»   » ಥೈಲ್ಯಾಂಡ್ ಸೇರಿದ ಬಾಲಿವುಡ್ಡಿನ ಲವ್ ಬರ್ಡ್ಸ್!

ಥೈಲ್ಯಾಂಡ್ ಸೇರಿದ ಬಾಲಿವುಡ್ಡಿನ ಲವ್ ಬರ್ಡ್ಸ್!

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಭಾರತದಲ್ಲಿ ಮಾಧ್ಯಮದವರ ಕ್ಯಾಮೆರಾ ಕಣ್ಣು ತಪ್ಪಿಸಿಕೊಂಡು ತಿರುಗಾಡುವುದು ಕಷ್ಟ ರಣಬೀರ್ ಹಾಗೂ ಕತ್ರೀನ ಆಗಾಗ ಎಲ್ಲರ ಕಣ್ಣು ತಪ್ಪಿಸಿ ವಿದೇಶಕ್ಕೆ ಹಾರಿ ಎಂಜಾಯ್ ಮಾಡುವುದು ಗುಟ್ಟಾದ ವಿಷಯವೇನಲ್ಲ. ಈಗಂತೂ ಲೈನ್ ಕ್ಲಿಯರ್ ಆಗಿದ್ದು ಮುಂದಿನ ವರ್ಷ ಮಂಗಳವಾದ್ಯದ ಹಿಮ್ಮೇಳದಲ್ಲಿ ಇಬ್ಬರು ಸತಿ ಪತಿಗಳಾಗುತ್ತಾರೆ ಎಂದು ಬಿಟೌನ್ ನಲ್ಲಿ ಟಾಕ್ ಶುರುವಾಗಿದೆ.

ಅದರೆ, ಈ ಬಾರಿ ಮಾತ್ರ ನಾವು ಸುತ್ತಾಟಕ್ಕೆ ತೆರಳಿಲ್ಲ ಥೈಲ್ಯಾಂಡ್ ನಲ್ಲಿ ಲ್ಯಾಂಡ್ ಆಗುತ್ತಿದಂತೆ ರಣಬೀರ್ ಹೇಳಿದ್ದಾನೆ. ಇವರಿಬ್ಬರ 'ಅಜಬ್ ಪ್ರೇಮ್ ಕಿ ಗಜಬ್ ಕಹಾನಿ' ಎಲ್ಲಾ ಪ್ರಮುಖ ಮಾಧ್ಯಮಗಳ ಗಾಸಿಪ್ ಕಾಲಂನ ಟಾಪ್ ಸ್ಟೋರಿ.[ಮದುವೆ ಬಗ್ಗೆ ಸುದ್ದಿ ಇಲ್ಲಿದೆ]

ಸಲ್ಲೂ ಮಿಯಾ ಸಂಗ ಬಿಟ್ಟ ಮೇಲೆ ಒಂಟಿಯಾಗಿದ್ದ ಕತ್ರೀನಾಗೆ ರಣಬೀರ್ ಆಸರೆಯಾಗಿದ್ದು ನಿಜ. ಇಬ್ಬರ ಜೋಡಿಗೆ ರಣಬೀರ್ ಕಪೂರ್ ಮನೆಯಲ್ಲಿ ಆರಂಭದಲ್ಲಿ ವಿರೋಧ ವ್ಯಕ್ತವಾಗಿತ್ತು. ಆದರೆ, ಈಗ ರಣಬೀರ್ ಒತ್ತಾಯದ ಮೇರೆಗೆ ಮದುವೆ ತನಕ ವಿಷಯ ಮುಂದುವರೆದಿದೆಯಂತೆ.

ಕತ್ರೀನಾ ಹಾಗೂ ದೀಪಿಕಾ ಇಬ್ಬರು ರಣಬೀರ್ ಒಲಿಸಿಕೊಳ್ಳಲು ಇನ್ನಿಲ್ಲದ ಸಾಹಸ ಮಾಡಿದ್ದು, ಬಹಿರಂಗವಾಗಿ ಹೇಳಿಕೆಗಳನ್ನು ನೀಡಿದ್ದು ಪರಸ್ಪರ ಕಿತ್ತಾಡಿದ್ದು ಗುಟ್ಟಿನ ವಿಷಯವೇನಲ್ಲ.[ರಣಬೀರ್ ಕತ್ರೀನಾ ಪೀಪೀಪೀ ಢುಂಢುಂ!]

ಈಗ ವಿಷಯಕ್ಕೆ ಬರೋಣ. ಇಬ್ಬರು ಇದು ವೈಯಕ್ತಿಕ ಟ್ರಿಪ್ ಅಲ್ಲ, ಜಗ್ಗು ಜಾಸೂಸ್ ಚಿತ್ರದ ಶೂಟಿಂಗ್ ಗಾಗಿ ಬಂದಿದ್ದೇವೆ ಎಂದಿದ್ದಾರೆ. ಥೈಲಾಂಡ್ ನಲ್ಲಿ ಬಂದಿಳಿದ ರಣಬೀರ್-ಕತ್ರಿನಾ ಚಿತ್ರಗಳು ಇಲ್ಲಿವೆ.

Ranbir Kapoor-Katrina Kaif

ಜಗ್ಗು ಜಾಸೂಸ್ ಅಲ್ಲದೆ ಕತ್ರೀನಾ ಅವರು ಸೈಫ್ ಅಲಿ ಖಾನ್ ಜೊತೆ ಫ್ಯಾಂಟಮ್ ಚಿತ್ರದಲ್ಲಿ ಬ್ಯುಸಿ, ರಣಬೀರ್ ಗೆ ಜಾಕ್ವಲೀನ್ ಹಾಗೂ ಅಲಿಯಾ ಭಟ್ ಜೊತೆ ಇನ್ನೆರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

English summary
Katrina Kaif and Ranbir Kapoor have been speculated to being in a relationship for a really long time, while Ranbir outright denies the special relationship with her, Katrina was a little bit more open and revealed how he is a special person in her life.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada