೆ ಬರಬೇಕಿತ್ತು. ಆದರೆ, ವಿಳಂಬವಾಗಿ ಕೊನೆಗೂ ತೆರೆ ಕಾಣುತ್ತಿದೆ. ಆಸ್ಟ್ರೇಲಿಯಾದಲ್ಲಿ ಈಗಾಗಲೇ ಈ ಚಿತ್ರ ಬಿಡುಗಡೆಯಾಗಿದೆ.

ಇಂಡಿಯನ್ ಫ್ಯಾಮಿಲಿಗೆ ಇಂಗ್ಲೀಷ್ ಟೀಚರ್ ಲೀ

ಈ ಚಿತ್ರದಲ್ಲಿ ಮೀರಾ ಎಂಬ ಪಾತ್ರ ಮಾಡಿರುವ ತನೀಷ್ತಾ ಚಟರ್ಜಿಗೆ 'ಸಿಂಗಲ್' ಆಗಿರುವ ಲೀ ಮನ ಸೋಲುತ್ತದೆ. ಇಂಡಿಯನ್ ಫ್ಯಾಮಿಲಿ ಒಬ್ಬ ಭಾರತೀಯೇತರನನ್ನು ಹೇಗೆ ಸಹಿಸಿಕೊಳ್ಳುತ್ತದೆ. ಕುಟುಂಬದ ಮನಸ್ಸನ್ನು ಲೀ ಹೇಗೆ ಗೆಲ್ಲುತ್ತ್ತಾರೆ ಎಂಬುದೇ ಕಥಾ ವಸ್ತು. ಜೊತೆಗೆ ಸಿಂಗಲ್ ಪೇರೆಂಟ್ ವಿಷಯವೂ ಚಿತ್ರದಲ್ಲಿದೆ.

ಆಸ್ಟ್ರೇಲಿಯ ಭಾರತ ಸಿನೆಮಾ ಒಕ್ಕೂಟ (ಎಐಎಫ್ಎಫ್) ನಿರ್ಮಾಣ

ಹಾಲಿವುಡ್‌ನ‌ ಜಾನ್‌ ಹಾರ್ವರ್ಡ್‌, ಟೆರಿಲ್‌ ಮೊರ, ಸರ್ಹಾ ರಾಬರ್ಟ್ಸ್, ಬಾಲಿವುಡ್‌ನ‌ ಸುಪ್ರಿಯಾ ಪಾಥಕ್‌ ಕಪೂರ್‌, ಆಕಾಶ್‌ ಕುರುನಾ ಮತ್ತು ಪಲ್ಲವಿ ಶಾರದಾ ಮುಂತಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ. 2013ರಲ್ಲಿ ಸ್ಥಾಪನೆಯಾದ ಆಸ್ಟ್ರೇಲಿಯ ಭಾರತ ಸಿನೆಮಾ ಒಕ್ಕೂಟ (ಎಐಎಫ್ಎಫ್) ದ ನಿರ್ಮಾಣದಲ್ಲಿ ಈ ಹಾಸ್ಯಮಯ ಚಿತ್ರ ತೆರೆಗೆ ಬರುತ್ತಿದೆ.

ಚಿತ್ರದ ರಿಲೀಸ್ ಬಗ್ಗೆ ಟ್ವೀಟ್

ಚಿತ್ರದ ರಿಲೀಸ್ ಬಗ್ಗೆ ಟ್ವೀಟ್ ಮಾಡಿದ ತರಣ್ ಆದರ್ಶ್

ಅನ್ ಇಂಡಿಯನ್ ಟೀಸರ್

ಅನ್ ಇಂಡಿಯನ್ ಚಿತ್ರದ ಟೀಸರ್

ಅನ್ ಇಂಡಿಯನ್ ಮೇಕಿಂಗ್ ವೀಡಿಯೋ

ಅನ್ ಇಂಡಿಯನ್ ಮೇಕಿಂಗ್ ವೀಡಿಯೋ ನೋಡಿ

English summary
Brett Lee's debut feature film unIndian set to hit screens in India on August 19, a year after its Australian release

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada