»   » ಬಾಲಿವುಡ್ ಐಟಂ ಹಾಡಿಗೆ ಬ್ರಿಟ್ನಿ ಸ್ಪಿಯರ್ಸ್ ಹೆಜ್ಜೆ

ಬಾಲಿವುಡ್ ಐಟಂ ಹಾಡಿಗೆ ಬ್ರಿಟ್ನಿ ಸ್ಪಿಯರ್ಸ್ ಹೆಜ್ಜೆ

Posted By:
Subscribe to Filmibeat Kannada
Britney Spears
ಖ್ಯಾತ ಪಾಪ್ ತಾರೆ ಬ್ರಿಟ್ನಿ ಸ್ಪಿಯರ್ಸ್ ಬಾಲಿವುಡ್ ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ. ಸದಾನಂದನ್ ಲುಕ್ಸಾಮ್ ಎಂಬುವವರು ನಿರ್ಮಿಸುತ್ತಿರುವ ಇನ್ನೂ ಹೆಸರಿಡದ ಹಿಂದಿ ಚಿತ್ರದ ಹಾಡೊಂದನ್ನು ಹಾಡುವ ಜೊತೆಗೆ ಹೆಜ್ಜೆಯನ್ನೂ ಹಾಕಲಿದ್ದಾರೆ.

ಚಿತ್ರದಲ್ಲಿ ಈ ಐಟಂ ಹಾಡು ಪ್ರಮುಖ ಆಕರ್ಷಣೆಯಾಗಿ ನಿಲ್ಲಲಿದೆ. ಇದು ಒಂಥರಾ ಚೌಚೌ ಸಾಂಗ್. ಸ್ವಲ್ಪ ಹಿಂದಿ ಮಧ್ಯೆ ಮಧ್ಯೆ ಇಂಗ್ಲಿಷ್ ಪದಗಳು ಇರುತ್ತವೆ. ಏಕೆಂದರೆ ಈ ಹಾಡು ಎಲ್ಲರಿಗೂ ತಲುಪಬೇಕು ಎಂಬ ಉದ್ದೇಶದಿಂದ ಹೀಗೆ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ ಚಿತ್ರದ ನಿರ್ಮಾಪಕರು.

ಕೇರಳ ಮೂಲದ ಈ ನಿರ್ಮಾಪಕರು ಈ ಹಿಂದೆ 'ಸಾಲ್ಟ್ ಅಂಡ್ ಪೆಪ್ಪರ್' ಎಂಬ ಚಿತ್ರವನ್ನು ನಿರ್ಮಿಸಿದ್ದರು. ಈಗ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದು ಈ ಬಾರಿ ಪಾಪ್ ತಾರೆಯನ್ನು ತೆರೆಗೆ ತರುತ್ತಿರುವುದು ವಿಶೇಷ. ಇದಕ್ಕಾಗಿ ಬ್ರಿಟ್ನಿಗೆ ಭರ್ಜರಿ ಸಂಭಾವನೆಯನ್ನೂ ನೀಡಲಾಗಿದೆಯಂತೆ.

ಸದ್ಯಕ್ಕೆ ಚಿತ್ರದ ಉಳಿದ ವಿವರಗಳನ್ನು ನಿರ್ಮಾಪಕರು ಇನ್ನೂ ಬಹಿರಂಗಪಡಿಸಿಲ್ಲ. ಶೀಘ್ರದಲ್ಲೇ ಎಲ್ಲಾ ವಿವರಗಳನ್ನೂ ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ. ಎರಡು ಗಂಡು ಮಕ್ಕಳ ತಾಯಿಯಾಗಿರುವ ಬ್ರಿಟ್ನಿ ಪಾಪ್ ಲೋಕದಲ್ಲಿ ಇನ್ನೂ ಮಿನುಗುತ್ತಿರುವ ನಕ್ಷತ್ರ. ಈಗ ಬಾಲಿವುಡ್ ನಲ್ಲೂ ಮಿನುಗಲು ಮುಂದಾಗಿದ್ದಾರೆ. (ಏಜೆನ್ಸೀಸ್)

English summary
Pop star Britney Spears has signed for a song-and-dance number in his untitled debut Hindi. The song is an integral part of the film. She sings and dances to the title track of the movie, which is a peppy number and will be shot lavishly says producer Sadanandan.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada