»   » ಜಿಯಾ ಆತ್ಮಹತ್ಯೆ ದಿನ ಸಿಸಿಟಿವಿಯಲ್ಲಿ ಕಂಡಿದ್ದೇನು?

ಜಿಯಾ ಆತ್ಮಹತ್ಯೆ ದಿನ ಸಿಸಿಟಿವಿಯಲ್ಲಿ ಕಂಡಿದ್ದೇನು?

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ನಟಿ ಜಿಯಾಖಾನ್ ಸಾವನ್ನಪ್ಪಿ ನಾಲ್ಕು ತಿಂಗಳುಗಳ ನಂತರ ಜಿಯಾಖಾನ್ ಆತ್ಮಹತ್ಯೆ ಪ್ರಕರಣಕ್ಕೆ ಅವರ ತಾಯಿ ರಬಿಯಾ ಮತ್ತೆ ಜೀವ ಕೊಟ್ಟಿದ್ದಾರೆ. ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ ಇದು ಕೊಲೆ ಎಂದು ಪ್ರತಿಪಾದಿಸಿರುವ ತಾಯಿ ರಬಿಯಾ ಅಮಿನ್ ಅವರು ಜಿಯಾ ಖಾನ್ ಕಳೇಬರದ ಚಿತ್ರ, ಮರಣೋತ್ತರ ಪರೀಕ್ಷೆ ನಡೆಸಿದ ವಿಧಿ ವಿಜ್ಞಾನ ಸಂಸ್ಥೆ ವರದಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು.

ಅಲ್ಲದೆ ರಬಿಯಾ ಅವರು ಪ್ರಕರಣವನ್ನು ಮತ್ತೊಮ್ಮೆ ಕೋರ್ಟಿಗೆಳೆದಿದ್ದರು. ಇದರಿಂದ ನಟ ಆದಿತ್ಯ ಪಂಚೋಲಿ ಹಾಗೂ ಮಗ ಸೂರಜ್ ಪಂಚೋಲಿಗೆ ನಿದ್ದೆಗೆಟ್ಟಿತ್ತು. ಈಗ ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಎನ್ನಲಾದ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿರುವ ವಿಡಿಯೋ ತುಣುಕುಗಳನ್ನು ರಬಿಯಾ ಅವರು ಹೊರಹಾಕಿದ್ದಾರೆ.

ಪ್ರಮುಖ ಕೋರ್ಟ್ ಮೆಟ್ಟಿಲೇರಿದ್ದು, ಸಿಬಿಐ ತನಿಖೆಗೆ ರಬಿಯಾ ಅವರು ಆಗ್ರಹಿಸಿದ್ದಾರೆ. ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಲ್ಲ ಎಂಬುದಕ್ಕೆ ರಬಿಯಾ ಪುರಾವೆ ಒದಗಿಸಿದ್ದಾರೆ. ಸಿಸಿಟಿವಿ ತುಣುಕುಗಳ ಮೂಲಕ ಜಿಯಾ ಖಾನ್ ಆತ್ಮಹತ್ಯೆ ಮಾಡಿಕೊಂಡ ರಾತ್ರಿ ಆದಿತ್ಯಾ ಪಂಚೋಲಿ ಅವರು ಸಾಗರ್ ಸಂಗೀತ್ ಅಪಾರ್ಟ್ಮೆಂಟ್ ಗೆ ಬಂದು ಹೋಗಿರುವುದು ಖಚಿತವಾಗಿದೆ. ನಂತರ ರಬಿಯಾ ಅವರು ಗಾಬರಿಗೊಂಡು ಮನೆಯೊಳಗೆ ಪ್ರವೇಶಿಸುತ್ತಾರೆ ಎಂದು ಡೈಲಿಭಾಸ್ಕರ್ ವರದಿ ಮಾಡಿದೆ ಮುಂದೇನು ಓದಿ

ಗೊಂದಲದಲ್ಲಿ ಆದಿತ್ಯ ಪಂಚೋಲಿ

ಕಟ್ಟಡದ ಲಾಬಿಯಲ್ಲಿ ನಿಂತು ಯೋಚಿಸುತ್ತಿರುವ ಆದಿತ್ಯ ಪಂಚೋಲಿ, ಅಪಾರ್ಟ್ಮೆಂಟ್ ನಲ್ಲಿರುವ ಜಿಯಾ ಮನೆಯೊಳಗೆ ಪ್ರವೇಶಿಸುವ ಬಗ್ಗೆ ಗೊಂದಲದ ಸ್ಥಿತಿಯಲ್ಲಿರುವುದು ಕಂಡು ಬಂದಿದೆ. ರಬಿಯಾ ಅವರ ಜತೆ ಪಾರ್ಟಿ ಮುಗಿಸಿಕೊಂಡು ಆದಿತ್ಯ ಹಿಂತಿರುಗಿದ್ದ ಎನ್ನಲಾಗಿದೆ.

ಆದಿತ್ಯನಿಗೆ ಗೊಂದಲ ಏಕೆ?

ಲಾಬಿಯಿಂದ ಹೊರಟ ಆದಿತ್ಯ ಏನೋ ಯೋಚನೆಯಲ್ಲಿ ಮುಳುಗಿರುವುದು ಸ್ಪಷ್ಟವಾಗುತ್ತದೆ. ಆದರೆ, ಆದಿತ್ಯ ಯಾಕೆ ಅಷ್ಟು ಗೊಂದಲ ಸ್ಥಿತಿಯಲ್ಲಿದ್ದ. ರಬಿಯಾ ಜಿಯಾ ಇಬ್ಬರು ಫ್ಯಾಮಿಲಿ ಫ್ರೆಂಡ್ ಆದರೂ ಆದಿತ್ಯ ಯಾಕೆ ಮನೆಯೊಳಗೆ ಹೋಗಲು ಅನುಮಾನಿಸಿದ ಎಂಬುದು ತಿಳಿಯಬೇಕಿದೆ.

ಕೋರ್ಟ್ ಮೆಟ್ಟಿಲೇರಿದ ರಬಿಯಾ

ಜಿಯಾಖಾನ್ ಅವರ ಶವದ ಚಿತ್ರಗಳು, ಮರಣೋತ್ತರ ಪರೀಕ್ಷೆ ವರದಿ ಹಿಡಿದುಕೊಂಡು ಕೋರ್ಟ್ ಮೆಟ್ಟಿಲೇರಿರುವ ರಬಿಯಾ ಈಗ ಸಿಸಿಟಿವಿ ಕೆಮೆರಾ ವಿಡಿಯೋ ದೃಶ್ಯಾವಳಿಗಳನ್ನು ಬಹಿರಂಗಗೊಳಿಸಿದ್ದಾರೆ. ಸಿಬಿಐ ತನಿಖೆಗೂ ಆಗ್ರಹಿಸಿದ್ದಾರೆ. ಆದರೆ, ಸಾಕ್ಷಿಗಳನ್ನು ಮಾದ್ಯಮಗಳ ಮುಂದೆ ಮೊದಲಿಗೆ ನೀಡಿದ್ದು ಏಕೆ ಇನ್ನೂ ಸ್ಪಷ್ಟವಾಗಿಲ್ಲ

ಮನೆಯಿಂದ ಹೊರಕ್ಕೆ

ಜಿಯಾಖಾನ್ ಮನೆಯಿಂದ ಆತುರವಾಗಿ ಹೊರಕ್ಕೆ ಹೋಗುತ್ತಿರುವ ನಟ ಆದಿತ್ಯ ಪಂಚೋಲಿ

ಗಾಬರಿಗೊಂಡ ರಬಿಯಾ

ಗಾಬರಿಗೊಂಡು ರಬಿಯಾ ಮನೆಯಿಂದ ಹೊರಕ್ಕೆ ಬಂದು ಸಹಾಯ ಕೇಳಲು ಹೋಗುತ್ತಿದ್ದಾರೆ. ನನ್ನ ಮಗಳು ಸಾವಿಗೆ ಎಂದೂ ಹೆದರಿರಲಿಲ್ಲ. ಆದರೆ, ಪ್ರೀತಿಗೆ ಹೆದರಿದಳು. ಈಗ ಅವಳಿಲ್ಲ. ನನಗೆ ನ್ಯಾಯ ಸಿಗಬೇಕಿದೆ. ಕಾನೂನು ಎಂಬ ಕಾಡಿನಲ್ಲಿ ನಾನು ಒಂಟಿ ಎಂಬುದು ಗೊತ್ತಿದೆ ಎಂದು ರಬಿಯಾ ಹೇಳಿದ್ದಾರೆ.

ಪೀಟಿಷನ್ ನಲ್ಲಿ ಏನಿದೆ?

ಆರೋಪಿಗಳಲ್ಲಿ ಒಬ್ಬರಾದ ಆದಿತ್ಯ ಪಂಚೋಲಿ ಅವರು ಘಟನೆ ನಡೆದ ದಿನ ಜಿಯಾಖಾನ್ ಮನೆಗೆ ಭೇಟಿ ನೀಡಿದ್ದರು. ಸಿಸಿಟಿವಿ ಕೆಮೆರಾ ನೋಡಿ ಗಾಬರಿಗೊಂಡಿದ್ದನ್ನು ನೋಡಬಹುದು. ಮುನ್ನು ಹಾಗೂ ಅಂಜು ಮಹೇಂದ್ರು ಅವರನ್ನು ಮನೆಗೆ ಬಿಟ್ಟ ಮೇಲೂ ಕೂಡಾ ಕಟ್ಟಡ ಬಳಿ ಅನುಮಾನಾಸ್ಪದವಾಗಿ ಓಡಾಡಿದ್ದು ಕಂಡು ಬಂದಿದೆ. ಫೋನ್ ಕಾಲ್ ನಂತರ ಗೊಂದಲಗೊಂಡ ಆದಿತ್ಯ ಜಿಯಾ ಮನೆಗೆ ಹೋಗದೆ ಹಿಂತಿರುಗಿದ್ದಾರೆ. ಮುನ್ನು ಕೆಲ ಹೊತ್ತಿನ ನಂತರ ಬಂದು ಜಿಯಾ ಇನ್ನಿಲ್ಲ ಎಂಬ ಸುದ್ದಿ ಕೊಟ್ಟಿದ್ದಾರೆ.

ಸೂರಜ್ ಯಾಕೆ ಬರಲಿಲ್ಲ

ಆದಿತ್ಯ ಪಂಚೋಲಿ ಮಗ ಸೂರಜ್ ಪಂಚೋಲಿ ಹಾಗೂ ಜಿಯಾ ಖಾನ್ ನಡುವೆ ಪ್ರೇಮ ಸಂಬಂಧ ಇತ್ತು ಎಂದು ಎಲ್ಲರಿಗೂ ಗೊತ್ತಿತ್ತು. ಆದರೆ, ಜಿಯಾ ಸಾವಿನ ಸುದ್ದಿ ಕೇಳಿ ಕೂಡಾ ಸೂರಜ್ ಮನೆಗೆ ಬರಲಿಲ್ಲ. ಜಿಯಾ ಶವದ ಮರಣೋತ್ತರ ಪರೀಕ್ಷೆ ನಂತರ ಆದಿತ್ಯ ಮನೆಗೆ ಬಂದು ತನ್ನ ಮಗ ಸೂರಜ್ ವಿರುದ್ಧ ಹರಿಹಾಯ್ದಿದ್ದಾದರೂ ಏಕೆ ಎಂದು ಪಿಟೀಷನ್ ನಲ್ಲಿ ಪ್ರಶ್ನಿಸಲಾಗಿದೆ.

