For Quick Alerts
  ALLOW NOTIFICATIONS  
  For Daily Alerts

  ರಾಷ್ಟ್ರಧ್ವಜಕ್ಕೆ ಅಪಮಾನ ಶಾರುಖ್ ಖಾನ್ ಮೇಲೆ ಕೇಸ್

  By Rajendra
  |

  ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಆರೋಪದ ಮೆಲೆ ಬಾಲಿವುಡ್ ನಟ ಕಿಂಗ್ ಖಾನ್ ಶಾರುಖ್ ಖಾನ್ ಮೇಲೆ ಪುಣೆ ಪೋಲೀಸರು ಮಂಗಳವಾರ (ಆ.21) ಕೇಸು ದಾಖಲಿಸಿಕೊಂಡಿದ್ದಾರೆ. ಲೋಕ್ ಜನಶಕ್ತಿ ಪಕ್ಷದ ರವಿ ಬ್ರಹ್ಮಿ ಅವರು ಕೊಟ್ಟ ದೂರಿನ ಮೇರೆಗೆ ಪೊಲೀಸರು ಕೇಸ್ ಬುಕ್ ಮಾಡಿದ್ದಾರೆ.

  ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿರುವ ವಿಡಿಯೋ ಒಂದರಲ್ಲಿ ಶಾರುಖ್ ನಮ್ಮ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ರವಿ ಬ್ರಹ್ಮಿ ಅವರು ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಚತುಶೃಂಗಿ ಪೊಲೀಸರು ಆಗಸ್ಟ್ 14ರಂದು ಎಫ್ ಐಆರ್ ದಾಖಲಿಸಿಕೊಂಡಿದ್ದರು.

  "ರಾಷ್ಟ್ರೀಯ ಗೌರವ ಕಾಯಿದೆ 1971ರ ಉಲ್ಲಂಘನೆ ಪ್ರಕಾರ ಶಾರುಖ್ ಖಾನ್ ಮೇಲೆ ಕೇಸು ದಾಖಲಿಸಿಕೊಳ್ಳಲಾಗಿದೆ. ಆಗಸ್ಟ್ 14ರಂದು ಕೇಸನ್ನು ದಾಖಲಿಸಿಕೊಳ್ಳಲಾಗಿದ್ದು ಮುಂದಿನ ತನಿಖೆಗಾಗಿ ಕೇಸನ್ನು ಮುಂಬೈಗೆ ವರ್ಗಾಯಿಸಲಾಗಿದೆ. ಕೇಸಿಗೆ ಸಂಬಂಧ ಪಟ್ಟ ದಾಖಲೆಗಳಲ್ಲಿ ಕೆಲವು ಫೋಟೋಗಳು ಹಾಗೂ ವಿಡಿಯೋಗಳು ಇವೆ" ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

  ಕಿರುತೆರೆ ತಾರೆ ಹಾಗೂ ರೂಪದರ್ಶಿ ಗೆಹನಾ ವಸಿಷ್ಠ್ ಅವರು ರಾಷ್ಟ್ರಧ್ವಜವನ್ನು ಬಿಕಿನಿಯಾಗಿ ಧರಿಸಿ ಅಪಮಾನ ಮಾಡಿದ್ದರು. ಈ ಬಗ್ಗೆಯೂ ರವಿ ಬ್ರಹ್ಮಿ ಅವರು ಪೊಲೀಸ್ ಠಾಣೆಯಲ್ಲಿ ದೂರಿ ದಾಖಲಿಸಿದ್ದರು. ಈ ಹಿನ್ನೆಯಲ್ಲಿ ಪುಣೆ ಪೊಲೀಸರು ಆಕೆಯನ್ನು ಬಂಧಿಸಿ ಬಳಿಕ ಆಕೆಯನ್ನು ಜಾಮೀನನ ಮೇಲೆ ಬಿಡುಗಡೆ ಮಾಡಿದ ಸುದ್ದಿ ಓದಿಯೇ ಇರುತ್ತೀರಾ. ಈಗ ಶಾರುಖ್ ಕೂಡ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂಬ ಮಾತುಗಳು ಕೇಳಿಬರುತ್ತಿವೆ.

  ಭಾರತ ತಂಡ ವಿಶ್ವಕಪ್ ಕ್ರಿಕೆಟ್ ಗೆದ್ದಾಗ ನಟ ಶಾರುಖ್ ಖಾನ್ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದರು. ಮನೆಯಿಂದ ಹೊರಟ ಅವರ ಕಾರಿಗೆ (MH-02 BP-7927) ಅಳವಡಿಸಿದ್ದ ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಾಡುತ್ತಿತ್ತು. ವಿಡಿಯೋದಲ್ಲಿ ಈ ದೃಶ್ಯಗಳನ್ನು ಸೆರೆಹಿಡಿಯಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಲು ಶಾರುಖ್ ಮ್ಯಾನೇಜರ್ ಮಾಧ್ಯಮಗಳ ಕೈಗೆ ಬಾಯಿಗೆ ಸಿಗುತ್ತಿಲ್ಲ. (ಏಜೆನ್ಸೀಸ್)

  English summary
  A case has been registered against Bollywood superstar Shah Rukh Khan for disrespecting national flag during the celebrations after the Indian cricket team's victory in the World Cup finals, held last year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X