ಮರಣೋತ್ತರ ಪರೀಕ್ಷೆ ವರದಿ

ಮರಣೋತ್ತರ ಪರೀಕ್ಷೆ ವರದಿಯಲ್ಲೂ ಶವ ಪತ್ತೆಯಾದ ಸ್ಥಿತಿ ಹಾಗೂ ನೇಣು ಬಿಗಿದುಕೊಂಡಾಗ ಆಗಿರುವ ಗಾಯದ ಕಲೆ ಬಗ್ಗೆ ವಿವರಿಸಿ ಇದು ಮೃತ ವ್ಯಕ್ತಿ ಒಬ್ಬರಿಂದ ಹೇಗೆ ಸಾಧ್ಯ. ಬೇರೊಬ್ಬರು ನೇಣು ಬಿಗಿದಿರುವ ಅಥವಾ ಉಸಿರುಗಟ್ಟಿಸಿರುವ ಸಾಧ್ಯತೆ ಯಿದೆ ಎಂದಿದೆ.

ಸೂರಜ್-ಮಂಪರು ಪರೀಕ್ಷೆ

ಜಿಯಾ ಆತ್ಮಹತ್ಯಾ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಸೂರಜ್ ನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ವಿಶೇಷ ಅಧಿಕಾರ ಕೊಡಬೇಕು ಎಂದು ಪೊಲೀಸರು ಕೋರ್ಟ್ ಮೊರೆ ಹೋಗಿದ್ದರು. ಸೂರಜ್ ಅವರದು ಇನ್ನೂ ಚಿಕ್ಕ ವಯಸ್ಸು. ಈ ವಯಸ್ಸಲ್ಲಿ ತಮ್ಮ ಕಕ್ಷಿದಾರನನ್ನು ಮಂಪರು ಪರೀಕ್ಷೆಗೆ ಒಳಪಡಿಸುವುದು ಸರಿಯಿಲ್ಲ ಎಂದು ಅವರ ಪರ ವಕೀಲರು ವಾದಿಸಿದ್ದರು. ಹೀಗಾಗಿ ಸತ್ಯ ಹಾಗೆ ಉಳಿಯಿತು ಎಂದು ರಬಿಯಾ ಹೇಳಿದ್ದಾರೆ.

ಪತ್ರಗಳ ನಿಗೂಢತೆ

ಜೂ. 3 ರಂದು ಜುಹು ಅಪಾರ್ಟ್ಮೆಂಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ 25 ವರ್ಷದ ಜಿಯಾ ಖಾನ್ ಅವರ ಸಾವಿನ ನಿಗೂಢತೆ ಮುಂದುವರೆಯುತ್ತಲೇ ಇದೆ. ಜಿಯಾ ಬರೆದಿದ್ದಾಳೆ ಎನ್ನಲಾದ ಎರಡು ಪತ್ರಗಳ ಕೈಬರಹದ ಸ್ಯಾಂಪಲ್ ಕೋರ್ಟಿಗೆ ನೀಡಿ ಇದರ ವರದಿ ಆಧಾರದ ಮೇಲೆ ನನ್ನ ಕಕ್ಷಿದಾರ ಮೃತಳಿಗೆ ಹಿಂಸೆ ನೀಡಿದ ದಿನಾಂಕ ಹಾಗೂ ಪತ್ರ ಬರೆದಿರುವ ದಿನಾಂಕ ಪರಿಶೀಲಿಸಿ ಎಂದು ಸೂರಜ್ ವಕೀಲರು ವಾದಿಸಿದ್ದು ಪ್ರಕರಣಕ್ಕೆ ಬೇರೆ ತಿರುವು ನೀಡಿತ್ತು

English summary
Rabiya Khan, mother of Jiah Khan has released CCTV images of Aditya Pancholi in her apartment the night Jiah died. Jiah used to reside in the Sagar Sangeet Apartment. The footage was obtained by Dailybhaskar and it shows a disturbed Rabiya Khan entering the building.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada